ಸುಳ್ಯ: ಸುಳ್ಯದ ಶ್ರೀ ಶಾರದಾ ಪದವಿ ಪೂರ್ವ ಕಾಲೇಜಿನ ನೂತನ ವಿಸ್ತೃತ ಕಟ್ಟಡದಲ್ಲಿ ಪ್ರಾಂಶುಪಾಲರ ಕೊಠಡಿ ಮತ್ತು ಕಚೇರಿ ಯನ್ನು ಉದ್ಘಾಟಿಸಲಾಯಿತು. ಪುರೋಹಿತ್ ಶ್ರೀ ನಾಗರಾಜ ಭಟ್ಟರು ಗಣ ಹೋಮವನ್ನು ನೆರವೇರಿಸಿದರು. ನೂತನ ಕೊಠಡಿಯನ್ನು ದಕ್ಷಿಣ ಕನ್ನಡ ಗೌಡ ವಿದ್ಯಾ ಸಂಘದ ನಿರ್ದೇಶಕರು ಹಾಗೂ

ಪುತ್ತೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಸಂಜೀವ ಮಠಂದೂರು ಉದ್ಘಾಟಿಸಿ ಶುಭ ಹಾರೈಸಿದರು. ದಕ್ಷಿಣ ಕನ್ನಡ ಗೌಡ ವಿದ್ಯಾ ಸಂಘದ ಅಧ್ಯಕ್ಷರಾದ ಧನಂಜಯ ಅಡ್ಪಂಗಾಯ ಸ್ವಾಗತಿಸಿದರು. ದಕ್ಷಿಣ ಕನ್ನಡ ಗೌಡ ವಿದ್ಯಾ ಸಂಘದ ಪ್ರಧಾನ ಕಾರ್ಯದರ್ಶಿ ಡಾ. ರೇವತಿ ನಂದನ್, ಖಜಾಂಚಿ ಎಂ. ಮಾಧವ ಗೌಡ ಹಾಗೂ ನಿರ್ದೇಶಕರಾದ ರಾಮಕೃಷ್ಣ ಯು.ಪಿ, ಜಯರಾಮ ಚಿಲ್ತಡ್ಕ, ಉಮೇಶ್ ಮಳುವೇಲು ಉಪಸಿತರಿದ್ದರು. ಪ್ರಾಂಶುಪಾಲೆ ದಯಮಾಣಿ ಕೆ ವಂದಿಸಿದರು. ಪ್ರೌಢಶಾಲಾ ಮುಖ್ಯೋಪಾಧ್ಯಾಯನಿ ಭಾರತಿ ಪಿ ಹಾಗೂ ಸಂಸ್ಥೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.







