ಸುಳ್ಯ:ಮುಸ್ಲಿಂ ಸೆಂಟ್ರಲ್ ಕಮಿಟಿ ವತಿಯಿಂದ ಸುಳ್ಯ ಕಾಂಗ್ರೆಸ್ ಅಭ್ಯರ್ಥಿ ಜಿ ಕೃಷ್ಣಪ್ಪ ರಾಮಕುಂಜ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ನೆರವೇರಿಸಿ ಮಾತನಾಡಿದ ಮುಸ್ಲಿಂ ಸೆಂಟ್ರಲ್ ಕಮಿಟಿ ಮತ್ತು ಉಡುಪಿ ಅಧ್ಯಕ್ಷ ಹಾಜಿ ಕೆಎಸ್ ಮಹಮ್ಮದ್ ಮಸೂದ್ ‘ ಸುಳ್ಯವನ್ನು ಅಭಿವೃದ್ಧಿಪಡಿಸಲು
ಜಿ.ಕೃಷ್ಣಪ್ಪ ಅವರಂತಹಾ ವಿದ್ಯಾವಂತ ಮತ್ತು ಅನುಭವಿ ಅಭ್ಯರ್ಥಿಗಳಿಂದ ಸಾಧ್ಯ ಎಂದರು. ಚುನಾವಣಾ ಪ್ರಚಾರಕ್ಕಾಗಿ ಸುಳ್ಯಕ್ಕೆ ಆಗಮಿಸಿದ ಸಂದರ್ಭದಲ್ಲಿ ಅವರು ಸನ್ಮಾನ ನಡೆಸಿದರು. ಕೆಪಿಸಿಸಿ ಮಾಧ್ಯಮ ವಕ್ತಾರ ಟಿ. ಎಂ ಶಹೀದ್ ತೆಕ್ಕಿಲ್, ಮುಸ್ಲಿಂ ಸೆಂಟ್ರಲ್ ಕಮಿಟಿ ಸಂಘಟನಾ ಕಾರ್ಯದರ್ಶಿ ಎಸ್. ಸಂಶುದ್ದೀನ್, ಕೆಪಿಸಿಸಿ ಅಲ್ಪ ಸಂಖ್ಯಾತರ ವಿಭಾಗ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ. ಎಂ. ಮುಸ್ತಫ, ಸೆಂಟ್ರಲ್ ಕಮಿಟಿ ಪದಾಧಿಕಾರಿಗಳಾದ ಇಬ್ರಾಹಿಂ ಕೊಡಿಚ್ಚಾಲ್, ಹನೀಫ ಹಾಜಿ, ಸಿ. ಎಂ. ಹನೀಫ್, ಕಾಂಗ್ರೆಸ್ ಧುರೀಣರುಗಳಾದ ಇಸಾಕ್ ಹಾಜಿ ಪಾಜಪ್ಪಳ್ಳ, ಪಿ. ಎ. ಮಹಮ್ಮದ್, ಮೊದಲಾದವರು ಉಪಸ್ಥಿತರಿದ್ದರು