ಸುಳ್ಯ:2024- 25 ನೇ ಸಾಲಿನ ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟಗೊಂಡಿದ್ದು ಸುಳ್ಯದ ಶ್ರೀ ಶಾರದಾ ಪ್ರೌಢಶಾಲೆಗೆ ಶೇಕಡಾ 100 ಫಲಿತಾಂಶ ದಾಖಲಾಗಿದೆ .ಪರೀಕ್ಷೆಗೆ 34 ವಿದ್ಯಾರ್ಥಿನಿಯರು ಹಾಜರಾಗಿ ಎಲ್ಲರೂ ತೇರ್ಗಡೆ ಹೊಂದಿದ್ದು, ವಿಶಿಷ್ಟ ಶ್ರೇಣಿಯಲ್ಲಿ 03 ವಿದ್ಯಾರ್ಥಿಗಳು,ಪ್ರಥಮ ಶ್ರೇಣಿಯಲ್ಲಿ 21 ವಿದ್ಯಾರ್ಥಿಗಳು, ದ್ವಿತೀಯ ಶ್ರೇಣಿಯಲ್ಲಿ
07 ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ.ವಿಶಿಷ್ಟ ಶ್ರೇಣಿಯಲ್ಲಿ ಹವ್ಯಶ್ರೀ.ಕೆ 606 ಅಂಕಗಳಿಸಿದ್ದು ಇವರು ಕೊಡ್ತಿಲು ಮನೆ ಐವರ್ನಾಡು ದೇವಪ್ಪ ಕೆ ಹಾಗೂ ಹೇಮಾವತಿ ಕೆ ದಂಪತಿ ಪುತ್ರಿಯಾಗಿದ್ದಾರೆ.
ಫಾತಿಮತ್ ಆಶಿಕ 541 ಅಂಕಗಳಿಸಿದ್ದು, ಅಡ್ಕಾರಿನ ಮೊಹಮ್ಮದ್ ಅಶ್ರಫ್ ಜಿ ಹಾಗೂ ಸಾಜಿದ ದಂಪತಿಗಳ ಮಗಳಾಗಿದ್ದಾರೆ.

ಹವ್ಯಶ್ರೀ,ಫಾತಿಮತ್ ಆಶಿಕ,ಗ್ರೀಷ್ಮ ಎಂ ಜಿ
ಗ್ರೀಷ್ಮ ಎಂ ಜಿ 536 ಅಂಕ ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ ಇವರು ಪೆರಾಜೆಯ ಕುಂದಲ್ಪಾಡಿ ಮನೆಯ ಗಿರೀಶ್ ಎಂ ಸಿ ಹಾಗೂ ಸವಿತಾ ಎನ್ ಜಿ ಇವರ ಪುತ್ರಿಯಾಗಿದ್ದಾರೆ.
ಶೇ 100 ಫಲಿತಾಂಶ ದಾಖಲಿಸಿದ ವಿದ್ಯಾರ್ಥಿಗಳನ್ನು ದ.ಕ.ಗೌಡ ವಿದ್ಯಾ ಸಂಘದ ಅಧ್ಯಕ್ಷರಾದ ಧನಂಜಯ ಅಡ್ಪಂಗಾಯ ,ಪ್ರಧಾನ ಕಾರ್ಯದರ್ಶಿ ಡಾ. ರೇವತಿ ನಂದನ್, ಆಡಳಿತ ಮಂಡಳಿ ಸದಸ್ಯರು ಹಾಗೂ ಮುಖ್ಯೋಪಾಧ್ಯಾಯರಾದ ಶ್ರೀಮತಿ ಭಾರತಿ ಪಿ ಹಾಗೂ ಎಲ್ಲಾ ಶಿಕ್ಷಕ ವೃಂದದವರು ಅಭಿನಂದಿಸಿದ್ದಾರೆ.





