ಧರ್ಮಶಾಲಾ: ಐಪಿಎಲ್ನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಆರ್ಸಿಬಿ ಬ್ಯಾಟರ್ಗಳು ಪಂಜಾಬ್ ಕಿಂಗ್ಸ್ ವಿರುದ್ಧ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 241 ರನ್ ಕಲೆ ಹಾಕಿದರು. ಟಾಸ್ ಗೆದ್ದ ಪಂಜಾಬ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭಿಕ ಬ್ಯಾಟರ್ ವಿರಾಟ್ ಕೊಹ್ಲಿ 92 ರನ್ ಬಾರಿಸಿದರು. 42 ಎಸೆತಗಳಲ್ಲಿ 7 ಬೌಂಡರಿ ಮತ್ತು
6 ಸಿಕ್ಸರ್ ಸಿಡಿಸುವ ಮೂಲಕ ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡಿದರು. ಯುವ ಬ್ಯಾಟರ್ ರಜತ್ ಪಾಟಿದಾರ್ 23 ಎಸೆತಗಳಲ್ಲಿ ಬೌಂಡರಿ ಹಾಗೂ 6 ಸಿಕ್ಸರ್ ಸಹಿತ 55 ರನ್ ಚಚ್ಚಿದರು. ಈ ಇಬ್ಬರ 76 ರನ್ಗಳ ಜತೆಯಾಟ ಆರ್ಸಿಬಿಗೆ ಬೃಹತ್ ಮೊತ್ತ ದಾಖಲಿಸಲು ನೆರವಾದವು.ಪಂದ್ಯದ ಮಧ್ಯದಲ್ಲಿ ಮಳೆಯಿಂದಾಗಿ ಕೆಲ ಕಾಲ ಆಟ ಸ್ಥಗಿತಗೊಂಡಿತು. ನಂತರ ಮಳೆ ನಿಂತಿದ್ದರಿಂದ ಅಂಪೈರ್ಗಳ ನಿರ್ಧಾರದಂತೆ ಕೂಡಲೇ ಪಂದ್ಯ ಮತ್ತೆ ಆರಂಭವಾಯಿತು.
ಆರ್ಸಿಬಿ ಪರ ವಿಲ್ ಜ್ಯಾಕ್ಸ್ 12, ಫಫ್ ಡುಪ್ಲೆಸಿಸ್ 9, ಮಹಿಪಾಲ್ 0 ಹಾಗೂ ದಿನೇಶ್ ಕಾರ್ತಿಕ್ 18 ರನ್ ಗಳಿಸಿದರು. ಕೊನೆಯ ಓವರ್ನಲ್ಲಿ 3 ವಿಕೆಟ್ ಕಳೆದುಕೊಂಡ ಆರ್ಸಿಬಿಯ ಮೊತ್ತ 250 ದಾಟುವುದಕ್ಕೆ ತಡೆಯಾಯಿತು. ಕ್ಯಾಮರೂನ್ 46 ರನ್ ಗಳಿಸಿದರು.
ಪಂಜಾಬ್ ಪರ ಹರ್ಷಲ್ ಪಟೇಲ್ 3 ವಿಕೆಟ್ ಪಡೆದರು.
ವಿದ್ವತ್ ಕಾವೇರಪ್ಪ 2 , ಸ್ಯಾಮ್ ಕರನ್, ಅರ್ಶದೀಪ್ ಸಿಂಗ್ ತಲಾ 1 ವಿಕೆಟ್ ಪಡೆದರು.