ಸುಳ್ಯ:2022-23ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯ ಫಲಿತಾಂಶದಲ್ಲಿ ಮರು ಮೌಲ್ಯ ಮಾಪನದಲ್ಲಿ ರೋಟರಿ ವಿದ್ಯಾ ಸಂಸ್ಥೆಯ ವಿದ್ಯಾರ್ಥಿ ಸಾನ್ವಿಗೆ ಹೆಚ್ಚುವರಿ 20 ಅಂಕಗಳು ಲಭಿಸಿದೆ. ಈಕೆಗೆ 10ನೇ ತರಗತಿಯಲ್ಲಿ 531 ಅಂಕಗಳು ಪಡೆದು ಡಿಸ್ಟಿಂಕ್ಷನ್ಗೆ ಒಂದು ಅಂಕ ಕಡಿಮೆ ಯಾಗಿತ್ತು.ಹಿಂದಿ ಭಾಷೆಯ ಉತ್ತರ ಪತ್ರಿಕೆಯಲ್ಲಿ ನಿರೀಕ್ಷಿತ ಅಂಕ ಲಭಿಸದ ಕಾರಣ ಮರುಮೌಲ್ಯ ಮಾಪನಕ್ಕೆ ಅರ್ಜಿ ಹಾಕಿದ್ದಳು. ಇದರಲ್ಲಿ 20 ಅಂಕಗಳನ್ನು ಪಡೆದು , ಒಟ್ಟು 551 ಅಂಕಗಳೊಂದಿಗೆ ಡಿಸ್ಟಿಂಕ್ಷನ್ ಪಡೆದಿರುತ್ತಾಳೆ. ಸಾನ್ವಿ ಪತ್ರಕರ್ತ ಗಿರೀಶ್ ಅಡ್ಪಂಗಾಯ ಹಾಗೂ ಗ್ರಂಥಪಾಲಕಿ ವೀಣಾ ದಂಪತಿಗಳ ಪುತ್ರಿ.
ದಿ ಸುಳ್ಯ ಮಿರರ್ ಸುದ್ದಿಜಾಲ
ದಿ ಸುಳ್ಯ ಮಿರರ್ ಸುದ್ದಿಜಾಲ. ಇದು ನಿಮ್ಮೂರಿನ ಪ್ರತಿಬಿಂಬ. ನಮಗೆ ನ್ಯೂಸ್ ಕಳುಹಿಸಲು thesulliamirror@gmail.com ಗೆ ಇಮೇಲ್ ಮಾಡಿರಿ.
previous post