ಸಂಪಾಜೆ:ಸಂಪಾಜೆ ಗ್ರಾಮ ಪಂಚಾಯತ್ ಸಾಮಾನ್ಯ ಸಭೆ
ಅಧ್ಯಕ್ಷೆ ಸುಮತಿ ಶಕ್ತಿವೇಲು ಅಧ್ಯಕ್ಷತೆಯಲ್ಲಿ ನಡೆಯಿತು.
ಅಭಿವೃದ್ಧಿ ಅಧಿಕಾರಿ ಸರಿತಾ ಡಿಸೋಜ. ಸ್ವಾಗತಿಸಿ ವರದಿ ವಾಚಿಸಿದರು, ಕಾರ್ಯದರ್ಶಿ ಸುಂದರ ಸಾರ್ವಜನಿಕರ ಅರ್ಜಿ ಓದಿದರು.
ಪಂಚಾಯತ್ ರಾಜ್ ಇಲಾಖೆಯಲ್ಲಿ ಇಂಜಿನಿಯರ್ ಕೊರತೆ ಇದ್ದು ಪಂಚಾಯತ್ ಕೆಲಸಗಳು
ವಿಳಂಬ ಆಗುತ್ತಿದೆ. ಶೀಘ್ರ ಸರ್ಕಾರ ಇಂಜಿನಿಯರ್ ನೇಮಕ ಮಾಡಬೇಕು ಈ ಬಗ್ಗೆ ಸಂಬಂಧ ಪಟ್ಟವರಿಗೆ ಮನವಿ ಕೊಡಲು ನಿರ್ಣಯಿಸಲಾಯಿತು.
ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬಾಕಿ ಇರುವ ಎಲ್ಲಾ ರಸ್ತೆ ಚರಂಡಿ ಕಾಮಗಾರಿ ಮಾಡಲು, ಬೀದಿ ದೀಪಗಳ ದುರಸ್ತಿ ಮಾಡಲು ತೀರ್ಮಾನಿಸಲಾಯಿತು. ಸೆ.1 ರಂದು ಸ್ವಚ್ಛತಾ ಕಾರ್ಯ ಮಾಡಲು,
ರಾಜರಾಂಪುರ ಶಾಲಾ ಆವರಣ, ಆಲಿ ಗುಡ್ಡೆ ರಸ್ತೆ ಕಾಂಕ್ರಿಟ್, ಮೂಲೆ ದರ್ಕಾಸ್ ರಸ್ತೆ ಕಾಂಕ್ರಿಟ್ ಕಾಮಗಾರಿ ಉದ್ಯೋಗ ಖಾತ್ರಿ ಯೋಜನೆಯಡಿ ಮಾಡಲು ತೀರ್ಮಾನಿಸಲಾಯಿತು.
ಪ್ಲಾಸ್ಟಿಕ್ ಬಳಕೆ ವಿರುದ್ಧ ಜಾಗೃತಿ ಮೂಡಿಸಲು, ಶಾಲಾ ಪರಿಸರದಲ್ಲಿ ಗುಟ್ಕಾ ನಿಷೇಧ ಜಾರಿ, ಸಾರ್ವಜನಿಕ ಸ್ಥಳದಲ್ಲಿ ಕಸ ಎಸೆಯುವುದಕ್ಕೆ ಕ್ರಮಕ್ಕೆ ನಿರ್ಧರಿಸಲಾಯಿತು.
ಸಭೆಯಲ್ಲಿ ಉಪಾಧ್ಯಕ್ಷ ಎಸ್. ಕೆ ಹನೀಫ್ ಸದಸ್ಯರಾದ ಜಗದೀಶ್ ರೈ, ಜಿ ಕೆ ಹಮೀದ್ ಗೂನಡ್ಕ, ಸೋಮಶೇಖರ ಕೊಯಿಂಗಾಜೆ, ಸುಂದರಿ ಮುಂಡಡ್ಕ, ವಿಮಲಾ ಪ್ರಸಾದ್ ಲಿಸ್ಸಿ ಮೊನಾಲಿಸಾ, ಅನುಪಮ ,ಸುಶೀಲ, ಶೌವಾದ್ ಗೂನಡ್ಕ, ರಜನಿ ಶರತ್, ವಿಜಯ ಉಪಸ್ತಿತರಿದ್ದರು.












