ಸುಳ್ಯ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಸುಳ್ಯ ಮತ್ತು ಸೈಂಟ್ ಜೋಸೆಫ್ ಆಂಗ್ಲಮಾಧ್ಯಮ ವಿದ್ಯಾಸಂಸ್ಥೆಗಳು ಸುಳ್ಯ ಹಾಗೂ ಸೈಂಟ್ ಬ್ರಿಜಿಡ್ಸ್ ಅನುದಾನಿತ ಹಿ.ಪ್ರಾ. ಶಾಲೆ ಸುಳ್ಯ ಸಹಯೋಗದಲ್ಲಿ ಸುಳ್ಯದ ಕೋಡಿಯಾಲಬೈಲು ಮಹಾತ್ಮಗಾಂಧಿ ಮಲ್ನಾಡ್ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆಯ ಕ್ರೀಡಾಂಗಣದಲ್ಲಿ
ನಡೆದ ಸುಳ್ಯ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಕ್ರೀಡಾಕೂಟ ‘ಕ್ರೀಡಾ ವಿಕ್ರಮ – 2023’ ಸಮಾಪನಗೊಂಡಿತು.
ಸಮಗ್ರ ಪ್ರಶಸ್ತಿ:
ಪ್ರಾಥಮಿಕ ಶಾಲಾ ವಿಭಾಗದಲ್ಲಿ ಸುಳ್ಯ ಸೈಂಟ್ ಜೋಸೆಫ್ ಶಾಲೆ ಸಮಗ್ರ ಪ್ರಶಸ್ತಿ ಪಡೆದರೆ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಐವರ್ನಾಡು ದ್ವಿತೀಯ ಸ್ಥಾನ ಪಡೆಯಿತು.
ಪ್ರೌಢಶಾಲಾ 8ನೇ ತರಗತಿ ವಿಭಾಗದಲ್ಲಿ ಬಾಳಿಲ ವಿದ್ಯಾಬೋಧಿನಿ ಪ್ರೌಢಶಾಲೆ ಸಮಗ್ರ ಪ್ರಶಸ್ತಿ ಪಡೆದರೆ, ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಬಳ್ಪ ದ್ವಿತೀಯ ಸ್ಥಾನ ಪಡೆಯಿತು.
ಪ್ರೌಢ ಶಾಲಾ ವಿಭಾಗದಲ್ಲಿ ಸರಕಾರಿ ಪ್ರೌಢ ಶಾಲೆ ಎಣ್ಮೂರು ಸಮಗ್ರ ಪ್ರಶಸ್ತಿ ಪಡೆದರೆ ಎನ್ಎಂಪಿಯುಸಿ ಅರಂತೋಡು ದ್ವಿತೀಯ ಸ್ಥಾನ ಪಡೆಯಿತು.
ತಂಡ ಪ್ರಶಸ್ತಿ:
ಪ್ರಾಥಮಿಕ ಶಾಲಾ ವಿಭಾಗದಲ್ಲಿ ಬಾಲಕರ ವಿಭಾಗದಲ್ಲಿ ಸೈಂಟ್ ಜೋಸೆಫ್ ಸುಳ್ಯ ಪ್ರಥಮ ಹಾಗೂ ವಿದ್ಯಾಬೋಧಿನಿ ಬಾಳಿಲ ದ್ವಿತೀಯ ಸ್ಥಾನ ಪಡೆಯಿತು.ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನ ಸ.ಉ.ಹಿ.ಪ್ರಾ.ಶಾಲೆ ಐವರ್ನಾಡು ಹಾಗೂ ಸೈಂಟ್ ಜೋಸೆಫ್ ಸುಳ್ಯ ಪಡೆಯಿತು. ಸೈಂಟ್ ಬ್ರಿಜಿಡ್ಸ್ ಶಾಲೆ ದ್ವಿತೀಯ ಸ್ಥಾನ ಪಡೆಯಿತು.
