ಸುಳ್ಯ: ಮಕ್ಕಳ ಬದುಕಿನ ವರ್ಣ ಲೋಕ ಬೇಸಿಗೆ ರಜಾ ದಿನಗಳು. ಆ ಬೇಸಿಗೆ ರಜೆಯನ್ನು ಇನ್ನಷ್ಟು ಆಕರ್ಷಕವಾಗಿಸಲು ಬಣ್ಣ ಬೇಸಿಗೆ ಶಿಬಿರ ಆಯೋಜಿಸಲಾಗಿದೆ. ಸುಳ್ಯದ ಸಾಂಸ್ಕೃತಿಕ ಮತ್ತು ಕಲಾ ಶಾಲೆ ರಂಗಮಯೂರಿಯ ರಾಜ್ಯಮಟ್ಟದ ಬೇಸಿಗೆ ಶಿಬಿರ ‘ಬಣ್ಣ’. ಕಳೆದ ಹಲವು ವರ್ಷಗಳಿಂದ ಆಕರ್ಷಕ ಮತ್ತು ವೈವಿಧ್ಯಮಯ ಶಿಬಿರ ನಡೆಸಿರುವ ರಂಗಮಯೂರಿಯ ಶಿಬಿರದ ಬಣ್ಣದ ಲೋಕ ಎಪ್ರಿಲ್ 9ರಿಂದ ತೆರೆದುಕೊಳ್ಳಲಿದೆ. ಎಪ್ರಿಲ್ 9 ರಿಂದ 17 ರ ತನಕ
ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದ ಸಭಾಂಗಣದಲ್ಲಿ ಬಣ್ಣ ನಡೆಯಲಿದೆ.ಪ್ರಶಾಂತ ವಾದ ವಾತಾವರಣದಲ್ಲಿ ಪ್ರಕೃತಿಯೊಡನೆ ಬೆರೆತು ಹಾಡು,ನಗು ಖುಷಿಯೊಂದಿಗೆ ಸಹಬೋಜನದ ಕ್ಷಣಗಳು. ಹಿಂದೆ ನಮ್ಮ ಹಿರಿಯರು ಪ್ರಕೃತಿಯನ್ನೇ ನಂಬಿ ಅದನ್ನೇ ಪೂಜಿಸಿ,ಪರಿಸರದಲ್ಲಿ ಸಿಗುವ ಬಿದಿರು,ಬೆತ್ತವನ್ನು ಉಪಯೋಗಿಸಿ ಗೃಹ ಬಳಕೆಗೆ,ಕೃಷಿಗೆ,ಮನರಂಜನೆಗೆ ಉಪಯೋಗಿಸುತ್ತಿದ್ದರು.ಈಗ ಎಲ್ಲವೂ ಕೃತಕವಾಗಿದೆ. ಹಾಗಾಗಿ ಆ ಬದುಕನ್ನು ನೆನಪಿಸುವ ಸಮಯ.ಒಂದು ಹಂತದಲ್ಲಿ ನಾವೆಲ್ಲರೂ ಆಧುನೀಕರಣಕ್ಕೆ ಮಾರುಹೋಗಿದ್ದೆವು. ಆದರೆ ಈಗ ಮತ್ತೆ
ಆಧುನೀಕರಣದಿಂದ ಹಳ್ಳಿಯ ಗ್ರಾಮ್ಯದ ಕಡೆ ಮರಳುತ್ತಿದ್ದೇವೆ.ಮಕ್ಕಳಿಗೆ ಹಳ್ಳಿಯ ಬದುಕನ್ನು ಮತ್ತೆ ನೆನಪಿಸಿ ಕೊಡುವುದೇ ಶಿಬಿರದ ಉದ್ದೇಶ. ದೇಸೀಯತೆಯ ಜೊತೆಗೆ ಕಲಿಕೆ ಮತ್ತು ಪ್ರಾತ್ಯಕ್ಷಿಕೆ
ಮಕ್ಕಳಿಗೇನು ಬೇಕು,ಮಕ್ಕಳ ನಾಡಿ ಮಿಡಿತ ಅರಿತು ಮಕ್ಕಳೊಡನೆ ಮಕ್ಕಳಾಗುವ ರಾಜ್ಯದ ಹಲವು ಮಕ್ಕಳ ಶಿಬಿರದಲ್ಲಿ ಭಾಗವಹಿಸಿದ ಸಂಪನ್ಮೂಲ ವ್ಯಕ್ತಿಗಳು
ಜೊತೆಗೆ ಸಂವಿದಾನದ ಮಹತ್ವ,ಜನಪದ ಕಲೆಗಳ ಅರಿವು,ಪ್ರಥಮ ಚಿಕಿತ್ಸೆ, ಬೆಂಕಿ ಅನಾಹುತದ ಬಗ್ಗೆ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ. ಎಲ್ಲರೂ ಒಂದಾಗಿ ಒಂದೇ ಸೂರಿನಡಿ ಹಾಡಿ ಕುಣಿವ ಸಮಯ, ದೇಸಿಯತೆಯನ್ನು ಸಾರುವ,ಹಾಡುಗಳು,ಪಾಡ್ದನಗಳು,ಕುಣಿತ,ನಾಟಕ..ಸಂಪನ್ಮೂಲ ವ್ಯಕಿಗಳ ಜೊತೆಗೆ ಇಪ್ಪತ್ತಕ್ಕೂ ಹೆಚ್ಚು ಮೇಲ್ವಿಚಾರಕರು
ಕಳೆದ ಐದು ವರ್ಷದಿಂದ ಮಕ್ಕಳ ಸಾಂಸ್ಕೃತಿಕ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿದ ರಂಗ ಮಯೂರಿ ಕಲಾಶಾಲೆ
ರಾಜ್ಯಮಟ್ಟದ ಅತ್ಯುತ್ತಮ ಕಲಾಶಾಲೆಗಳಲ್ಲಿ ಒಂದು. ಹೌದು
ಏ.9ರಿಂದ 17 ಕಾಯರ್ತೋಡಿಯಲ್ಲಿ ತೆರೆದು ಕೊಳ್ಳಲಿದೆ ‘ಬಣ್ಣದ ಲೋಕ’: ರಂಗಮಯೂರಿ ಕಲಾಶಾಲೆಯ ಆಕರ್ಷಕ ಬೇಸಿಗೆ ಶಿಬಿರಕ್ಕೆ ದಿನ ಗಣನೆ- ನೋಂದಾವಣೆ ಆರಂಭಗೊಂಡಿದೆ.
