ಸುಳ್ಯ:ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಮುಂದಿರಿಸಿ
ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ವಿವಿಧ ಕಾರ್ಮಿಕ ಸಂಘಟನೆಗಳ ಒಕ್ಕೂಟದ ವತಿಯಿಂದ ಅನಿರ್ಧಿಷ್ಟಾವಧಿ ಪ್ರತಿಭಟನೆ ಮತ್ತು ಧರಣಿ ಸತ್ಯಾಗ್ರಹ ಆರಂಭಗೊಂಡಿದೆ. ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಸುಳ್ಯ-ಐವರ್ನಾಡು- ಸುಬ್ರಹ್ಮಣ್ಯ ವಿಭಾಗದ ರಬ್ಬರ್ ವಿಭಾಗದಲ್ಲಿ
ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರು ವಿವಿಧ ಬೇಡಿಕೆಗಳನ್ನು ಮುಂದಿರಿಸಿ ಸುಳ್ಯದ ವಿಭಾಗೀಯ ವ್ಯವಸ್ಥಾಪಕರ ಕಛೇರಿಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ನಿಗಮದಲ್ಲಿ ಶೇ.60ರಷ್ಟು ನಿರಂತರ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾರೆ. ಈ ನಿರಂತರ ಕಾರ್ಮಿಕರನ್ನು ಖಾಯಂಗೊಳಿಸಬೇಕು, ಮತ್ತು ನಿರಂತರ ಕಾರ್ಮಿಕರಿಗೆ ಬಾಕಿ ವೇತನ ಪಾವತಿಸಬೇಕು, ಕಾರ್ಮಿಕರ ಕುಟುಂಬದ ಸದಸ್ಯರಿಗೆ ಅನುಕಂಪ ಆಧಾರಿತ ಕೆಲಸವನ್ನು ನೀಡಬೇಕು. ಮೇಸ್ತ್ರಿ ಕಾರ್ಮಿಕರ ನೇಮಕಾತಿ ಮಾಡಬೇಕು, ಎಲ್ಲಾ ಕಾರ್ಮಿಕರಿಗೆ ಇಎಸ್ಐ ಸೌಲಭ್ಯವನ್ನು ನೀಡಬೇಕು ಮತ್ತಿತರ ಬೇಡಿಕೆಗಳನ್ನು ಮುಂದಿರಿಸಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ.
ಜನರಲ್ ಎಂಪ್ಲಾಯಿಸ್ ಯೂನಿಯನ್,ಕರ್ನಾಟಕ ತೋಟ ಮಜ್ದೂರ್ ಸಂಘ , ಕೆಎಫ್ಡಿ.ಸಿ. ಲೇಬರರ್ಸ್ ಯೂನಿಯನ್ ಸಂಘಟನೆಗಳು ಪ್ರತಿಭಟಬೆಯಲ್ಲಿ ಭಾಗವಹಿಸುತ್ತಿದ್ದಾರೆ.
ಜನರಲ್ ಎಂಪ್ಲಾಯಿಸ್ ಯೂನಿಯನ್ನ ಅಧ್ಯಕ್ಷ ಜೀವರತ್ನ, ಪ್ರಧಾನ ಕಾರ್ಯದರ್ಶಿ ಕ್ರೂಸ್ ನಾಗಪಟ್ಟಣ, ಉಪಾಧ್ಯಕ್ಷ ಭೋಜರಾಜ ಕಣಿಯಾರು, ಕರ್ನಾಟಕ ತೋಟ ಮಜ್ದೂರ್ ಸಂಘದ ಅಧ್ಯಕ್ಷ ಸುಂದರಲಿಂಗಂ,ಕೆಎಫ್ಡಿ.ಸಿ. ಲೇಬರರ್ಸ್ ಯೂನಿಯನ್
ಅಧ್ಯಕ್ಷ ಶರತ್ ಕುಮಾರ್, ಕಾರ್ಮಿಕ ಸಂಘಟನೆಗಳ ಪ್ರಮುಖರಾದ ಕಾರ್ತಿಕ್ ಕೂಟೇಲು, ಶಶಿಕುಮಾರ್ ನೆಟ್ಟಾರು, ರವೀಂದ್ರನ್ ಮತ್ತಿತರರು ನೇತೃತ್ವ ವಹಿಸಿದ್ದಾರೆ.









