ಸುಳ್ಯ:ರಸ್ತೆ ಕಾನೂನುಗಳನ್ನು ಪಾಲಿಸಬೇಕಾದುದು ಪ್ರತಿಯೊಬ್ಬರ ಕರ್ತವ್ಯ. ರಸ್ತೆ ಸುರಕ್ಷತಾ ಕಾನೂನು ಪಾಲಿಸುವುದು ಪೊಲೀಸರಿಗೆ ಬೇಕಾಗಿ ಅಲ್ಲ, ಅದು ತಮಗಾಗಿ ಎಂಬ ಜಾಗೃತಿ ಪ್ರತಿಯೊಬ್ಬರಲ್ಲಿಯೂ ಅಗತ್ಯ ಎಂದು ಸುಳ್ಯ ಪೊಲೀಸ್ ಉಪನಿರೀಕ್ಷಕ ಈರಯ್ಯ ದೂಂತೂರು ಹೇಳಿದ್ದಾರೆ. ಸುಳ್ಯ ರೋಟರಿ ಕ್ಲಬ್ ಹಾಗೂ ರೋಟರಿ ಕ್ಲಬ್ ಸುಳ್ಯ ಸಿಟಿ ಹಾಗೂ ಇಂಟರಾಕ್ಟ್ ಕ್ಲಬ್ ವತಿಯಿಂದ ಸುಳ್ಯದಲ್ಲಿ ನಡೆದ ರಸ್ತೆ ಸುರಕ್ಷತಾ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ, ಜಾಗೃತಿ ಪತ್ರವನ್ನು ಬಿಡುಗಡೆ ಮಾಡಿ ಅವರು
ಮಾತನಾಡಿದರು. ಇದು ಅತ್ಯಂತ ಅರ್ಥಪೂರ್ಣ ಕಾರ್ಯಕ್ರಮ ಈ ರೀತಿಯ ಜಾಗೃತಿ ಕಾರ್ಯಕ್ರಮ ಮಕ್ಕಳಲ್ಲಿ ಬೆಳೆಸಬೇಕಾಗಿದೆ ಎಂದು ಹೇಳಿದರು. ನಿರ್ಲಕ್ಷ್ಯದಿಂದಾಗಿ ಬಹುತೇಕ ಅಪಘಾತಗಳು ಸಂಭವಿಸುತ್ತದೆ. ಜಾಗೃತಿ ಮತ್ತು ಸುರಕ್ಷಿತ ವಾಹನ ಚಾಲನೆಯಿಂದ ಜೀವ ಮತ್ತು ಜೀವನ ಉಳಿಸುತ್ತದೆ ಎಂದು ಅವರು ಹೇಳಿದರು.
ರೋಟರಿ ಜಿಲ್ಲಾ ನಿಯೋಜಿತ ಗವರ್ನರ್ ವಿಕ್ರಂದತ್ತ, ಮಾಜಿ ಗವರ್ನರ್ ಡಾ.ದೇವದಾಸ ರೈ, ರೋಟರಿ ಜಿಲ್ಲಾ ಪಬ್ಲಿಕ್ ಇಮೇಜ್ ಚೆಯರ್ಮೆನ್ ವಿಶ್ವಾಶ್ ಶೆಣೈ, ರೋಟರಿ ಜಿಲ್ಲಾ ರಸ್ತೆ ಸುರಕ್ಷತಾ ಜಾಗೃತಿ ಚೆಯರ್ಮೆನ್ ಹರ್ಷ ಕುಮಾರ್ ರೈ ಅತಿಥಿಗಳಾಗಿದ್ದರು. ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷ ಆನಂದ ಖಂಡಿಗ, ರೋಟರಿ ಕ್ಲಬ್ ಸುಳ್ಯ ಸಿಟಿ ಅಧ್ಯಕ್ಷ ಗಿರೀಶ್ ನಾರ್ಕೋಡು, ಕಿನ್ನಿಗೋಳಿ ರೋಟರಿ ಕ್ಲಬ್ನ ಶರತ್ ಕಿನ್ನಿಗೋಳಿ, ದೇರ್ಲಕಟ್ಟೆ ರೋಟರಿ ಕ್ಲಬ್ ಅಧ್ಯಕ್ಷೆ ಲತಾ, ರೋಟರಿ ಶಾಲಾ ಮುಖ್ಯೋಪಾಧ್ಯಾಯಿನಿ ವೀಣಾ ಶೇಡಿಕಜೆ, ಇಂಟರಾಕ್ಟ್ ಕ್ಲಬ್ ಅಧ್ಯಕ್ಷೆ ಹಿಮಾನಿ, ರೋಟರಿ ಕ್ಲಬ್ ಹಾಗೂ ರೋಟರಿ ಕ್ಲಬ್ ಸುಳ್ಯ ಮಾಜಿ ಅಧ್ಯಕ್ಷರು
ಹಾಗೂ ಪದಾಧಿಕಾರಿಗಳಾದ ಕಸ್ತೂರಿ ಶಂಕರ್, ಡಾ.ಕೇಶವ ಪಿ.ಕೆ, ಚಂದ್ರಶೇಖರ ಪೇರಾಲು, ಪ್ರಭಾಕರನ್ ನಾಯರ್, ಅಬ್ದುಲ್ ಹಮೀದ್ ಜನತಾ, ಮುರಳೀಧರ ರೈ, ಗಣೇಶ್ ಭಟ್, ಎಂ.ಮೀನಾಕ್ಷಿ ಗೌಡ, ಅವಿನ್ ರಂಗತ್ತಮಲೆ, ಮಧುರ ಎಂ.ಆರ್, ಯೋಗಿತಾ ಗೋಪಿನಾಥ್, ಪ್ರಮೋದ್ ಕುಮಾರ್ ಕೆ, ಅಶೋಕ್ ಕೊಯಿಂಗೋಡಿ, ಪ್ರೀತಮ್ ಡಿ.ಕೆ, ಶಿವಪ್ರಸಾದ್ ಕೆ.ವಿ, ಗಿರಿಜಾ ಶಂಕರ್,ಪ್ರಭಾಕರನ್ ನಾಯರ್ ಸಿ.ಎಚ್, ಹರಿರಾಯ ಕಾಮತ್, ಶ್ರೀಹರಿ ಪೈಂದೋಡಿ, ಸತೀಶ್ ಕೆ.ಜಿ ಮತ್ತಿತರರು ಉಪಸ್ಥಿತರಿದ್ದರು. ರೋಟರಿ ಕ್ಲಬ್ ಸುಳ್ಯ ಕ್ಲಬ್ ಅಧ್ಯಕ್ಷ ಆನಂದ ಖಂಡಿಗ ಸ್ವಾಗತಿಸಿ, ರೋಟರಿ ಕ್ಲಬ್ ಸುಳ್ಯ ಸಿಟಿ ಅಧ್ಯಕ್ಷ ಗಿರೋಶ್ ನಾರ್ಕೋಡು ವಂದಿಸಿದರು. ಪ್ರೀತಮ್ ಡಿ.ಕೆ.ಕಾರ್ಯಕ್ರಮ ನಿರೂಪಿಸಿದರು. ಬಳಿಕ ನಗರದಲ್ಲಿ ಜಾಥಾ ನಡೆಯಿತು.