ಸಂಪಾಜೆ: ಸಂಪಾಜೆ ಗ್ರಾಮದ ರಾಜರಾಂಪುರದಲ್ಲಿ ಮನೆಯ ಬಳಿ ಭಾರೀ ಗಾತ್ರದ ಗುಂಡಿ ನಿರ್ಮಾಣ ಆಗಿರುವುದು ಆತಂಕಕ್ಕೆ ಕಾರಣವಾಗಿತ್ತು. ಗುಂಡಿಯ ಒಳಗಡೆ ದೂರದಿಂದ ಭೂಮಿ ಒಳಗೆ ನೀರು ಹರಿದು
ಬರುತ್ತಿರುವ ದೃಶ್ಯ ಕಂಡು ಬಂದಿತ್ತು. ಪಕ್ಕದಲ್ಲಿಯೇ ಬಾಳಪ್ಪರವರ ಎಂಬವರ ಮನೆ ಇದ್ದದು ಆತಂಕಕ್ಕೆ ಕಾರಣವಾಗಿತ್ತು. ಇದೀಗ ಸಂಪಾಜೆ ಗ್ರಾಮ ಪಂಚಾಯತ್ ವತಿಯಿಂದ ಹೊಂಡವನ್ನು ಮುಚ್ಚಲಾಗಿದೆ. ಜೆಸಿಬಿ ಮೂಲಕ ಬೃಹತ್ ಹೊಂಡವನ್ನು ಮುಚ್ಚಲಾಯಿತು. ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಮತಿ ಶಕ್ತಿವೇಲು, ಉಪಾಧ್ಯಕ್ಷ ಎಸ್.ಕೆ.ಹನೀಫ, ಮಾಜಿ ಅಧ್ಯಕ್ಷ ಜಿ.ಕೆ.ಹಮೀದ್ ಮತ್ತಿತರರು ಸ್ಥಳಕ್ಕೆ ಭೇಟಿ ನೀಡಿದರು.