ಸಂಪಾಜೆ: ಸಂಪಾಜೆ ಪ್ರಾಥಮಿಕ ಕೃಷಿಪತ್ತಿನ ಸಹಾಕರಿ ಸಂಘದ ಆಡಳಿತ ಮಂಡಳಿಗೆ ಡಿ.23ರಂದು ಚುನಾವಣೆ ನಡೆಯಲಿದೆ. ಡಿ.11ರಿಂದ ನಾಮಪತ್ರ ಸಲ್ಲಿಕೆ ಆರಂಭಗೊಂಡಿದೆ. ಮೊದಲ ದಿನ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ. ಡಿ.12ರಂದು 12 ನಾಮಪತ್ರ ಸಲ್ಲಿಸಲಾಗಿದೆ. ಸಾಮಾನ್ಯ ಕ್ಷೇತ್ರಕ್ಕೆ 9, ಮಹಿಳಾ ಕ್ಷೇತ್ರ, ಹಿಂದುಳಿದ ವರ್ಗ ಪ್ರವರ್ಗ ಬಿ ಹಾಗೂ ಪರಿಶಿಷ್ಟ ಪಂಗಡ ತಲಾ ಒಂದು ನಾಮಪತ್ರ ಸಲ್ಲಿಸಲಾಗಿದೆ. ಸಾಮಾನ್ಯ ಕ್ಷೇತ್ರದಿಂದ
ಆನಂದ ಪಿ.ಎಲ್, ಗಣಪತಿ ಭಟ್ ಪಿ.ಎನ್, ಲೋಕನಾಥ ಎಸ್.ಪಿ, ಶಾಹುಲ್ ಹಮೀದ್ ಜಿ.ಕೆ, ಅಬ್ದುಲ್ ಹನೀಫ್ ಎ.ಕೆ, ಸದಾನಂದ ರೈ ಕೆ.ಎಂ, ಮನೀಶ್ ಆರ್.ಜಿ, ಶ್ರೀಧರ ಬಿ, ಜಗದೀಶ ಕೆ.ಪಿ, ಮಹಿಳಾ ಕ್ಷೇತ್ರದಿಂದ ಸುಮತಿ ಎಸ್, ಹಿಂದುಳಿದ ಪ್ರವರ್ಗ ಬಿ ಕ್ಷೇತ್ರದಿಂದ ವರದರಾಜ ಎಸ್.ಟಿ, ಪರಿಶಿಷ್ಟ ಪಂಗಡ ವಿಭಾಗದಿಂದ ಜಗದೀಶ ಜಿ.ವಿ ನಾಮಪತ್ರ ಸಲ್ಲಿಸಿದ್ದಾರೆ.
ಸಂಘದ ಆಡಳಿತ ಮಂಡಳಿಯ 12 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು ಸಾಮಾನ್ಯ ವರ್ಗಕ್ಕೆ 6, ಪರಿಶಿಷ್ಟ ಜಾತಿ -1, ಪರಿಶಿಷ್ಟ ಪಂಗಡ -1, ಮಹಿಳೆ-2, ಹಿಂದುಳಿದ ವರ್ಗ 2 ಸ್ಥಾನಗಳು ಮೀಸಲಾಗಿದೆ.
ನಾಮಪತ್ರ ಸಲ್ಲಿಸಲು ಡಿ.15 ಕೊನೆಯ ದಿನವಾಗಿದೆ. ಡಿ.16 ನಾಮಪತ್ರ ಪರಿಶೀಲನೆ ನಡೆಯಲಿದೆ. ನಾಮಪತ್ರ ಹಿಂಪಡೆಯಲು ಡಿ.17 ಕೊನೆಯ ದಿನವಾಗಿದೆ. ಡಿ.23ರಂದು ಚುನಾವಣೆ ನಡೆಯಲಿದ್ದು ಮತದಾನದ ಬಳಿಕ ಮತ ಎಣಿಕೆ ನಡೆಯಲಿದೆ. ಚುನಾವಣಾಧಿಕಾರಿ ಸಹಕಾರ ಇಲಾಖೆಯ ಅಧಿಕಾರಿ ಶಿವಲಿಂಗಯ್ಯ ಹಾಗೂ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೀರೇಂದ್ರ ಕುಮಾರ್ ಜೈನ್ ನಾಮಪತ್ರ ಸ್ವೀಕರಿಸಿದರು.