ಸುಳ್ಯ:ಕುಕ್ಕುಜಡ್ಕದ ಚೊಕ್ಕಾಡಿ ವಿದ್ಯಾಸಂಸ್ಥೆಯಲ್ಲಿ ನಡೆದ ಸುಳ್ಯ ತಾಲೂಕು 28ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕವಿಗೋಷ್ಠಿ ನಡೆಯಿತು.
ಸಾಹಿತಿ ಹಾಗೂ ಸುಳ್ಯ ಸಾರ್ವಜನಿಕ ಆಸ್ಪತ್ರೆಯ ಸ್ತ್ರೀ ಮತ್ತು ಪ್ರಸೂತಿ ರೋಗ ತಜ್ಞೆ ಡಾ.ಶಾಲಿನಿ ಡಿ.ಎಲ್ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು.ನಮ್ಮಲ್ಲಿರುವ ಭಾವನೆಗಳಿಗೆ
ಉಸಿರು ನೀಡಿದಾಗ ಕವಿತೆಗಳು ಹುಟ್ಟಿಕೊಳ್ಳುತ್ತವೆ, ಅವು ಅಮೂಲ್ಯವಾಗಿ ಜನರಿಗೆ ಮುಟ್ಟಬೇಕಾದರೆ ಪುಸ್ತಕ ರೂಪದಲ್ಲಿ ಹೊರ ಬರಬೇಕು.ಕವಿಗೋಷ್ಠಿಗಳ ಮೂಲಕ ಜನ ಮಾನಸಕ್ಕೆ ಮುಟ್ಟಬೇಕು ಎಂದರು.
ಕವಿಗಳಾದ ಪರಿಮಳ ಐವರ್ನಾಡು, ಮಮತಾ ಸುಧೀರ್ ಚಿದ್ಗಲ್, ರೇಣುಕಾ ಆರ್.ನಾವಲಗಿ, ಅನುರಾಧ ಶಿವಪ್ರಕಾಶ್, ಮಾನ್ಯಶ್ರೀ ಕೆ.ಎಂ.ಪುಳಿಕುಕ್ಕು, ಅಶ್ವಿನಿ ಕೋಡಿಬೈಲು, ಮುಸ್ತಫ ಬೆಳ್ಳಾರೆ, ಗಾಯತ್ರಿ ರಾಜೀವ್ ಸ್ನೇಹಗಿರಿ, ಸುಮತಿ ಕೆ.ಕಾನತ್ತಿಲ, ದೀಪಶ್ರೀ ಅಡ್ತಲೆ ಕವನ ವಾಚಿಸಿದರು.ಕಸಾಪ ಸುಳ್ಯ ಘಟಕದ ನಿರ್ದೇಶಕ ರಮೇಶ್ ನೀರಬಿದಿರೆ ಸ್ವಾಗತಿಸಿ, ಮುಖ್ಯ ಶಿಕ್ಷಕಿ ರೂಪವಾಣಿ ಬಿ.ವಂದಿಸಿದರು. ಪೂರ್ಣಿಮಾ ಕಾರ್ಯಕ್ರಮ ನಿರೂಪಿಸಿದರು.

















