ಕೋಲ್ಕತ್ತ: ಜೋಸ್ ಬಟ್ಲರ್ ಅವರ ಅಜೇಯ ಶತಕದ (ಔಟಾಗದೆ 107; 60ಎ, 4×9, 6×6) ನೆರವಿನಿಂದ ಮಂಗಳವಾರ ರಾತ್ರಿ ನಡೆದ ಐಪಿಎಲ್ ಪಂದ್ಯದ ರೋಚಕ ಹಣಾಹಣಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡವು ಎರಡು ವಿಕೆಟ್ಗಳಿಂದ ಕೋಲ್ಕತ್ತ ನೈಟ್ ರೈಡರ್ಸ್ ತಂಡವನ್ನು ಮಣಿಸಿತು.ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ
ಸುನಿಲ್ (109; 56ಎಸೆತ) ಅವರ ಮಿಂಚಿನ ಬ್ಯಾಟಿಂಗ್ ಬಲದಿಂದ ಕೋಲ್ಕತ್ತ ತಂಡವು 20 ಓವರ್ಗಳಲ್ಲಿ 6 ವಿಕೆಟ್ಗಳಿಗೆ 223 ರನ್ ಗಳಿಸಿತು. ಈ ಗುರಿಯನ್ನು ಬೆನ್ನತ್ತಿದ ರಾಜಸ್ಥಾನ ತಂಡದ ತಂಡವು 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 224 ರನ್ ಗಳಿಸಿ ಭರ್ಜರಿ ಜಯಭೇರಿ ಬಾರಿಸಿತು. ಕೊನೆಯ ಓವರ್ನಲ್ಲಿ 9 ರನ್ ಬೇಕಿದ್ದಾಗ ಮೊದಲ ಎಸೆತವನ್ನು ಸಿಕ್ಸರ್ ಸಿಡಿಸುವ ಮೂಲಕ ಐಪಿಎಲ್ನ ಈ ಆವೃತ್ತಿಯಲ್ಲಿ ಎರಡನೇ ಶತಕ ಪೂರೈಸಿದರು.
ರಿಯಾನ್ ಪರಾಗ್ 22 ಎಸೆತಗಳಲ್ಲಿ 50 ರನ್ ಸೇರಿಸಿದರು. ಏಳನೇ ವಿಕೆಟ್ ಜೊತೆಯಾಟದಲ್ಲಿ ಬಟ್ಲರ್ ಅವರು ರೋವ್ಮನ್ ಪೊವೆಲ್ ಅವರೊಂದಿಗೆ 27 ಎಸೆತಗಳಲ್ಲಿ 57 ರನ್ ಸೇರಿಸಿ ಗೆಲುವಿನ ಆಸೆ ಚಿಗುರಿಸಿದರು. ಪೊವೆಲ್ ಔಟಾದಾಗ ಗೆಲುವಿಗೆ ಇನ್ನೂ 46 ರನ್ ಅಗತ್ಯವಿತ್ತು. ನಂತರದಲ್ಲಿ ಗೆಲುವಿಗೆ ಬೇಕಾದ ಅಷ್ಟೂ ರನ್ಗಳನ್ನು ಬಟ್ಲರ್ ಒಬ್ಬರೇ ಸೂರೆಮಾಡಿದರು. ಕೋಲ್ಕತ್ತ ಪರ ಹರ್ಷಿತ್ ರಾಣಾ, ಸುನಿಲ್ ನಾರಾಯಣ್ ಮತ್ತು ವರುಣ್ ಚಕ್ರವರ್ತಿ ತಲಾ ಎರಡು ವಿಕೆಟ್ ಪಡೆದರು. ಇದಕ್ಕೂ ಮೊದಲು ಬ್ಯಾಟಿಂಗ್ಗೆ ಇಳಿದ ಕೋಲ್ಕತ್ತ ತಂಡಕ್ಕೆ ಮಿಂಚಿನ ಶತಕದ ಮೂಲಕ ಸುನಿಲ್ ನರೈನ್ ಆಸರೆಯಾದರು. ನರೈನ್ 56 ಎಸೆತಗಳಲ್ಲಿ13 ಬೌಂಡರಿ ಹಾಗೂ 6 ಸಿಕ್ಸರ್ ನೆರವಿನಿಂದ ಭರ್ಜರಿ ಇನ್ನಿಂಗ್ಸ್ ಕಟ್ಟಿದರು.
ಅಂಗಕ್ರಿಷ್ ರಘುವಂಶಿ 30, ರಿಂಕು ಸಿಂಗ್ 20 ರನ್ ಸಿಡಿಸಿದರು.