ಸುಳ್ಯ:ರಾಷ್ಟ್ರ ಸೇವಿಕ ಸಮಿತಿ ವಿಜಯದಶಮಿ ಪ್ರಯುಕ್ತ ಸುಳ್ಯದಲ್ಲಿ ಪಥ ಸಂಚಲನ ಅ.18 ರಂದು ನಡೆಯಿತು.ಸುಳ್ಯದ ಜ್ಯೋತಿ ವೃತ್ತದಿಂದ ಆರಂಭ ಗೊಂಡ ಪಥ ಸಂಚಲನ ಸುಳ್ಯ ಮುಖ್ಯರಸ್ತೆಯಾಗಿ ಸಾಗಿ
ಗಾಂಧಿನಗರ, ರಥಬೀದಿಯಾಗಿ ಸಾಗಿ ಚೆನ್ನಕೇಶವ ದೇವಸ್ಥಾನದ ಎದುರು ಸಮಾಪನಗೊಂಡಿತು.ಶಾಸಕಿ ಭಾಗೀರಥಿ ಮುರುಳ್ಯ ಸಹಿತ ನೂರಾರು ಮಂದಿ ಪಥ ಸಂಚಲನದಲ್ಲಿ ಭಾಗವಹಿಸಿದ್ದರು. ಚೆನ್ನಕೇಶವ ದೇವಸ್ಥಾನದ ಬಳಿ ಸಭಾ ಕಾರ್ಯಕ್ರಮ ನಡೆಯಿತು.ರಾಷ್ಟ್ರ ಸೇವಿಕಾ ಸಮಿತಿಯ ಹೊಯ್ಸಳ ಪ್ರಾಂತ – ಮಂಗಳೂರು ವಿಭಾಗ ಪುತ್ತೂರು ಜಿಲ್ಲೆ ಇದರ ಆಶ್ರಯದಲ್ಲಿ ವಿಜಯದಶಮಿ ಪ್ರಯುಕ್ತ ಆಕರ್ಷಕ ಪಥ ಸಂಚಲನ ಹಮ್ಮಿಕೊಳ್ಳಲಾಯಿತು.