ಶಬರಿಮಲೆ: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಭೇಟಿ ಕೊಡುವ ಭಕ್ತರ ಸಂಖ್ಯೆ ಹೆಚ್ಚಿದ ಕಾರಣ ದೇವರ ದರ್ಶನದ ಸಮಯವನ್ನು 1 ಗಂಟೆ ಹೆಚ್ಚಿಸಲು ತಿರವಾಂಕೂರು ದೇವಸ್ಥಾನ ಮಂಡಳಿ(ಟಿಡಿಬಿ) ನಿರ್ಧರಿಸಿದೆ.
ಮಧ್ಯಾಹ್ನ 4ರಿಂದ ರಾತ್ರಿ 11ರವರೆಗೆ ಬದಲಾಗಿ ಮಧ್ಯಾಹ್ನ 3ರಿಂದ ರಾತ್ರಿ 11ರವರೆಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ಮಂಡಳಿ ತಿಳಿಸಿದೆ. ಕಳೆದ ಕೆಲವು ದಿನಗಳಿಂದ ಭಕ್ತರ ಸಂಖ್ಯೆ ಹೆಚ್ಚಿದ್ದು ದೇವರ ದರ್ಶನಕ್ಕಾಗಿ ಭಕ್ತರು ಹಲವು ಗಂಟೆಗಳ ಕಾಲ ಸರದಿಯಲ್ಲಿ ಕಾಯಬೇಕಾಗಿದೆ.ಶಬರಿಮಲೆಯಲ್ಲಿ ಮಂಡಲಂ-ಮಕರವಿಳಕ್ಕು ಯಾತ್ರೆ ನವೆಂಬರ್ 16ರಿಂದ ಪ್ರಾರಂಭವಾಗಿದೆ.









