ಸಂಪಾಜ: ಸುಳ್ಯ ರಂಗಮಯೂರಿ ಕಲಾಶಾಲೆಯ ವತಿಯಿಂದ ಶ್ರೀ ಭಗವಾನ್ ಸಂಘ ಊರುಬೈಲು ಸಹಯೋಗದೊಂದಿಗೆ ರಂಗಶಿಬಿರ ಶ್ರೀ ಪಂಚಲಿಗೇಶ್ವರ ದೇವಸ್ಥಾನ ಸಂಪಾಜೆಯಲ್ಲಿ ಆರಂಭಗೊಂಡಿತು.ಸಂಪಾಜೆ ಪಯಸ್ವಿನಿ ಪ್ರಾಥಮಿಕ ಕೃಷಿಪತ್ತಿನ ಸಹಾಕರ ಸಂಘದ
ಅಧ್ಯಕ್ಷ ಎನ್.ಸಿ. ಅನಂತ್ ಊರುಬೈಲು ಶಿಬಿರ ಉದ್ಘಾಟಿಸಿದರು. ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಂಘದ ಉಪಾಧ್ಯಕ್ಷ ರಾಜಾರಾಮ್ ಕಳಗಿ, ಶ್ರೀ ಭಗವಾನ್ ಸಂಘ ಊರುಬೈಲು ಇದರ ಕಾರ್ಯದರ್ಶಿ ಪ್ರಶಾಂತ್ ಊರುಬೈಲು ಉಪಸ್ಥಿತರಿದ್ದರು.
ರಂಗಮಯೂರಿ ಕಲಾಶಾಲೆ ನಿರ್ದೇಶಕರಾದ ಲೋಕೇಶ್ ಊರುಬೈಲು ಸ್ವಾಗತಿಸಿದರು, ವಿದ್ಯಾರ್ಥಿ ಸಿಂಚನ ಪುತ್ತಿಲ ವಂದಿಸಿದರು. ಶಶಿಕಾಂತ್ ಮಿತ್ತೂರು ಕಾರ್ಯಕ್ರಮ ನಿರೂಪಿಸಿದರು. ಮೇ.1ರಿಂದ 4ರ ತನಕ ನಡೆಯುವ 4 ದಿನಗಳ ಶಿಬಿರದಲ್ಲಿ
ರಂಗಾಟಗಳು , ರಂಗಗೀತೆ,ರಂಗನಡೆ , ಮಾತುಗಾರಿಕೆ,ಅಭಿನಯ, ಆರ್ಟ್ &ಕ್ರಾಫ್ಟ್, ಪ್ರಥಮಚಿಕಿತ್ಸೆ, ಇವುಗಳ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ನಡೆಸಲಾಗುವುದು. ಪ್ರಮುಖ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಲಿದ್ದಾರೆ.