ಸುಳ್ಯ:ಎಸ್ಕೆಎಸ್ಎಸ್ಎಫ್ ಗೂನಡ್ಕ ಪೇರಡ್ಕ ಶಾಖೆ ವತಿಯಿಂದ ಮಜ್ಲಿಸುನ್ನೂರ್ ವಾರ್ಷಿಕ ಹಾಗೂ ಸಂಶುಲ್ ಉಲಮಾ ಹಾಗೂ ಅಗಲಿದ ಸಮಸ್ತ ನೇತಾರರ ಅನುಸ್ಮರಣೆ ಹಾಗೂ ಧಾರ್ಮಿಕ ಉಪನ್ಯಾಸ
ಡಿ.25ರಂದು ಸಂಜೆ 6-30ರಿಂದ ಪೇರಡ್ಕ ಮಸೀದಿ ವಠಾರದಲ್ಲಿ ನಡೆಯಲಿದೆ ಎಂದು
ಎಸ್ಕೆಎಸ್ಎಸ್ಎಫ್ ಸುಳ್ಯ ವಲಯ ಸಂಘಟನಾ ಕಾರ್ಯದರ್ಶಿ ಅಬ್ದುಲ್ ಖಾದರ್ ಮೊಟ್ಟೆಂಗಾರ್ ತಿಳಿಸಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು
ಉಸ್ತಾದ್ ನಝೀರ್ ಹುಸೈನ್ ಫೈಝಿ ತೋಡಾರ್ ಮಜ್ಲಿಸುನ್ನೂರ್ ಹಾಗೂ ಮೌಲೂದ್ ಕಾರ್ಯಕ್ರಮದ ನೇತೃತ್ವ ವಹಿಸುವರು.ರಾತ್ರಿ 8-30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು ಪೇರಡ್ಕ ಎಂಜಿಎಂ ಅಧ್ಯಕ್ಷ ಟಿ.ಎಂ. ಶಹೀದ್ ತೆಕ್ಕಿಲ್ ಅಧ್ಯಕ್ಷತೆ ವಹಿಸುವರು.
ಸಯ್ಯದ್ ಎನ್ಪಿಎಂ ಜಲಾಲುದ್ದೀನ್ ತಂಙಳ್ ಅಲ್ ಬುಖಾರಿ ಕುನ್ನುಂಗೈ, ಕೇರಳ ದುವಾಃ ನೇತೃತ್ವ ವಹಿಸುವರು. ಅಹ್ಮದ್ ನಈಮ್ ಫೈಝಿ ಅಲ್ ಮಹಬರಿ ಪೇರಡ್ಕ ಉದ್ಘಾಟನೆ ನೆರವೇರಿಸುವರು.
ಯು.ಕೆ. ಮಹಮ್ಮದ್ ಹನೀಫ್ ನಿಝಾಮಿ ಅಲ್ ಮುರ್ಶಿದಿ ಮೊಗ್ರಾಲ್ ಮುಖ್ಯ ಭಾಷಣ ಮಾಡುವರು. ಬೆಂಗಳೂರಿನ
ಫಾರ್ಮೇಡ್ ಗ್ರೂಪ್ನ ಹಿರಿಯ ಉಪಾಧ್ಯಕ್ಷ ಡಾ. ಉಮ್ಮರ್ ಬೀಜದಕಟ್ಟೆ ಸೇರಿದಂತೆ ಸಾಮಾಜಿಕ, ಧಾರ್ಮಿಕ ಮುಖಂಡರು ಭಾಗವಹಿಸಲಿದ್ದಾರೆ ಎಂದು ಅಬ್ದುಲ್ ಖಾದರ್ ಮೊಟ್ಟೆಂಗಾರ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಅಹ್ಮದ್ ನಈಮ್ ಫೈಝಿ ಅಲ್ ಮಹಬರಿ ಪೇರಡ್ಕ, ಎಸ್ಕೆಎಸ್ಎಸ್ಎಫ್ ಗೂನಡ್ಕ ಪೇರಡ್ಕ ಶಾಖೆಯ ಪ್ರಧಾನ ಕಾರ್ಯದರ್ಶಿ ಹನೀಫ್ ಮೊಟ್ಟೆಂಗಾರ್, ಖಲೀಲ್ ಸಂಟ್ಯಾರ್, ಸಾಧುಮನ್ ತೆಕ್ಕಿಲ್, ಅಹಮ್ಮದ್ ಅಶ್ಪಾಕ್ ಉಪಸ್ಥಿತರಿದ್ದರು.