ಸುಳ್ಯ: ಸುಳ್ಯದ ಸಾಂಸ್ಕೃತಿಕ ಕಲಾ ಕೇಂದ್ರ ರಂಗಮಯೂರಿ ಕಲಾಶಾಲೆಯ ವತಿಯಿಂದ ಊರುಬೈಲಿನ ಭಗವಾನ್ ಸಂಘದ ಸಹಯೋಗದಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗಾಗಿ ಮೇ.1ರಿಂದ 4ರ ತನಕ ಸಂಪಾಜೆಯಲ್ಲಿ ವಿಶೇಷ ರಂಗ ಶಿಬಿರ ಹಮ್ಮಿಕೊಳ್ಳಲಾಗಿದೆ. ಮೇ.1ರಿಂದ 4 ರ ತನಕ ಪೂ.9ರಿಂದ ಸಂಜೆ 5ರ ತನಕ ಸಂಪಾಜೆಯ
ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಶಿಬಿರ ನಡೆಯಲಿದೆ. ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನಡೆಯಲಿದೆ.ಶಿಬಿರದಲ್ಲಿ ರಂಗಾಟಗಳು, ರಂಗ ಗೀತೆ, ರಂಗ ನಡೆ, ಹಾವ ಭಾವ, ಅಭಿನಯ, ಮಾತುಗಾರಿಕೆ, ಮುಖವಾಡ, ಆರ್ಟ್ & ಕ್ರಾಪ್ಟ್, ದೇಸಿ ಆಟಗಳು, ಪ್ರಥಮ ಚಿಕಿತ್ಸೆ, ಬೆಂಕಿ ಅನಾಹುತದ ಬಗ್ಗೆ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಇರಲಿದೆ. ಸೀಮಿತ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ಇದ್ದು ಕೂಡಲೇ ನೋಂದಾಯಿಸಿ ಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ 9611355496/ 6363783983 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ರಂಗಮಯೂರಿ ಕಲಾಶಾಲೆಯ ನಿರ್ದೇಶಕ ಲೋಕೇಶ್ ಊರುಬೈಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.