ಸುಳ್ಯ: 2025 ಜನವರಿ 26 ರಂದು ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪೆರೇಡ್ ಗೆ ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಮೂವರು ಏನ್ ಸಿ ಸಿ ಕೆಡೆಟ್ಗಳು ಆಯ್ಕೆಯಾಗಿರುತ್ತಾರೆ.ಅಂತಿಮ ಬಿ.ಎ ವಿಭಾಗದ
ಸಿ.ಎಸ್.ಯು.ಒ ಚೇತನ್ ಕೆ ಇವರು ಕರ್ತವ್ಯಪಥ್ ಪೆರೇಡ್ ಗೆ ಆಯ್ಕೆಯಾಗಿರುತ್ತಾರೆ. ಅಂತಿಮ ಬಿ.ಕಾಂ ನ ಸಿ.ಯು.ಒ ಕೃಷ್ಣ ಕೆ.ಎಲ್ ಇವರು ಪ್ರಧಾನ ಮಂತ್ರಿ ರಾಲಿ ಮತ್ತು ಫ್ಲ್ಯಾಗ್ ಏರಿಯಾ ವಿಭಾಗಕ್ಕೆ ಆಯ್ಕೆಯಾಗಿರುತ್ತಾರೆ. ದ್ವಿತೀಯ ಬಿಸಿಎ ವಿದ್ಯಾರ್ಥಿನಿ ಎಸ್.ಜಿ.ಟಿ ಚಲನಾ .ಟಿ ಇವರು ಕರ್ತವ್ಯಪಥ್ ಪೆರೇಡ್ ಗೆ ಆಯ್ಕೆಯಾಗಿರುತ್ತಾರೆ. ಇವರಿಗೆ ಕಾಲೇಜಿನ ಎನ್.ಸಿ.ಸಿ ಅಧಿಕಾರಿಗಳಾಗಿರುವ ಲೆಫ್ಟಿನೆಂಟ್ ಸೀತಾರಾಮ್.ಎಂ.ಡಿ ಮಾರ್ಗದರ್ಶನವನ್ನು ನೀಡಿರುತ್ತಾರೆ.