ಸುಳ್ಯ: ಟಾಟಾ ಕಂಪೆನಿಗಳ ವಸ್ತುಗಳು ಯಾರಿಗೆ ಇಷ್ಟ ಇಲ್ಲಾ ಹೇಳಿ…! ಯಾವುದೇ ವಸ್ತುಗಳಾಗಲೀ ಅದರದ್ದೇ ಆದ ಗುಣಮಟ್ಟ ಮತ್ತು ಮೌಲ್ಯವನ್ನು ಕಾಪಾಡಿಕೊಳ್ಳುವ ಮೂಲಕ ಬ್ರಾಂಡ್ ಆಗಿ ವಿಶ್ವದಾದ್ಯಂತ ಪ್ರಸಿದ್ಧಿ ಪಡೆದ ಕಂಪೆನಿ ಟಾಟಾ. ಇಲೆಕ್ಟ್ರಾನಿಕ್ಸ್ ಮತ್ತು ಹೋಂ ಅಪ್ಲೈನ್ಸ್ ಕ್ಷೇತ್ರದಲ್ಲಿ ಸುಳ್ಯದ ಬ್ರಾಂಡ್ ಆಗಿರುವ ‘ಸಫಲ ಉದ್ಯಮ ಇಲೆಕ್ಟ್ರಾನಿಕ್ಸ್’ ಮಳಿಗೆಯಲ್ಲಿ ಟಾಟಾ ಕಂಪೆನಿಯ ಎಲ್ಲಾ
ಇಲೆಕ್ಟ್ರಾನಿಕ್ಸ್ ವಸ್ತುಗಳು ಲಭ್ಯವಿದೆ. ಟಾಟಾ ಇಲೆಕ್ಟ್ರಾನಿಕ್ಸ್ ಐಟಂಗಳ ಸುಳ್ಯ ತಾಲೂಕಿನ ಏಕೈಕ ಅಧಿಕೃತ ಮಾರಾಟಗಾರರು ಇವರು. ಟಾಟಾ ಕ್ರೋಮ್ ಇಲೆಕ್ಟ್ರಾನಿಕ್ಸ್ ವಸ್ತುಗಳು ಅತ್ಯಂತ ಕಡಿಮೆ ದರದಲ್ಲಿ ಲಭ್ಯವಿದೆ. ಇದೀಗ
ಸಂಸ್ಥೆಯಲ್ಲಿ ಆಕರ್ಷಕ ಆಫರ್ಗಳ ಮಹಾಮೇಳ ಆರಂಭಗೊಂಡಿದ್ದು ಪ್ರತಿ ಶನಿವಾರ ಮೆಗಾ ವೀಕೆಂಡ್ ಸೇಲ್, ಪ್ರತಿ ದಿನ ಆಕರ್ಷಕ ದರ ಕಡಿತ ಮಾರಾಟ ಜೊತೆಗೆ ಇಲೆಕ್ಟ್ರಾನಿಕ್ಸ್ ಉದ್ಯಮ ಕ್ಷೇತ್ರದಲ್ಲಿಯೇ ಹೊಸ ಪ್ರಯೋಗ ಕೋಂಬೋ ಆಫರ್ ನಡೆಯುತ್ತಿದ್ದು ನಿಮಗೆ ಇಷ್ಟವಾದ ಟಾಟಾ ವಸ್ತುಗಳು ಇನ್ನಷ್ಟು ಕೈಗೆಟಕುವ ದರದಲ್ಲಿ

ಲಭ್ಯವಿದೆ. ಟಾಟಾ ಕಂಪೆನಿಯ ರೆಫ್ರಿಜರೇಟರ್ಗಳು, ವಾಷಿಂಗ್ ಮೆಷಿನ್, ವೈವಿಧ್ಯಮಯ ಟಿವಿಗಳು, ಎಸಿ, ಮೈಕ್ರೋ ವೋವನ್, ಮಿಕ್ಸರ್ ಗ್ರೈಂಡರ್, ಐರನ್ ಬಾಕ್ಸ್, ಗ್ಯಾಸ್ ಸ್ಟೌ, ಟೋಸ್ಟರ್, ಕಂಪ್ಯೂಟರ್ ಕೀ ಬೋರ್ಡ್, ಮಾನಿಟರ್, ಕಂಪ್ಯೂಟರ್ ಎಸ್ಸಸ್ಸರೀಸ್, ಕೇಟಲ್, ಇಂಡಕ್ಷನ್ ಸ್ಟೌ, ಹೀಗೆ ಟಾಟಾ ಕಂಪೆನಿಯ ಎಲ್ಲ ಐಟಂಗಳ ದೊಡ್ಡ ಸಂಗ್ರಹವೇ ಬಂದಿದೆ.
ಆಕರ್ಷಕ ಆಫರ್:
ಅಂಬೆಟಡ್ಕದ ಆರೋಹಿ ಎನ್ಕ್ಲೇವ್ನಲ್ಲಿ ವಿಶಾಲವಾಗಿ ತೆರೆದಿರುವ ಸುಳ್ಯದ ಇಲೆಕ್ಟ್ರಾನಿಕ್ಸ್ ಉಪಕರಣಗಳ ಮಾಯಾಲೋಕ ಸಫಲ ಉದ್ಯಮ ಮಳಿಗೆ ಗ್ರಾಹಕರನ್ನು ಕೈ ಬೀಸಿ ಕರೆಯುತಿದೆ. ಪ್ರಸಿದ್ಧ ಬ್ರಾಂಡ್ಗಳ ಆಕರ್ಷಕ ಇಲೆಕ್ಟ್ರಾನಿಕ್ಸ್ ಗೃಹೋಪಯೋಗಿ ಸಾಮಾಗ್ರಿಗಳ ಅಪೂರ್ವ ಮತ್ತು ಅದ್ಭುತ ಸಂಗ್ರಹವೇ ಇದೆ ಇದರ ಜೊತೆಗೆ ಟಾಟಾ ಕಂಪೆನಿಯ ಎಲ್ಲಾ ಐಟಂಗಳು ಸೇರಿಕೊಂಡಿದೆ. ಗುಣಮಟ್ಟದಲ್ಲಿ ರಾಜಿ ಇಲ್ಲದ, ಅತೀ ಕಡಿಮೆ ದರದಲ್ಲಿ ವಿಶೇಷ ದರ ಕಡಿತದೊಂದಿಗೆ ಸಫಲ ಉದ್ಯಮ ಸಫಲತೆಯೆಡೆಗೆ ಮುನ್ನುಗ್ಗುತಿದೆ.

