ಪುಣೆ: ಐಸಿಸಿ ಏಕದಿನ ವಿಶ್ವಕಪ್ 2023 ಕ್ರಿಕೆಟ್ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ಗಳ ಪಟ್ಟಿಯಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅಗ್ರಸ್ಥಾನಕ್ಕೇರಿದ್ದಾರೆ. ಬಾಂಗ್ಲಾದೇಶ ವಿರುದ್ಧ ಪುಣೆಯಲ್ಲಿ ನಡೆದ ಏಕದಿನ ಪಂದ್ಯದಲ್ಲಿ 48 ರನ್ ಗಳಿಸಿದ ರೋಹಿತ್ ಮೊದಲ ಸ್ಥಾನದಲ್ಲಿದ್ದಾರೆ. ಎರಡನೇ ಸ್ಥಾನದಲ್ಲಿ ವಿರಾಟ್ ಕೊಹ್ಲಿ ಅವರಿದ್ದಾರೆ.ರೋಹಿತ್ ಈವರೆಗೆ ಆಡಿರುವ
ನಾಲ್ಕು ಪಂದ್ಯಗಳಲ್ಲಿ 66.25ರ ಸರಾಸರಿಯಲ್ಲಿ 265 ರನ್ ಗಳಿಸಿದ್ದಾರೆ. ಎರಡನೇ ಸ್ಥಾನದಲ್ಲಿರುವ ವಿರಾಟ್ ಕೊಹ್ಲಿ 4 ಪಂದ್ಯದಲ್ಲಿ 259 ರನ್ ಬಾರಿಸಿದ್ದಾರೆ. ನ್ಯೂಝಿಲೆಂಡ್ನ ಡೆವೊನ್ ಕಾನ್ವೆ ಅಷ್ಟೇ ಪಂದ್ಯಗಳಲ್ಲಿ 249 ರನ್ ಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಶೂನ್ಯಕ್ಕೆ ಔಟ್ ಆಗಿದ್ದ ರೋಹಿತ್ ಬಳಿಕ ಅಫ್ಗಾನಿಸ್ತಾನ ವಿರುದ್ಧ ಭರ್ಜರಿ ಶತಕ (131) ಗಳಿಸಿದ್ದರು. ಪಾಕಿಸ್ತಾನ (86) ವಿರುದ್ಧವೂ ಅಬ್ಬರಿಸಿದ್ದರು. ಈಗ ಬಾಂಗ್ಲಾದೇಶ ವಿರುದ್ಧವೂ 48 ರನ್ಗಳ ಅಮೂಲ್ಯ ಇನಿಂಗ್ಸ್ ಕಟ್ಟಿದ್ದಾರೆ. 40 ಎಸೆತಗಳನ್ನು ಎದುರಿಸಿದ ರೋಹಿತ್ ಇನಿಂಗ್ಸ್ನಲ್ಲಿ ಏಳು ಬೌಂಡರಿ ಹಾಗೂ ಎರಡು ಸಿಕ್ಸರ್ ಸೇರಿತ್ತು.ಬಾಂಗ್ಲಾದೇಶ ವಿರುದ್ಧ ಶತಕ(103) ಬಾರಿಸಿದ ವಿರಾಟ್ ಕೊಹ್ಲಿ ಎರಡನೇ ಸ್ಥಾನಕ್ಕೇರಿದ್ದಾರೆ. ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧ 85 ರನ್, ಅಫ್ಘಾನಿಸ್ತಾನ ವಿರುದ್ಧ 55, ಪಾಕಿಸ್ತಾನದ ವಿರುದ್ಧ 16 ರನ್ ಗಳಿಸಿದ್ದರು. 4 ಹಾಗೂ 5ನೇ ಸ್ಥಾನದಲ್ಲಿ ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್ ಹಾಗೂ ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿಕಾಕ್ ಇದ್ಸಾರೆ. ಮೊಹಮ್ಮದ್ ರಿಜ್ವಾನ್ 3 ಪಂದ್ಯದಲ್ಲಿ 248, ಕ್ವಿಂಟನ್ ಡಿಕಾಕ್ 3 ಪಂದ್ಯದಲ್ಲಿ 229.ರಚಿನ್ ರವೀಂದ್ರ 4 ಪಂದ್ಯದಲ್ಲಿ 215 ರನ್ ಗಳಿಸಿದ್ದಾರೆ.