ಸುಳ್ಯ:ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಸುಳ್ಯ ತಾಲೂಕು ಘಟಕ, ಸಮ್ಮೇಳನ ಸ್ವಾಗತ ಸಮಿತಿ ಕುಕ್ಕುಜಡ್ಕ ಆಶ್ರಯದಲ್ಲಿ ಕುಕ್ಕುಜಡ್ಕದ ಚೊಕ್ಕಾಡಿ ವಿದ್ಯಾಸಂಸ್ಥೆಯಲ್ಲಿ ನಡೆದ 28ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಮಾರೋಪಗೊಂಡಿತು. ಸಮಾರೋಪ ಸಮಾರಂಭ ಹಾಗೂ ಕನ್ನಡ ಕಸ್ತೂರಿ ಸನ್ಮಾನ ಕಾರ್ಯಕ್ರಮದ
ಅಧ್ಯಕ್ಷತೆಯನ್ನು ಕಸಾಪ ಜಿಲ್ಲಾಧ್ಯಕ್ಷ ಡಾ.ಎಂ.ಪಿ.ಶ್ರೀನಾಥ ವಹಿಸಿದ್ದರು. ಸಾಹಿತಿ, ನಾಟಕಕಾರ ರಘುನಂದನ್ ಬೇಳೂರು ಸಮಾರೋಪ ಭಾಷಣ ಮಾಡಿದರು. ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ಕೆ.ಆರ್.ತೇಜಕುಮಾರ್ ಬಡ್ಡಡ್ಕ, ಚೊಕ್ಕಾಡಿ ಸಹಕಾರ ಸಂಘದ ಅಧ್ಯಕ್ಷ ಕೇಶವ ಕರ್ಮಾಜೆ, ವ್ಯಂಗ್ಯಚಿತ್ರಕಾರ ದಿನೇಶ್ ಕುಕ್ಕುಜಡ್ಕ, ಸುಳ್ಯ ತಾ.ಪಂ.ಇಒ ರಾಜಣ್ಣ, ಕಸಾಪ ಮಾಜಿ ಅಧ್ಯಕ್ಷ ಡಾ.ಹರಪ್ರಸಾದ್ ತುದಿಯಡ್ಕ, ಮಾತನಾಡಿದರು.
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಕನ್ನಡ ಕಸ್ತೂರಿ ಪುರಸ್ಕಾರ ನೀಡಿ ಗೌರವಿಸಲಾಯಿತು.ಎಂ.ಟಿ.ಶಾಂತಿಮೂಲೆ, ಆನೆಕಾರ ಗಣಪಯ್ಯ, ಸುಲೋಚನಾ.ಪಿ.ಕೆ, ಮೋಹನ ಶೇಣಿ, ಶೇಖರ ಮಣಿಯಾಣಿ, ವೈಕುಂಠ ಪ್ರಭು, ಶ್ರೀನಿವಾಸ ಮಾಸ್ಟರ್, ಚಂದ್ರಾ ಕೋಲ್ಚಾರ್, ಹರೀಶ್ ಮೋಟುಕಾನ, ಭವಾನಿ ವಸಂತ್,ವಿಜಿತ್ ಮೈತ್ತಡ್ಕ,ಇಬ್ರಾಹಿಂ ಸುಳ್ಯ ಅವರಿಗೆ ಕನ್ನಡ ಕಸ್ತೂರಿ ಸನ್ಮಾನ ಹಾಗೂ ಕ್ರೀಡಾ ಪಟು ಭಾನವಿ.ಪಿ.ಎಸ್ಗೆ ಕನ್ನಡ ಕಸ್ತೂರಿ ಗೌರವಾರ್ಪಣೆ ನೀಡಲಾಯಿತು.
ಕುಕ್ಕುಜಡ್ಕ ಚೊಕ್ಕಾಡಿ ಪ್ರೌಢಶಾಲೆಯ ಸಂಚಾಲಕ ಹಾಗೂ ಸ್ವಾಗತ ಸಮಿತಿಯ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು,ಕಸಾಪ ಸುಳ್ಯ ತಾಲೂಕು ಅಧ್ಯಕ್ಷ ಚಂದ್ರಶೇಖರ ಪೇರಾಲು,ಸಮ್ಮೇಳನ ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ ಕೃಷ್ಣ ಪ್ರಸಾದ್ ಮಾಡಬಾಕಿಲು, ಕೋಶಾಧಿಕಾರಿ ಅರುಣ ಕುಮಾರ ಮುಂಡಾಜೆ, ಕಸಾಪ ಗೌರವ ಕಾರ್ಯದರ್ಶಿಗಳಾದ ತೇಜಸ್ವಿ ಕಡಪಳ, ಚಂದ್ರಮತಿ ಕೆ, ಕೋಶಾಧಿಕಾರಿ ದಯಾನಂದ ಆಳ್ವ, ಕಸಾಪ ಕೊಡಗು ಜಿಲ್ಲಾಧ್ಯಕ್ಷ ಕೇಶವ ಕಾಮತ್, ಸುಳ್ಯ ಹೋಬಳಿ ಅಧ್ಯಕ್ಷೆ ಚಂದ್ರಾವತಿ ಬಡ್ಡಡ್ಕ, ಪಂಜ ಹೋಬಳಿ ಅಧ್ಯಕ್ಷ ಬಾಬು ಗೌಡ ಅಚ್ರಪ್ಪಾಡಿ, ಜಿಲ್ಲಾ ಪ್ರತಿನಿಧಿ ರಾಮಚಂದ್ರ ಪಲ್ಲತ್ತಡ್ಕ, ಕಸಾಪ ಪದಾಧಿಕಾರಿಗಳಾದ ರಮೇಶ್ ನೀರಬಿದಿರೆ, ಶರೀಫ್ ಜಟ್ಟಿಪಳ್ಳ, ಸಂಕೀರ್ಣ ಚೊಕ್ಕಾಡಿ, ಲತಾಶ್ರೀ ಸುಪ್ರೀತ್ ಮೋಂಟಡ್ಕ, ಶಶ್ಮಿ ಭಟ್ ಅಜ್ಜಾವರ, ಕೇಶವ ಸಿ.ಎ, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಕೀರ್ಣ ಚೊಕ್ಕಾಡಿ ಸ್ವಾಗತಿಸಿ, ತೇಜಸ್ವಿ ಕಡಪಳ ವಂದಿಸಿದರು. ಚಂದ್ರಮತಿ ಕೆ. ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನೃತ್ಯ ವೈಭವ, ಸಾಲು ಮರಗಳ ತಾಯಿ ತಿಮ್ಮಕ್ಕ ನಾಟಕ ಪ್ರದರ್ಶನಗೊಂಡಿತು.















