ಸುಳ್ಯ:ಸುಳ್ಯ ತಾಲೂಕು ಸರಕಾರಿ ಸಾರ್ವಜನಿಕ ಆಸ್ಪತ್ರೆಗೆ ರೆಪ್ಕೋ ಹೋಮ್ ಫೈನಾನ್ಸ್ನ ಸಿಎಸ್ಆರ್ ಅನುದಾನದಲ್ಲಿ ಸುಳ್ಯ ರಿಪಾಟ್ರಿಯೇಟ್ ವೆಲ್ಫೇರ್ ಟ್ರಸ್ಟ್ ಮೂಲಕ ವೈದ್ಯಕೀಯ ಉಪಕರಣಗಳನ್ನು ಕೊಡುಗೆಯಾಗಿ ನೀಡಲಾಯಿತು.6.88 ಲಕ್ಷ ರೂ ಮೊತ್ತದಲ್ಲಿ 5 ಐಸಿಯು ಬೆಡ್, ಎರಡು ಇಲೆಕ್ಟ್ರಿಕ್ ವೀಲ್ಚೆಯರ್ಗಳು ಹಾಗೂ
ಎನ್ಎಸ್ಟಿ ಮೆಷಿನ್ ಕೊಡುಗೆಯಾಗಿ ನೀಡಲಾಯಿತು. ಆಸ್ಪತ್ರೆಯ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ರೆಪ್ಕೋ ಬ್ಯಾಂಕ್ ಸುಳ್ಯ ಶಾಖೆಯ ವ್ಯವಸ್ಥಾಪಕ ಕಲೆಯರಸನ್ ಉಪಕರಣಗಳನ್ನು ಹಸ್ತಾಂತರ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಆಸ್ಪತ್ರೆಯ ಆಡಳಿತ ವೈಧ್ಯಾಧಿಕಾರಿ ಡಾ.ನವೀನ್ ಎನ್ .ಎಸ್. ವಹಿಸಿದ್ದರು.
ರಿಪಾಟ್ರಿಯೇಟ್ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷ ಸಂಧ್ಯಾಗು, ರಿಕೋ ಸೊಸೈಟಿ ಅಧ್ಯಕ್ಷ ಶಿವಕುಮಾರ್.ಎಸ್, ಹಿರಿಯ ಕಾರ್ಮಿಕ ಮುಖಂಡ ಸುಬ್ಬಯ್ಯ ಶುಭ ಹಾರೈಸಿದರು. ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಯ ಸದಸ್ಯರಾದ ಚಂದ್ರನ್ ಕೂಟೇಲು ಸ್ವಾಗತಿಸಿ,ರಾಧಾಕೃಷ್ಣ ಪರಿವಾರಕಾನ ವಂದಿಸಿದರು. ಡಾ.ರಜನಿ ಪ್ರಾರ್ಥಿಸಿದರು. ಮುರಳಿ ನಳಿಯಾರು ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ಆಸ್ಪತ್ರೆಯ ವೈಧ್ಯಾಧಿಕಾರಿಗಳಾದ ಡಾ.ಶಿವಕುಮಾರ್, ಡಾ.ರಜನಿ, ಡಾ.ಸೌಮ್ಯ, ಡಾ.ಶಾಲಿನಿ,ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಅಬ್ದುಲ್ ರಝಾಕ್, ವಿಜಯ ಜಯರಾಮ, ಶಹೀದ್ ಪಾರೆ,
ಪ್ರಮುಖರಾದ ರಾಧಾಕೃಷ್ಣ ಬೊಳ್ಳೂರು,ಸತ್ಯಕುಮಾರ್ ಆಡಿಂಜ , ಚೇತನ್ ಕಜೆಗದ್ದೆ, ಭವಾನಿಶಂಕರ ಕಲ್ಮಡ್ಕ , ಜ್ಞಾನಶೀಲನ್ ಕಲ್ಲುಗುಂಡಿ, ಶಂಕರಲಿಂಗಂ ದರ್ಖಾಸ್,ರಾಮಸ್ವಾಮಿ ಆನಂದ, ಶಿವ ಕಡಬ, ಶಿವಕುಮಾರ್ ಕಂದಡ್ಕ, ತಂಗವೇಲು ನಾಗಪಟ್ಟಣ,
ಪೊನ್ನುರಾಜ್, ಅರುಣಾಚಲಂ, ವಿಜಯಕುಮಾರ್, ಪುವೇಂದ್ರನ್ ಕೂಟೇಲು, ಶರವಣ ಬೇಂಗಮಲೆ, ಮೋಹನ ಸುಂದರಂ, ಶಕುಂತಲಾ, ಚಿತ್ರ ಕುಮಾರಿ, ಪರಿಮಳ, ಮಂಜುನಾಥ ಕಂದಡ್ಕ,ಸುರೇಶ್ ಕಂದಡ್ಕ, ಪುನಿತ್, ಸದಾನಂದ, ಚಂದ್ರಶೇಖರ ಕಂದಡ್ಕ,
ಗಣೇಶ್ ಜಟ್ಟಿಪಳ್ಳ, ಸೆಬಾಸ್ಟಿಯನ್, ರಕ್ಷಿತ್ ಗೂನಡ್ಕ, ಶ್ರವಣ್ ಬಾರ್ಪಣೆ, ಬಾಲಸುಬ್ರಹ್ಮಣ್ಯ ಕೂಟೇಲು ಉಪಸ್ಥಿತರಿದ್ದರು.





