ಸಂಪಾಜೆ:ಸಂಪಾಜೆ ಗ್ರಾಮ ಪಂಚಾಯತ್ ಸಾಮಾನ್ಯ ಸಭೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಮತಿ ಶಕ್ತಿವೇಲು ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ವರದಿ ಹಾಗೂ ಲೆಕ್ಕ ಪತ್ರವನ್ನು ಪಂಚಾಯತ್ ಅಭಿವೃದ್ದಿ ಅಧಿಕಾರಿ ಸರಿತಾ ಡಿಸೋಜಾ ಮಂಡಿಸಿದರು. ಸರಕಾರದಿಂದ ಬಂದ ಸುತ್ತೋಲೆ ಓದಲಾಯಿತು. ಸಾರ್ವಜನಿಕ ಅರ್ಜಿ ಪರಿಶೀಲಿಸಲಾಯಿತು. ವಿವಿಧ ಅಭಿವೃದ್ದಿ
ಕಾಮಗಾರಿಗಳ ಕುರಿತು ಚರ್ಚೆ ನಡೆಯಿತು. ರಸ್ತೆ ಕಾಂಕ್ರಿಟ್ ಕಾಮಗಾರಿ ಆರಂಭ ಮಾಡುವ ಬಗ್ಗೆ ಕಾಮಗಾರಿ ಆದೇಶ ನೀಡಲು ತೀರ್ಮಾನಿಸಲಾಯಿತು. ಸ್ವಚ್ಚತೆ ಬಗ್ಗೆ ವಿಶೇಷ ಗಮನ ಹರಿಸಲು ಅಭಿವೃದ್ದಿ ಅಧಿಕಾರಿಗೆ ಸೂಚಿಸಲಾಯಿತು. ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ಅಭಿವೃದ್ದಿ ಕಾರ್ಯಕ್ರಮಗಳಿಗೆ ಆಡಳಿತ ಮಂಜೂರಾತಿ ನೀಡಲಾಯಿತು.
ಸಂಪಾಜೆ ಭಾಗದ ಜನರು ದಿನನಿತ್ಯ ಓಡಾಡುವ ಸುಳ್ಯ ಕೊಯನಾಡ್ ಬಸ್ ಸಂಚಾರ ಇಲ್ಲದೆ ಕಳೆದ ದಿನಗಳಿಂದ ನಿತ್ಯ ಪ್ರಯಾಣ ಮಾಡುವ ವಿದ್ಯಾರ್ಥಿಗಳು, ಸಾರ್ವಜನಿಕರು, ಕೂಲಿ ಕಾರ್ಮಿಕರು ಬಹಳಷ್ಟು ಕಷ್ಟ ಅನುಭವಿಸುತ್ತಿದ್ದು ಈ ಬಗ್ಗೆ ಕೂಡಲೇ ಕ್ರಮ ಕೈಗೊಂಡು ಬಸ್ ವ್ಯವಸ್ಥೆ ಸರಿಪಡಿಸದಿದ್ದರೆ ಗ್ರಾಮ ಪಂಚಾಯತ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಯಿತು.
ಕಸ್ತೂರಿ ರಂಗನ್ ವರದಿ ಕೈ ಬಿಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಗಮನಕ್ಕೆ ತರಲು ಜಿಲ್ಲಾಧಿಕಾರಿ ಗಮನಕ್ಕೆ ತರಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ಉಪಾಧ್ಯಕ್ಷ ಎಸ್. ಕೆ. ಹನೀಫ್ ಸದಸ್ಯರಾ್ ಸೋಮಶೇಖರ್ ಕೆ. ಆರ್. ಜಿ. ಕೆ. ಹಮೀದ್ ಗೂನಡ್ಕ, ಜಗದೀಶ್ ರೈ, ಸುಂದರಿ, ವಿಮಲ, ಅಬೂಸಾಲಿ, ರಜನಿ ಶರತ್, ಸವಾದ್,ವಿಜಯ, ಸುಶೀಲ, ಅನುಪಮ ಉಪಸ್ಥಿತರಿದ್ದರು. ಗೋಪಮ್ಮ ಹಾಗೂ ಮಧುರ ನಡಾವಳಿ ದಾಖಲಿಸಿದರು