ವೀಕೆಂಡ್ ಮೆಗಾ ಸೇಲ್:
ಸಫಲ ಉದ್ಯಮದಲ್ಲಿ ವಾರ ಪೂರ್ತಿ ಆಕರ್ಷಕ ಆಫರ್ಗಳೊಂದಿಗೆ ವಿಶೇಷ ಮಾರಾಟ ನಡೆಯುತ್ತಿದೆ. ಜೊತೆಗೆ ವಾರದ ಶನಿವಾರ ವಿಶೇಷ ಮಾರಾಟ ವ್ಯವಸ್ಥೆ ಹಮ್ಮಿಕೊಳ್ಳಲಾಗಿದೆ. ಪ್ರತಿ ಶನಿವಾರ ಮೆಗಾ ವೀಕೆಂಡ್ ಸೇಲ್ ನಡೆಯುತಿದೆ. ವೀಕೆಂಡ್ ದಿನ ಖರೀದಿ ನಡೆಸಿದ ಗ್ರಾಹಕರಿಗೆ ಡ್ರಾ ಮೂಲಕ ಆಕರ್ಷಕ ಬಹುಮಾನ ನೀಡಲಾಗುತ್ತದೆ. ಪ್ರತಿ ದಿನ ನೀಡುವ ನೂತನ ದರ ಕಡಿತ ಮಾರಾಟ ಮತ್ತು ಕೋಂಬೋ ಆಫರ್ ಇದೆ.

ಕೋಂಬೋ ಆಫರ್..!
ಸುಳ್ಯದ ಇತಿಹಾಸದಲ್ಲಿಯೇ ಇಲೆಕ್ಟ್ರಾನಿಕ್ಸ್ ಉದ್ಯಮದಲ್ಲಿ ವೈವಿಧ್ಯಮಯ ದರ ಕಡಿತದದ ಸ್ಲಾಬ್ಗಳನ್ನು ಘೋಷಿಸಿರುವ ಸಫಲ ಉದ್ಯಮ ಗ್ರಾಹಕರಿಗಾಗಿ ‘ಕೋಂಬೋ ಆಫರ್’ ಎಂಬ ಹೊಸ ಪರಿಕಲ್ಪನೆಯನ್ನು ಜಾರಿಗೆ ತಂದಿದೆ.ಅಂದರೆ ಸಾಮಾನ್ಯವಾಗಿ ಕೆಲವು ಇಲೆಕ್ಟ್ರಾನಿಕ್ಸ್ ಸಾಮಾಗ್ರಿಗಳಿಗೆ ಶೇ.25ರಷ್ಟು ದರ ಕಡಿತ ಮಾರಾಟ ಇದೆ ಎಂದಾದರೆ, ಎರಡು ಇಲೆಕ್ಟ್ರಾನಿಕ್ಸ್ ಐಟಮ್ ಒಟ್ಟಿಗೆ ಖರೀದಿಸಿದರೆ ಶೇ.5ರಷ್ಟು ಹೆಚ್ಚುವರಿಯಾಗಿ
ದರ ಕಡಿತ ಮಾಡಲಾಗುತ್ತದೆ. ಅಲ್ಲದೆ ಎರಡು ವಸ್ತುಗಳು ಸೇರಿ 10 ಸಾವಿರಕ್ಕಿಂತ ಹೆಚ್ಚಿನ ಮೊತ್ತದ ಖರೀದಿ ಆದರೆ ಮತ್ತೆ ಹೆಚ್ಚುವರಿ ಶೇ.3 ದರ ಕಡಿತ ಮಾಡಲಾಗುತ್ತದೆ. ಅಂದರೆ ಸಾಮಾನ್ಯ ಖರೀದಿಗೆ

