ಸಂಪಾಜೆ: ವಿವಿಧ ಬೇಡಿಕೆಗಳನ್ನು ಮುಂದಿರಿಸಿ ಸಂಪಾಜೆಯ ಜನಪ್ರತಿನಿಧಿಗಳು ಹಾಗೂ ಪ್ರಮುಖರ ನಿಯೋಗ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರನ್ನು ಭೆಟಿ ಮಾಡಿದರು.ಸಂಪಾಜೆ ಗ್ರಾಮದ ಪ್ಲಾಟಿಂಗ್ ಸಮಸ್ಯೆ ಹಾಗೂ ಸ್ಮಶಾನ ಸಮಸ್ಯೆ ಬಗ್ಗೆ ಸಚಿವರ ಗಮನಕ್ಕೆ ತರಲಾಯಿತು ಸ್ಮಶಾನ ಸ್ಥಳ ನೀಡುವ ಬಗ್ಗೆ ಪರಿಶೀಲನೆ
ನಡೆಸುವುದಾಗಿ ತೀರ್ಮಾನಿಸಲಾಯಿತು.ಕೆಪಿಸಿಸಿ ವಕ್ತಾರ ಟಿ. ಎಂ ಶಾಹಿದ್ ತೆಕ್ಕಿಲ್ ಅವರ ನೇತೃತ್ವದ ನಿಯೋಗದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಮತಿ ಶಕ್ತಿವೇಲು, ಮಾಜಿ ಅಧ್ಯಕ್ಷರಾದ ಜಿ. ಕೆ. ಹಮೀದ್ ಗೂನಡ್ಕ, ಜಗದೀಶ್ ರೈ, ಸುಂದರಿ ಮುಂಡಡ್ಕ, ಉಪಾಧ್ಯಕ್ಷರಾದ ಎಸ್. ಕೆ. ಹನೀಫ್, ಪಾರ್ವರ್ಡ್ ಗ್ರೂಪ್ ನ ಉಪಾಧ್ಯಕ್ಷ ಡಾ. ಉಮ್ಮರ್ ಬೀಜದಕಟ್ಟೆ, ಸಲೀಂ ಪೆರುಂಗೋಡಿ, ಹಾರಿಸ್ ಪಿ. ಎಂ, ಅಯ್ಯುಬ್ ಗೂನಡ್ಕ, ಮಂಜುನಾಥ್, ಉನೈಸ್ ಗೂನಡ್ಕ, ಹನೀಫ್ ಕಲ್ಲುಗುಂಡಿ, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಸಿದ್ದಿಕ್ ಕೊಕ್ಕೋ, ಮೊದಲದವರು ಉಪಸ್ಥಿತರಿದ್ದರು.