ಸಂಪಾಜೆ: ಸಂಪಾಜೆ ಗ್ರಾಮ ಪಂಚಾಯತ್ ವತಿಯಿಂದ ಪಹಲ್ಗಾಮ್ನಲ್ಲಿ ಉಗ್ರಗಾಮಿಗಳು ಪ್ರವಾಸಿಗರ ಮೇಲೆ ನಡೆಸಿದ ದಾಳಿ ಖಂಡಿಸಿ , ಮಡಿದವರಿಗೆ ಸಂತಾಪ ಸೂಚಿಸಲು ಸಭೆ ಗ್ರಾಮ ಪಂಚಾಯತ್ ಕಚೇರಿ ಆವರಣದಲ್ಲಿ ನಡೆಯಿತು.ಗ್ರಾ.ಪಂ. ಅಧ್ಯಕ್ಷೆ ಸುಮತಿ ಶಕ್ತಿವೇಲು ಅಧ್ಯಕ್ಷತೆ ವಹಿಸಿದ್ದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ ಶಾಹಿದ್ ತೆಕ್ಕಲ್, ರಿಕ್ಷಾ ಚಾಲಕ ಮಾಲಕರ ಸಂಘದ
ಅಧ್ಯಕ್ಷರಾದ ಕೇಶವ ಬಂಗ್ಲೆಗುಡ್ಡೆ, ಸೊಸೈಟಿ ಉಪಾಧ್ಯಕ್ಷರಾದ ಯಮುನಾ , ಪ್ರಶಾಂತ್ ಕಲ್ಲುಗುಂಡಿ ಮೊದಲಾದವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಗ್ರಾ.ಪಂ. ಮಾಜಿ ಅಧ್ಯಕ್ಷ ರಾದಜಿ. ಕೆ ಹಮೀದ್ ಗೂನಡ್ಕ, ಸುಂದರಿ, ಜಗದೀಶ್ ರೈ ಸದಸ್ಯರಾದ ವಿಮಲಾ ಪ್ರಸಾದ್, ರಜನಿ ಶರತ್ ವರ್ತಕರ ಸಂಘದ ಕಾರ್ಯದರ್ಶಿ ರಝಾಕ್ ಸೂಪರ್ ಮನೋಜ್ ಬೈಲೆ,ಶಿಲ್ಪಾ ಸನತ್ , ಕಾಂತಿ ಬಿ. ಎಸ್, ಲಲನ, ಜಯಂತಿ,
ಭಾರತಿ,ನಿವೃತ್ತ ಸೈನಿಕ ಸಚಿನ್, ಉದಯ, ಅಶ್ರಫ್ , ವಿಶ್ವನಾಥ್ ಗೌಡ, ಧರ್ಮಕಲಾ, ಪುಷ್ಪ ಸಂಪಾಜೆ, ಸುಜೀತ್ ನವಮಿ ಪಂಚಾಯತ್ ಸಿಬ್ಬಂದಿ ಗೋಪಮ್ಮಾ ಭರತ್, ಮಧುರ, ಉಮೇಶ್ ಉಪಸ್ಥಿತರಿದ್ದರು.ಅಧ್ಯಕ್ಷೆ ಶ್ರೀಮತಿ ಸುಮತಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು ಉಪಾಧ್ಯಕ್ಷ ಎಸ್ ಕೆ ಹನೀಫ್ ಕಾರ್ಯಕ್ರಮ ನಿರೂಪಿಸಿದರು ಸದಸ್ಯರಾದ ಸ
ಶೌವಾದ್ ಗೂನಡ್ಕ ವಂದಿಸಿದರು.