ಶೇ.25 ಆಫರ್ ಇರುವ ಐಟಂಗೆ ಕೋಂಬೋ ಖರೀದಿ ಮಾಡಿದಲ್ಲಿ ಅದು ಹೆಚ್ಚುವರಿ ಶೇ.5 ಹಾಗೂ, ಶೇ.3 ಸೇರಿದರೆ ಶೇ.33 ದರ ಕಡಿತ ಮಾಡಿದಂತಾಗುತ್ತದೆ. ಅದರಂತೆ ಕೆಲವು ಇಲೆಕ್ಟ್ರಾನಿಕ್ಸ್ ಸಾಮಾಗ್ರಿಗಳಿಗೆ ಶೇ.50 ದರ ಕಡಿತ ಘೋಷಿಸಲಾಗಿದೆ. ಕೋಂಬೋ ಆಫರ್ನಲ್ಲಿ ಎರಡು ವಸ್ತುಗಳು 10 ಸಾವಿರಕ್ಕಿಂತ ಮೇಲ್ಪಟ್ಟರೆ ಶೇ.58 ಕಡಿತ ಆಗುತ್ತದೆ, ಕೆಲವು ಸಾಮಾಗ್ರಿಗಳಿಗೆ ಶೇ.55 ದರ ಕಡಿತ ಮಾರಾಟ ಇದ್ದದ್ದು ಶೇ.63ರವರೆಗೆ ಕಡಿತದ ಲಾಭ ದೊರೆಯಲಿದೆ. ಹೀಗೆ ಸಫಲ ಉದ್ಯಮದಲ್ಲಿ ದರ ಕಡಿತ ಮಾರಾಟದ ಮಹಾಪೂರವೇ ಘೋಷಿಸಲಾಗಿದೆ. ದರ ಕಡಿತದಲ್ಲಿ ಆಕರ್ಷಕ ಸ್ಲಾಬ್ಗಳನ್ನು ಘೋಸಿಸಿದ್ದು ವಿವಿಧ ಬ್ರಾಂಡೆಡ್ ಐಟಂಗಳಿಗೆ ಶೇ.15ರಿಂದ ಶೇ.63ರ ವರೆಗೆ ವಿವಿಧ ಸ್ತರದ ಡಿಸ್ಕೌಂಟ್ ಲಭ್ಯವಿದೆ. ಈ ರೀತಿಯ ದರ ಕಡಿತ ಮಾರಾಟ ಎಲ್ಲಾ ದಿನ ನಿರಂತರ ಇರಲಿದೆ, ಶನಿವಾರದ ಮೆಗಾ ವೀಕೆಂಡ್ ಸೇಲ್ನಲ್ಲಿ ಗ್ರಾಹಕರಿಗೆ ವಿಶೇಷ ಉಡುಗೊರೆ ನೀಡುವುದು ಈ ದಿನದ ವಿಶೇಷ ಎಂದು ಸಫಲ ಉದ್ಯಮ ಮಳಿಗೆಯ ಪಾಲುದಾರರು ತಿಳಿಸಿದ್ದಾರೆ.

ಬ್ರಾಂಡೆಡ್ ಐಟಂಗಳ ಮಹಾಮೇಳ:
ಸಫಲ ಉದ್ಯಮ ಇಲೆಕ್ಟ್ರಾನಿಕ್ಸ್ ಮಳಿಗೆ ಪ್ರಸಿದ್ಧ ಬ್ರಾಂಡೆಡ್ ಕಂಪೆನಿಗಳ ವಸ್ತುಗಳನ್ನೇ ಮಾರಾಟ ಮಾರಾಟ ಮಾಡುತಿದೆ. ಬ್ರಾಂಡೆಡ್ ಐಟಂಗಳ ಮಹಾಮೇಳವೇ ಇಲ್ಲಿ ಮೇಳೈಸಿದೆ. ಟಾಟಾ ಕ್ರೋಮಾ ಮಾತ್ರವಲ್ಲದೆ ಸ್ಯಾಮ್ಸಂಗ್,ಎಲ್ಜಿ, ಸೋನಿ, ಪೀಜಿಯನ್, ಪಾನಾಸೋನಿಕ್, , ಐಎಫ್ಬಿ, ವರ್ಲ್ಪೂಲ್, ಹೈಯರ್, ಕೆಲ್ವಿನೇಟರ್, ಪ್ರೆಸ್ಟೀಜ್, ವಿಗಾರ್ಡ್, ಹೆಚ್ಪಿ, ಡೆಲ್, ಬೋಶ್ ಹೀಗೆ ಎಲ್ಲಾ ಕಂಪೆನಿಗಳ ವೈವಿಧ್ಯಮಯ, ಅತ್ಯಾಧುನಿಕ ಗೃಹೋಪಯೋಗಿ ಇಲೆಕ್ಟ್ರಾನಿಕ್ಸ್ ಸಾಮಾಗ್ರಿಗಳು ಅತೀ ಕಡಿಮೆ ದರದಲ್ಲಿ ಸಫಲ ಉದ್ಯಮದಲ್ಲಿ ಲಭ್ಯವಿದೆ.









