ಸುಳ್ಯ:ಸುಳ್ಯ ನಗರ ವ್ಯಾಪ್ತಿಯ ಕೇರ್ಪಳ ಭಾಗದಲ್ಲಿ ಕಾಡಾನೆಗಳ ಹಿಂಡು ಕೃಷಿ ಹಾನಿ ಮಾಡಿದ ಪ್ರದೇಶಕ್ಕೆ ಸುಳ್ಯ ವಲಯ ಅರಣ್ಯಾಧಿಕಾರಿ ಎನ್.ಮಂಜುನಾಥ್ ನೇತೃತ್ವದ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳೆದ ರಾತ್ರಿ ತೋಟಕ್ಕೆ ನುಗ್ಗಿದ ಕಾಡಾನೆಗಳ ಹಿಂಡು ಕೇರ್ಪಳ ಭಾಗದಲ್ಲಿ
ವ್ಯಾಪಕ ಕೃಷಿ ಹಾನಿ ಮಾಡಿದೆ. ಕಾಡಿನಿಂದ ಪಯಸ್ವಿನಿ ನದಿ ದಾಟಿ ಕೇರ್ಪಳ ಭಾಗಕ್ಕೆ ನುಗ್ಗಿದ ಆನೆಗಳ ಹಿಂಡು ಕೇರ್ಪಳ ತೀರ್ಥರಾಮ, ಲಿಂಗಪ್ಪ ಮಾಸ್ತರ್ ಕೇರ್ಪಳ, ಕೆ.ಸಿ. ಕರಂಬಯ್ಯ ಅವರ ತೋಟಗಳಲ್ಲಿ ಕೃಷಿ ಹಾನಿ ಮಾಡಿದೆ.
ಈ ಮೂರು ತೋಟಗಳಿಗೆ ಭೇಟಿ ನೀಡಿದ ಆರ್ಎಫ್ಒ ಮಂಜುನಾಥ್ ಕೃಷಿ ಹಾನಿಯ ಬಗ್ಗೆ ಪರಿಶೀಲನೆ ನಡೆಸಿದರು. ಕೃಷಿ ಹಾನಿಗೆ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು. ಅದಕ್ಕಾಗಿ ಅರ್ಜಿ ಸಲ್ಲಿಸುವಂತೆ ಅವರು ಸೂಚಿಸಿದರು. ಕಾಡಾನೆ ಹಾವಳಿ ತಡೆಯಲು ಸೋಲಾರ್ ಬೇಲಿ ಸ್ಥಾಪಿಸಲು ಅರಣ್ಯ ಇಲಾಖೆಯಿಂದ ನೀಡುವ ಸಹಾಯಧನದ ವಿವರಗಳನ್ನು ಅವರು ನೀಡಿದರು. ಪ್ರೊಬೇಷನರಿ ಎಸಿಎಫ್ ಶಿವಾನಂದ್ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳು ಇದ್ದರು.
ಆನೆ ಹಾವಳಿಯಿಂದ ಅಪಾರ ಕೃಷಿ ನಷ್ಟವಾಗಿದೆ. ಒಂದು ವಾರದಲ್ಲಿ ಇದು ಎರಡನೇ ಬಾರಿ ಕೃಷಿ ತೋಟಕ್ಕೆ ಆನೆಗಳು ಬರುತ್ತಿರುವುದು. ಆನೆಗಳನ್ಬು ಕಾಡಿಗೆ ಅಟ್ಟಲು ಇಲಾಖೆ ಕೃಗೊಳ್ಳಬೇಕು ಸಾರ್ವಜನಿಕರು ಒತ್ತಾಯಿಸಿದರು.
ತೀರ್ಥರಾಮ ಕೇರ್ಪಳ, ಲಿಂಗಪ್ಪ ಮಾಸ್ತರ್ ಕೇರ್ಪಳ, ಕರುಂಬಯ್ಯ, ಸುನಿಲ್ ಕೇರ್ಪಳ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.