ಶಿಬಿರದ ನೋಂದಣಿ ಆರಂಭಗೊಂಡಿದೆ. ಎಪ್ರಿಲ್ 7ರ ತನಕ ನೋಂದಾವಣೆ ಮಾಡಿಕೊಳ್ಳಬಹಿದು. ಸೀಮಿತ ಸಂಖ್ಯೆ ಶಿಬಿರಾರ್ಥಿಗಳಿಗೆ ಅವಕಾಶ ಇದ್ದು ಮೊದಲು ನೋಂದಾವಣೆ ಮಾಡಿದವರಿಗೆ ಆದ್ಯತೆ ನೀಡಲಾಗುತ್ತದೆ.
ದೇಸೀ ಕಲೆಗಳ ಅನಾವರಣಕ್ಕೆ ಶಿಬಿರ ಈ ಬಾರಿ ವಿಶೇಷ ಆದ್ಯತೆ ನೀಡಲಿದೆ. ಮರೆತು ಹೋದ ದೇಸೀ ಕಲೆಗಳನ್ನು ಶಿಬಿರದಲ್ಲಿ ಮಕ್ಕಳಿಗೆ ಪರಿಚಯಿಸಿ ಕಲಿಸಲಾಗುವುದು.ದೇಸೀ ಆಟಗಳು, ಜಾನಪದ ಹಾಡುಗಳು, ದೇಸೀ ವಸ್ತುಗಳ ತಯಾರಿಕೆ, ಪ್ರಾತ್ಯಕ್ಷಿಕೆ ಕಲಿಸುವುದರ ಜೊತೆಗೆ ಮಕ್ಕಳಿಗೆ ರಂಗ ತರಬೇತಿ, ನಾಟಕ ರಚನೆ-ನಿರ್ಮಾಣ, ಜನಪದ ಹಾಡು, ನೃತ್ಯ ಕಲಿಸಲಾಗುತ್ತದೆ. ದೇಶಭಕ್ತಿಯ ಗಾನ, ಸಂವಿಧಾನ ಪಠಣದ ಜೊತೆಗೆ ಇತರ ಚಟುವಟಿಕೆಗಳು ಇರಲಿದೆ. ಒಟ್ಟಿನಲ್ಲಿ ಪ್ರತಿ ಕ್ಷಣವೂ ಕಲಿಕೆ, ಪ್ರತಿ ಗಳಿಗೆಯೂ ಖುಷಿಯ ನಗು ಹಂಚುವ ಮಕ್ಕಳ ಕನಸಿನ ಬಣ್ಣದ ಹಬ್ಬಕ್ಕೆ ಇನ್ನು ಕೆಲವೇ ದಿನಗಳು ಮಾತ್ರ ಬಾಕಿ. ಮಕ್ಕಳ ರಜೆಯ ಮಜಾಕ್ಕೆ ಖುಷಿಯ ನಗುವಿಗೆ ಕ್ಷಣಗಣನೆ ಶುರುವಾಗಿದೆ.
ಬೆಳಿಗ್ಗೆ 8.45ರಿಂದ ಸಂಜೆ 5 ಗಂಟೆಯ ತನಕ ಶಿಬಿರ ನಡೆಯಲಿದೆ. 7 ರಿಂದ 17 ವರ್ಷದವರೆಗಿನ ಮಕ್ಕಳಿಗೆ ಭಾಗವಹಿಸಲು ಅವಕಾಶ ಇದೆ.
ಮತ್ತೆ ತಡವೇಕೆ..? ಆಸಕ್ತ ವಿದ್ಯಾರ್ಥಿಗಳು ಈ ಕೆಳಗಿನ ಸಂಖ್ಯೆ 9611355496 ಸಂಪರ್ಕಿಸಿ ಅಥವಾ ಪೋಸ್ಟರ್ನಲ್ಲಿ ನಮುದಿಸಿದ ಸಂಖ್ಯೆಗಳನ್ನು ಸಂಪರ್ಕಿಸಿ ನೋಂದಾಯಿಸಿಕೊಳ್ಳಬಹುದು ಎಂದು ರಂಗಮಯೂರಿ ಶಾಲೆಯ ನಿರ್ದೇಶಕ ಲೋಕೇಶ್ ಊರುಬೈಲು ತಿಳಿಸಿದ್ದಾರೆ.