ಸುಳ್ಯ; ತನ್ನ ನಿರ್ದೇಶನದ ಹೊಸ ಚಿತ್ರ ‘ರವಿಕೆ ಪ್ರಸಂಗ’ ಕುಟುಂಬ ಸಮೇತ ಬಂದು ನೋಡಿ ಸಂತಸ ಪಡಬಹುದಾದ ಸಿನಿಮಾ. ಎಲ್ಲರೂ ಬಂದು ಸಿನಿಮಾ ನೋಡಿ ಬೆಂಬಲ ನೀಡಬೇಕು ಎಂದು ಚಿತ್ರದ ನಿರ್ದೇಶಕ ಸಂತೋಷ್ ಕೊಡೆಂಕೇರಿ ಹೇಳಿದ್ದಾರೆ. ಫೆ.16 ರಂದು ಬಿಡುಗಡೆಯಾಗಲಿರುವ ‘ರವಿಕೆ ಪ್ರಸಂಗ’ ಚಿತ್ರದ ಪ್ರಚಾರಾರ್ಥ ಅಟೋರಿಕ್ಷಾಗಳಿಗೆ ಪೋಸ್ಟರ್ ಅಂಟಿಸುವ ಅಭಿಯಾನಕ್ಕೆ ಇಂದು ಸುಳ್ಯದ
ಸದರ್ನ್ ರೆಸಿಡೆನ್ಸಿ ಹೋಟೆಲ್ ಬಳಿಯಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು. ವಿಭಿನ್ನ ಕಥಾ ಹಂದರ ಹೊಂದಿರುವ ಫ್ಯಾಮಿಲಿ ಎಂಟರ್ಟೈನರ್ ಚಿತ್ರ ರವಿಕೆ ಪ್ರಸಂಗ ಸಿನಿಮಾ ಕರ್ನಾಟಕದಲ್ಲಿ ಫೆ.16 ರಂದು ಬಿಡುಗಡೆ ಆಗಲಿದೆ. ಇತರ ರಾಜ್ಯಗಳಲ್ಲಿಯೂ ಚಿತ್ರ ಬಿಡುಗಡೆಗೊಳ್ಳಲಿದೆ. ಸುಳ್ಯ, ಸಂಪಾಜೆ, ತೊಡಿಕಾನ, ಜಯನಗರ ಮತ್ತಿತರ ಸುಂದರ ಪ್ರದೇಶಗಳಲ್ಲಿ ಸಿನಿಮಾ ಚಿತ್ರೀಕರಿಸಲಾಗಿದೆ. ಎಲ್ಲಾ ವರ್ಗದ ಜನರೂ ನೋಡಿ ಎಂಜಾಯ್ ಮಾಡಬಹುದಾದ ಮತ್ತು ಎಲ್ಲರಿಗೂ ಇಷ್ಟವಾಗುವ ರೀತಿಯಲ್ಲಿ ಚಿತ್ರ ಮೂಡಿ ಬಂದಿದೆ ಎಂದು ಅವರು ಹೇಳಿದರು.
ಸುಳ್ಯದ ಅಟೋರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ರಾಧಾಕೃಷ್ಣ ಬೈತಡ್ಕ ಹಾಗೂ ರವಿಕೆ ಪ್ರಸಂಗ ಸಿನಿಮಾ ನಿರ್ದೇಶಕ ಸಂತೋಷ್ ಕೊಡೆಂಕಿರಿ ರಿಕ್ಷಾಗಳಿಗೆ ಪೋಸ್ಟರ್ ಅಂಟಿಸುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು.ರವಿಕೆ ಪ್ರಸಂಗ ಸಿನಿಮಾದ ಕಥೆ ಸಂಭಾಷಣೆ ರಚಿಸಿದ ಪಾವನಾ ಸಂತೋಷ್, ನ.ಪಂ. ಸದಸ್ಯ ಹಾಗೂ ದೃಷ್ಟಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ನಿವೃತ್ತ ಪ್ರಾಂಶುಪಾಲ ಬಾಲಕೃಷ್ಣ ಭಟ್ ಕೊಡೆಂಕಿರಿ, ನ.ಪಂ.ಸದಸ್ಯೆ ಶಿಲ್ಪಾ ಸುದೇವ್, ಸುಮತಿ ಜಯನಗರ, ರಿಕ್ಷಾ ಚಾಲಕರ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು. ಸುಳ್ಯದ ವಿವಿಧ ಕಡೆಗಳಲ್ಲಿ ಅಟೋ ರಿಕ್ಷಾಗಳಿಗೆ ಪೋಸ್ಟರ್ ಅಂಟಿಸಿ ಪ್ರಚಾರ ನಡೆಸಲಾಗುವುದು ಎಂದು ಸಂತೋಷ್ ಕೊಡೆಂಕಿರಿ ಹೇಳಿದರು.