ಸುಳ್ಯ:ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾದ ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎಸ್.ಎನ್.ಮನ್ಮಥ ಅವರನ್ನು ಶಾಸಕಿ ಭಾಗೀರಥಿ ಮುರುಳ್ಯ ಅಭಿನಂದಿಸಿದರು.ಶಾಸಕರ ಕಚೇರಿಯಲ್ಲಿ ಹೂಗುಚ್ಛ ನೀಡಿ ಮನ್ಮಥರನ್ನು ಅಭಿನಂದಿಸಲಾಯಿತು.ಎಸ್ಸಿಡಿಸಿಸಿ ಬ್ಯಾಂಕ್ನ
ನಿರ್ದೇಶಕ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ಸುಳ್ಯದಿಂದ ಮನ್ಮಥರು ಮಾತ್ರ ನಾಮಪತ್ರ ಸಲ್ಲಿಸಿದ ಹಿನ್ನಲೆಯಲ್ಲಿ ನಿರ್ದೇಶಕರಾಗಿ ಅವರು ಅವಿರೋಧವಾಗಿ ಆಯ್ಕೆಯಾಗುವುದು ಖಚಿತವಾಗಿದೆ.
ಈ ಸಂದರ್ಭದಲ್ಲಿ ಮುಖಂಡರಾದ ಹರೀಶ್ ಕಂಜಿಪಿಲಿ, ಸಂತೋಷ್ ಜಾಕೆ, ಸಂತೋಷ್ ಕುತ್ತಮೊಟ್ಟೆ, ಚನಿಯ ಕಲ್ತಡ್ಕ, ಮಹೇಶ್ ರೈ ಮೇನಾಲ, ಬಾಲಕೃಷ್ಣ ಕೀಲಾಡಿ, ಶೇಖರ ಮಡ್ತಿಲ, ವಿಜಯ ಆಲಡ್ಕ, ವಸಂತ ನಡುಬೈಲು, ಬಾಬು ಜಾಲ್ಸೂರು, ಕುಶಾಲಪ್ಪ ಪೆರುವಾಜೆ, ಚಂದ್ರಶೇಖರ ನೆಡೀಲು ಮತ್ತಿತರರು ಉಪಸ್ಥಿತರಿದ್ದರು.