ಸುಳ್ಯ: ಸುಳ್ಯ ನಗರದಲ್ಲಿ ನೀರಿನ ಸರಬರಾಜಿಗೆ ಪೈಪ್ ಅಳವಡಿಕೆಗೆ ತೆಗೆಯಲಾದ ಗುಂಡಿಯನ್ನು ಸರಿಯಾಗಿ ಮುಚ್ಚದೆ ವಾಹನ ಹಾಗೂ ಸಾರ್ವಜನಿಕ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದು ಪ್ರತಿಭಟನೆಯ ಎಚ್ಚರಿಕೆ ನೀಡಲಾಗಿದೆ.ಸುಳ್ಯ ನಗರದಲ್ಲಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಆಲೆಟ್ಟಿ ಕ್ರಾಸ್ನಿಂದ ರಥಬೀದಿಯ ತನಕ ನೀರು ಸರಬರಾಜು ಮಾಡುವ ಉದ್ದೇಶದಿಂದ
ರಸ್ತೆಯ ಪೈಪ್ ಲೈನ್ ಅಳವಡಿಕೆಗೆ ಜೆಸಿಬಿ ಮೂಲಕ ಗುಂಡಿ ಮಾಡಿ ಪೈಪು ಅಳವಡಿಸಿದ ಬಳಿಕ ರಸ್ತೆಯನ್ನು ಸರಿ ಮಾಡದೇ ವಾಹನ ಸಂಚಾರಕ್ಕೆ ತೊಡಕುಂಟಾಗಿದೆ. ರಸ್ತೆ ಬದಿಯಲ್ಲಿ ಮಣ್ಣು ರಾಶಿ ಹಾಕಿ ಸಮತಟ್ಟು ಮಾಡದೇ ವಾಹನ ಗಳು ಓಡಾಟಕ್ಕೆ ಆಗದಂತಾಗಿದೆ. ಜಾತ್ರೆಯ ಸಂದರ್ಭದಲ್ಲಿ ರಸ್ತೆ ದುರಸ್ಥಿ ಮಾಡುವವರು, ರೋಡ್ ಬ್ಲಾಕ್ ಆದಾಗ ಸರಿ ಪಡಿಸುವವರು ಯಾರೂ ಇಲ್ಲದoತಾಗಿದೆ. ಗುಂಡಿ ಮಾಡಿರುವ ಭಾಗದಲ್ಲಿ ಯಾವುದೇ ವಾಹನ ಸಂಚಾರಕ್ಕೆ ಅವಕಾಶ ಇಲ್ಲದoತಾಗಿದೆ. ಆದುದರಿಂದ ಸಂಬಂಧ ಪಟ್ಟವರು ರಸ್ತೆಯನ್ನು ಸರಿಪಡಿಸಿ ಸಂಚಾರ ಯೋಗ್ಯವನ್ನಾಗಿ ಮಾಡಬೇಕು. ಜನವರಿ 8 ರ ಸಂಜೆಯೊಳಗೆ ದುರಸ್ಥಿಪಡಿಸದಿದ್ದಲ್ಲಿ ಸಾರ್ವಜನಿಕರನ್ನು ಸೇರಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ. ಎಸ್. ಗಂಗಾಧರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.