ಪ್ರೌಢಶಾಲಾ ವಿಭಾಗದ 8ನೇ ತರಗತಿ ಬಾಲಕರ ವಿಭಾಗದಲ್ಲಿ ಸ.ಉ.ಹಿ.ಪ್ರಾ.ಶಾಲೆ ಬಳ್ಪ ಪ್ರಥಮ ಹಾಗೂ ಬಾಳಿಲ ವಿದ್ಯಾಬೊಧಿನಿ ಪ್ರೌಢಶಾಲೆ ದ್ವಿತೀಯ ಸ್ಥಾನ ಪಡೆಯಿತು. ಬಾಲಕಿಯರ ವಿಭಾಗದಲ್ಲಿ ಬಾಳಿಲ ವಿದ್ಯಬೋಧಿನಿ ಪ್ರೌಢ ಶಾಲೆ ಪ್ರಥಮ ಸರಕಾರಿ ಪ್ರೌಢಶಾಲೆ ಎಣ್ಮೂರು ದ್ವಿತೀಯ ಸ್ಥಾನ ಪಡೆಯಿತು. ಪ್ರೌಢಶಾಲಾ ಬಾಲಕರ ವಿಭಾಗದಲ್ಲಿ ಸರಕಾರಿ ಪ್ರೌಢ ಶಾಲೆ ಆಲೆಟ್ಟಿ ಪ್ರಥಮ ಹಾಗೂ ಸರಕಾರಿ ಪ್ರೌಢ ಶಾಲೆ ಎಣ್ಮೂರು ದ್ವಿತೀಯ ಸ್ಥಾನ ಪಡೆಯಿತು. ಬಾಲಕಿಯರ ವಿಭಾಗದಲ್ಲಿ ಎನ್ಎಂಪಿಯುಸಿ ಅರಂತೋಡು ಪ್ರಥಮ ಹಾಗೂ ದ್ವಿತೀಯ ಸ್ಥಾನವನ್ನು ಸರಕಾರಿ ಪ್ರೌಢಶಾಲೆ ಎಣ್ಮೂರು ಹಾಗೂ ಸರಕಾರಿ ಪ್ರೌಢಶಾಲೆ ಕುಕ್ಕುಜಡ್ಕ ಪಡೆದುಕೊಂಡಿದೆ.
ವೈಯುಕ್ತಿಕ ವಿಭಾಗದ ಪ್ರಶಸ್ತಿ:
ಪ್ರಾಥಮಿಕ ಶಾಲಾ ವಿಭಾಗದಲ್ಲಿ ರೋಟರಿ ಶಾಲೆಯ ತುಷಾರ್ ಹಾಗೂ ಸ.ಹಿ.ಪ್ರಾ.ಶಾಲೆಯ ಗಗನ್ ಎ ಬಾಲಕಿಯರ ವಿಭಾಗದಲ್ಲಿ ಸುಳ್ಯ ಸೈಂಟ್ ಜೋಸೆಫ್ ಶಾಲೆಯ ಸಿಂಚನ ಡಿ.ಕೆ ವೈಯುಕ್ತಿಕ ಪ್ರಶಸ್ತಿ ಪಡೆದರು.
ಪ್ರೌಢ ಶಾಲೆ 8ನೇ ತರಗತಿ ವಿಭಾಗದ ಬಾಲಕರ ವಿಭಾಗದಲ್ಲಿ ಸ.ಮಾ.ಹಿ.ಪ್ರಾ ಶಾಲೆ ಬಳ್ಪದ ಪ್ರದೀಪ್, ಬಾಲಕಿಯರ ವಿಭಾಗದಲ್ಲಿ ಬಾಳಿಲ ವಿದ್ಯಾಬೋಧಿನಿ ಪ್ರೌಢ ಶಾಲೆಯ ಆಶಾಲತಾ ಹಾಗೂ ಕೆಪಿಎಸ್ ಬೆಳ್ಳಾರೆಯ ತನ್ವಿ ವೈಯುಕ್ತಿಕ ಪ್ರಶಸ್ತಿ ಪಡೆದರು.
ಪ್ರೌಢ ಶಾಲಾ ವಿಭಾಗದ ಬಾಲಕರ ವಿಭಾಗದಲ್ಲಿ ಎಣ್ಮೂರು ಸರಕಾರಿ ಪ್ರೌಢ ಶಾಲೆಯ ಮಿಲನ್, ಬಾಳಿಲ ವಿದ್ಯಾಬೋಧಿನಿ ಪ್ರೌಢಶಾಲೆಯ ಗಗನ್, ಬಾಲಕಿಯರ ವಿಭಾಗದಲ್ಲಿ ಕುಕ್ಕುಜಡ್ಕ ಪ್ರೌಢ ಶಾಲೆಯ ಜಾನವಿ
ವೈಯಕ್ತಿಕ ಪ್ರಶಸ್ತಿ ಪಡೆದುಕೊಂಡರು.