ಐವರ್ನಾಡು: ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾದ ಐವರ್ನಾಡು ಸಹಕಾರಿ ಸಂಘದ ಅಧ್ಯಕ್ಷ ಎಸ್.ಎನ್.ಮನ್ಮಥ ಅವರಿಗೆ ಆಡಳಿತ ಮಂಡಳಿ ವತಿಯಿಂದ ಸನ್ಮಾನ ಕಾರ್ಯಕ್ರಮವು ಮಾ.22 ರಂದು ಸಹಕಾರಿ ಸಂಘದಲ್ಲಿ ನಡೆಯಿತು.
ಎಸ್.ಎನ್. ಮನ್ಮಥ ಅವರನ್ನು
ಶಾಲು ಹೊದಿಸಿ,ಫಲ,ಪುಷ್ಮ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ಮನ್ಮಥರು ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಯಾಗಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.ಡಿ.ಸಿ.ಸಿ.ಬ್ಯಾಂಕಿನ ಮೇಲ್ವಿಚಾರಕ ಬಾಲಕೃಷ್ಣ ಪುತ್ಯ, ನಿರ್ದೇಶಕ ಸತೀಶ ಎಡಮಲೆ ಮಾತನಾಡಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ವಿಕ್ರಂ ಪೈ,ನಿರ್ದೇಶಕರಾದ ಕುಸುಮಾಧರ ಎಂ.ಸಿ, ಮಹೇಶ್ ಜಬಳೆ, ದೇವಕಿ ಸಿ.ಜಿ, ಭವಾನಿ ಎಂ.ಸಿ,ಕೃಷ್ಣ ಬೆಳ್ಚಪ್ಪಾಡ ಪಿ, ಪುರಂದರ ಎಸ್, ವಾಸುದೇವ ಬಿ.ಕೆ,ಸಹಾಯಕ ಕಾರ್ಯನಿರ್ವಹಣಾಧಿಕಾರಿ ದೀಕ್ಷಿತ್ ಎಂ.ಎಚ್, ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಮುಖ್ಯಕಾರ್ಯನಿರ್ವಹಣಾಧಿಕಾರಿ ರವಿಪ್ರಸಾದ್ ಸಿ.ಕೆ,ಸ್ವಾಗತಿಸಿ,ವಂದಿಸಿದರು.









