ಸಂಪಾಜೆ:ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಸಹಕಾರಿ ಅಭಿವೃದ್ಧಿ ರಂಗ ಬಹುಮತ ಗಳಿಸಿದೆ. 12 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಸಹಕಾರಿ ಅಭಿವೃದ್ಧಿ ರಂಗ 9 ಸ್ಥಾನಗಳಲ್ಲಿ ಜಯ ಗಳಿಸಿತು. ಬಿಜೆಪಿ ಬೆಂಬಲಿತ ಸಮನ್ವಯ ಸಹಕಾರ ಬಳಗ 2 ಸ್ಥಾನಗಳಲ್ಲಿ ಜಯಗಳಿಸಿದೆ. ಒಬ್ಬರು ಸ್ವತಂತ್ರ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.
ಸಾಮಾನ್ಯ ಕ್ಷೇತ್ರದಿಂದ
ಕಾಂಗ್ರೆಸ್ ಬೆಂಬಲಿತ ಸಹಕಾರಿ ಅಭಿವೃದ್ಧಿ ರಂಗದ ಸೋಮಶೇಖರ ಕೊಯಿಂಗಾಜೆ, ಮಹಮ್ಮದ್ ಕುಂಞಿ ಗೂನಡ್ಕ, ಜಾನಿ ಕೆ.ಪಿ, ಜ್ಙಾನಶೀಲನ್(ವಿ.ರಾಜು ನೆಲ್ಲಿಕುಮೇರಿ) ಗೆಲುವು ಸಾಧಿಸಿದರು.
ಬಿಜೆಪಿ ಬೆಂಬಲಿತ ಸಮನ್ವಯ ಸಹಕಾರಿ ಬಳಗದ ಗಣಪತಿ ಭಟ್.ಪಿ.ಎನ್ ಗೆಲುವು ಸಾಧಿಸಿದರೆ, ಸಾಮಾನ್ಯ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಜಿ.ಕೆ.ಹಮೀದ್ ಗೂನಡ್ಕ ಜಯ ಗಳಿಸಿದರು.
ಸಹಕಾರಿ ಅಭಿವೃದ್ಧಿ ರಂಗದ ಸಂಜೀವ ಪೂಜಾರಿ ಮತ್ತು ಜ್ಙಾನಶೀಲನ್(ವಿ.ರಾಜು ನೆಲ್ಲಿಕುಮೇರಿ) ಅವರಿಗೆ ತಲಾ 264 ಮತಗಳು ಬಂದವು. ಬಳಿಕ ಅದೃಷ್ಠ ಚೀಟಿ ಎತ್ತುವ ಮೂಲಕ ಜ್ಞಾನಶೀಲನ್ ವಿಜೇತರಾದರು.
ಸಮನ್ವಯ ಸಹಕಾರಿ ಬಳಗದ ಎಸ್.ಪಿ.ಲೋಕನಾಥ್ ಹಾಗೂ ಶ್ರೀಧರ ಬಿ.ಅವರಿಗೂ ತಲಾ 263 ಮತಗಳು ಬಂದಿತ್ತು.
ಹಿಂದುಳಿದ ವರ್ಗ ಪ್ರವರ್ಗ ಎ ಮೀಸಲು ಕ್ಷೇತ್ರದಿಂದ ಸಹಕಾರಿ ಅಭಿವೃದ್ಧಿ ರಂಗದ ಅಭ್ಯರ್ಥಿ ಅಬೂಸಾಲಿ ಪಿ.ಕೆ ಜಯ ಗಳಿಸಿದರು.
ಹಿಂದುಳಿದ ವರ್ಗ ಪ್ರವರ್ಗ ಬಿ ಮೀಸಲು ಕ್ಷೇತ್ರದಿಂದ ಸಹಕಾರಿ ಅಭಿವೃದ್ಧಿ ರಂಗದ ಅಭ್ಯರ್ಥಿ ಜಗದೀಶ ರೈ ಕೆ.ಆರ್ ಜಯ ಗಳಿಸಿದರು.
ಪರಿಶಿಷ್ಟ ಜಾತಿ ಮೀಸಲು ಸ್ಥಾನದಿಂದ ಸಹಕಾರಿ ಅಭಿವೃದ್ಧಿ ರಂಗದಿಂದ ಉಷಾ ರಾಮ ನಾಯ್ಕ ಜಯ ಗಳಿಸಿದರು.
ಪರಿಶಿಷ್ಟ ಪಂಗಡ ಮೀಸಲು ಸ್ಥಾನದಿಂದ ಸಮನ್ವಯ ಸಹಕಾರಿ ಬಳಗದ ಜಗದೀಶ ಜಿ.ವಿ. ಜಯಗಳಿಸಿದರು.
ಮಹಿಳಾ ಮೀಸಲು ಕ್ಷೇತ್ರದಿಂದ ಸಹಕಾರಿ ಅಭಿವೃದ್ಧಿ ರಂಗದ ಯಮುನಾ ಬಿ.ಎಸ್, ಪ್ರಮೀಳಾ ಪೆಲ್ತಡ್ಕ ಜಯಭೇರಿ ಭಾರಿಸಿದರು.
ಮಹಿಳಾ ಮೀಸಲು ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಗ್ರಾ.ಪಂ.ಅಧ್ಯಕ್ಷೆ ಸುಮತಿ ಶಕ್ತಿವೇಲು ಪರಾಭವಗೊಂಡರು.