ಸುಳ್ಯ:ಸಜ್ಜನ ಪ್ರತಿಷ್ಠಾನದ ಅಧ್ಯಕ್ಷ ಡಾ.ಉಮ್ಮರ್ ಬೀಜದಕಟ್ಟೆ ವೃತ್ತಿ ಜೀವನದ ಬೆಳ್ಳಿ ಹಬ್ಬ ಕಾರ್ಯಕ್ರಮವನ್ನು ವಿಶಿಷ್ಠವಾಗಿ ಆಚರಿಸಲಾಗುವುದು. ಬೆಳ್ಳಿ ಹಬ್ಬದ ಸವಿನೆನಪಿಗಾಗಿ 25 ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಜ್ಜನ ಪ್ರತಿಷ್ಠಾನದ ಅಧ್ಯಕ್ಷರು ಹಾಗೂ ಫಾರ್ಮೆಡ್ ಗ್ರೂಫ್ ಅಫ್ ಕಂಪೆನಿಯ ಹಿರಿಯ ಉಪಾಧ್ಯಕ್ಷರಾದ ಡಾ.ಉಮ್ಮರ್ ಬೀಜದಕಟ್ಟೆ ತಿಳಿಸಿದ್ದಾರೆ. ಅವರು ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 1999ರಲ್ಲಿ
ವೃತ್ತಿ ಜೀವನ ಆರಂಭಿಸಿ 25 ವರ್ಷ ಪೂರೈಸಿದ ಹಿನ್ನಲೆಯಲ್ಲಿ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಈಗಾಗಲೇ ಎರಡು ಕಾರ್ಯಕ್ರಮಗಳು ನಡೆಸಲಾಗಿದೆ. ಜೂನ್ ತಿಂಗಳಲ್ಲಿ ಸಜ್ಜನ ಸಾಮಾನ್ಯ ಜ್ಞಾನ ಸ್ಪರ್ಧೆ (ರಾಜ್ಯಾದ್ಯಂತp ಅಂತರ್ಜಾಲ ಮೂಲಕ) ನಡೆಸಲಾಗಿದೆ. ಸಹೋದ್ಯೋಗಿಗಳ ಸ್ನೇಹ ಮಿಲನ ನಡೆದಿದೆ. ಜುಲೈ ತಿಂಗಳಲ್ಲಿ ವೃತ್ತಿ ಜೀವನದಲ್ಲಿ ನೆರವಾದ ಹಿರಿಯ ಚೇತನಗಳಿಗೆ ಗೌರವರ್ಪಣೆ, ಜು.9ರಂದು ವಿದ್ಯಾರ್ಥಿಗಳೊಂದಿಗೆ
ಬೀಜದಕಟ್ಟೆ ಮನೆಯಂಗಳದಲ್ಲೊಂದು ದಿನ ನಡೆಯಲಿದೆ. ಮಕ್ಕಳಿಗೆ ಪುಸ್ತಕ, ಬ್ಯಾಗ್ ವಿತರಣೆ ನಡೆಸಲಾಗುವುದು. ಅಲ್ಲದೆ ಈ ತಿಂಗಳಲ್ಲಿ ಸಜ್ಜನ ವಠಾರದಲ್ಲಿ ವನಮಹೋತ್ಸವ, ಅದಿಮ ಸಾಂಸ್ಕೃತಿಕ ಕೇಂದ್ರ ಕೋಲಾರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಬೆಂಗಳೂರಿನಲ್ಲಿ ಉಚಿತ ತರಬೇತಿ, ಆಗಸ್ಟ್ನಲ್ಲಿ ಚಿತ್ರದುರ್ಗ ಚಳ್ಳಕೆರೆಯಲ್ಲಿ ಸಜ್ಜನ ಕವಿಗೋಷ್ಠಿ, ಬೆಂಗಳೂರಿನಲ್ಲಿ ಪರವೂರಿನ ಉದ್ಯೋಗಿಗಳಿಗೆ ತರಬೇತಿ – ಧನಾತ್ಮಕ ಚಿಂತನೆ ನಡೆಯಲಿದೆ.
