ಬೆಂಗಳೂರು: ಸಂಪಾಜೆ ಗ್ರಾಮ ಪಂಚಾಯತ್ನ ಅಭಿವೃದ್ಧಿ ಕಾರ್ಯಕ್ರಮಗಳಿಗೆ 10 ಕೋಟಿ ವಿಶೇಷ ಅನುದಾನ ನೀಡುವಂತೆ ಆಗ್ರಹಿಸಿ ಸಂಪಾಜೆಯ ಜನಪ್ರತಿನಿಧಿಗಳು ಹಾಗೂ ಪ್ರಮುಖರ ನಿಯೋಗ
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ಕೆಪಿಸಿಸಿ ವಕ್ತಾರ ಟಿ. ಎಂ ಶಾಹಿದ್ ತೆಕ್ಕಿಲ್ ಅವರ ನೇತೃತ್ವದ ನಿಯೋಗದಲ್ಲಿ
ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಮತಿ ಶಕ್ತಿವೇಲು, ಮಾಜಿ ಅಧ್ಯಕ್ಷ ಜಿ. ಕೆ. ಹಮೀದ್ ಗೂನಡ್ಕ, ಜಗದೀಶ್ ರೈ, ಸುಂದರಿ ಮುಂಡಡ್ಕ, ಉಪಾಧ್ಯಕ್ಷರಾದ ಎಸ್. ಕೆ. ಹನೀಫ್, ಪಾರ್ವರ್ಡ್ ಗ್ರೂಪ್ ನ ಉಪಾಧ್ಯಕ್ಷ ಡಾ. ಉಮ್ಮರ್ ಬೀಜದಕಟ್ಟೆ, ಸಲೀಂ ಪೆರುಂಗೋಡಿ, ಹಾರಿಸ್ ಪಿ. ಎಂ, ಅಯ್ಯುಬ್ ಗೂನಡ್ಕ, ಮಂಜುನಾಥ್, ಉನೈಸ್ ಗೂನಡ್ಕ, ಹನೀಫ್ ಕಲ್ಲುಗುಂಡಿ, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಸಿದ್ದಿಕ್ ಕೊಕ್ಕೋ, ಮೊದಲದವರು ಉಪಸ್ಥಿತರಿದ್ದರು.
ಸಂಪಾಜೆ ಗ್ರಾಮದ ಮೂಲಭೂತ ಸಮಸ್ಯೆಗಳು ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಆಗಿರುವ ಹಾನಿ ಹಾಗೂ ಸುಳ್ಯ ತಾಲೂಕಿಗೆ ಭೇಟಿ ಕೊಟ್ಟಾಗ ನಮ್ಮ ಗ್ರಾಮಕ್ಕೆ ಭೇಟಿ ನೀಡುವಂತೆ ಹಾಗೂ ಅನುದಾನ ಒದಗಿಸಲು ಸಹಕರಿಸಲು ನಿಯೋಗ ಸ್ಪೀಕರ್ ಯು.ಟಿ.ಖಾದರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರನ್ನೂ ಭೇಟಿಯಾಗಿ ಮನವಿ ಸಲ್ಲಿಸಿತು.