ಗುತ್ತಿಗಾರು: ಇಂಪಾರ್ಟೆಂಟ್ ಎಫ್ ಸಿ ಗುತ್ತಿಗಾರು ಮತ್ತು ಇತರ ಸಂಘ ಸಂಸ್ಥೆಗಳ ಆಶ್ರಯದಲ್ಲಿ, ಕಾಶ್ಮೀರದ ಪಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲಿನ ಭಯೋತ್ಪಾದಕರ ದಾಳಿಯನ್ನು ಖಂಡಿಸಿ, ಮಡಿದವರಿಗೆ ಶ್ರದ್ದಾಂಜಲಿ ಅರ್ಪಿಸಿ ದೀಪಯಾತ್ರೆ ಕಾರ್ಯಕ್ರಮ ನಡೆಯಿತು. ಪಂಜ ತಿರುವು ರಸ್ತೆಯಿಂದ
ಮುತ್ತಪ್ಪನಗರದವರೆಗೆ ದೀಪ ಯಾತ್ರೆ ನಡೆಯಿತು.
ಇಂಪಾರ್ಟೆಂಟ್ ಎಫ್ ಸಿ ಅಧ್ಯಕ್ಷ ಮುಳಿಯ ಸಾತ್ವಿಕ್ ಕಾರ್ಯದರ್ಶಿ ವರ್ಷಿತ್ ಕಡ್ತಲ್ ಮಾತನಾಡಿ ಘಟನೆಯನ್ನು ಖಂಡಿಸಿದರು. ಚರಣ್ ಕೊಂಬೊಟ್ಟು ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಹಿರಿಯರಾದ ಅಜಿತ್ ಬಾಕಿಲ, ಚಂದ್ರಶೇಖರ ಕಡೋಡಿ, ರಾಕೇಶ್ ಮೆಟ್ಟಿನಡ್ಕ, ಕೌಶಿಕ್ ಶ್ಯಾಮ್ ಮುಳಿಯ, ಶ್ರಿಶರಣ್ ಮೊಗ್ರ, ಪ್ರಶಾಂತ್ ಬಾಕಿಲ, ಲೋಕೇಶ್ ಪೈಕ, ಜಗದೀಶ್ ಪೈಕ, ಆಶ್ಲೇಶ್ ಕೆಡಿ ಮತ್ತಿತರರು ಉಪಸ್ಥಿತರಿದ್ದರು.