ಸೆಪ್ಟೆಂಬರ್ನಲ್ಲಿ ಮಾದಕ ಮುಕ್ತ ಸಮಾಜ, ಮಾದಕ ವಸ್ತುಗಳ ಸೇವನೆ ಮತ್ತು ದುಷ್ಪರಿಣಾಮಗಳ ಬಗ್ಗೆ ಕಿರು ಚಿತ್ರ (ಶಾರ್ಟ್ ಪಿಲ್ಸ್) ಬಿಡುಗಡೆ ಮತ್ತು ಅರಿವು ಮೂಡಿಸುವ ಕಾರ್ಯಕ್ರಮ ಸುಳ್ಯ, ಪುತ್ತೂರು, ಬೆಳ್ತಂಗಡಿ, ಬಂಟ್ವಾಳ, ಮಂಗಳೂರು, ಬೆಂಗಳೂರು, ದುಬೈನಲ್ಲಿ ನಡೆಯಲಿದೆ. ಕೋಲಾರದಲ್ಲಿ ಪದವಿ ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಗಾರ, ಸುಳ್ಯದಲ್ಲಿ ಪ್ರವಾದಿ ಸಂದೇಶ, ದಪ್ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಅಕ್ಟೋಬರ್ನಲ್ಲಿ ಸುಳ್ಯ, ಗೂನಡ್ಕ, ಪುತ್ತೂರಿನಲ್ಲಿ ಶಿಕ್ಷಕರಿಗೆ ತರಬೇತಿ,ಅಕ್ಟೋಬರ್-ನವೆಂಬರ್ನಲ್ಲಿ ಸಜ್ಜನ ಚಿಣ್ಣರ ಮೇಳ, ಸುಳ್ಯದಲ್ಲಿ ಪದವಿ ವಿದ್ಯಾರ್ಥಿಗಳಿಗೆ ಉದ್ಯೋಗ ಮಾಹಿತಿ ಬಗ್ಗೆ ಅರಿವು ಮತ್ತು ಜೀವನ ಕೌಶಲ್ಯ ಕಾರ್ಯಕ್ರಮ ಗುಲ್ಬರ್ಗದ ಸೇಡಂನಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳೊಂದಿಗೆ ಸಂವಾದ, ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನೊಂದಿಗೆ ಕನ್ನಡ ಉಳಿಸಿ ಬೆಳಸಿ ಕಾರ್ಯಕ್ರಮ,
ಸುಳ್ಯದ ಕೆಲವು ಶಾಲೆಗಳಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಪೊಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ತರಬೇತಿ. ಡಿಸೆಂಬರ್ನಲ್ಲಿ ವಿಶ್ವ ವಿಕಲಚೇತನ ದಿನಾಚರಣೆ ಅಂಗವಾಗಿ ಸಾಂದೀಪ್ ವಿಶೇಷ ಮಕ್ಕಳಿಗಾಗಿ ವಿಶೇಷ ಕಾರ್ಯಕ್ರಮ ಡಿಸೆಂಬರ್ನಲ್ಲಿ ಸುಳ್ಯದಲ್ಲಿ ಪದವಿ ಸಹಪಾಠಿಗಳ ಮಿಲನ ಮತ್ತು ಸಜ್ಜನೋತ್ಸವ ಮತ್ತು ಸಜ್ಜನ ಸಿರಿ ಪ್ರಶಸ್ತಿ ಪುರಸ್ಕಾರ.
ಜನವರಿಯಲ್ಲಿ ಗುಜರಾತ್ನಲ್ಲಿ ಕನ್ನಡ ಕಂಪು ಕಾರ್ಯಕ್ರಮ,
ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ಅಂತರ್ಜಾಲ ಆಧಾರಿತ ತರಬೇತಿ, ಸುಳ್ಯದಲ್ಲಿ ಭಾವೈಕ್ಯತಾ ಕ್ರೀಡಾಕೂಟ,ಮಾರ್ಚ್-ಏಪ್ರಿಲ್ನಲ್ಲಿ ದುಬೈನಲ್ಲಿ ವೃತ್ತಿ ಜೀವನದ ಬೆಳ್ಳಿಹಬ್ಬದ ಸವಿನೆನಪಿಗಾಗಿ ಆಯೋಜಿಸಿದ ಇಪತ್ತೈದು ಕಾರ್ಯಕ್ರಮಗಳ ಸಮಾರೋಪ ಅನಿವಾಸಿ ಕನ್ನಡಿಗರ ಸ್ನೇಹ ಮಿಲನ ನಡೆಯಲಿದೆ ಎಂದು ಅವರು ವಿವರಿಸಿದರು.
ಸಜ್ಜನ ಪ್ರತಿಷ್ಠಾನದ ನಿರ್ದೇಶಕ ಶರೀಫ್ ಜಟ್ಟಿಪಳ್ಳ ಮಾತನಾಡಿ
ಡಾ.ಉಮ್ಮರ್ ಬೀಜದಕಟ್ಟೆ ಅವರ ವೃತ್ತಿಜೀವನದ ಬೆಳ್ಳಿ ಹಬ್ಬದ ಪ್ರಯುಕ್ತ
ಸಜ್ಜನ ಪ್ರತಿಷ್ಠಾನದ ವತಿಯಿಂದ ಹಲವು ಕೊಡುಗೆಗಳನ್ನು ನೀಡಲಾಗುವುದು. ಶಾಲೆಗಳಿಗೆ ಮಕ್ಕಳಿಗೆ ಪುಸ್ತಕ, ಬ್ಯಾಗ್ ವಿತರಣೆ ಮಾಡಲಾಗುವುದು ಅಲ್ಲದೆ ಸಮಾಜಕ್ಕೆ ಪೂರಕವಾದ 25 ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಜ್ಜನ ಪ್ರತಿಷ್ಠಾನದ ನಿರ್ದೇಶಕರಾದ ಫೈಝಲ್ ಬೀಜದಕಟ್ಟೆ, ಮಂಜುನಾಥ್ ಹಿರಿಯೂರು ಉಪಸ್ಥಿತರಿದ್ದರು.