ಸುಳ್ಯ:ಸುಳ್ಯ ತಾಲೂಕು ಸಮಸ್ತ ಸಂಯುಕ್ತ ಜಮಾಅತ್ ವತಿಯಿಂದ ಸುಳ್ಯ ತಾಲ್ಲೂಕಿನ 15 ಜಮಾಅತ್ಗಳ ಸುಮಾರು 80ಫಲಾನುಭವಿಗಳಿಗೆ ರಂಜಾನ್ ಕಿಟ್ಗಳನ್ನು ವಿತರಣೆ ಮಾಡಲಾಯಿತು. ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ ಶಾಹಿದ್ ತೆಕ್ಕಿಲ್ ಕಿಟ್ಗಳನ್ನು ವಿತರಿಸಿದರು. ಅಧ್ಯಕ್ಷತೆಯನ್ನು
ಉಪಾಧ್ಯಕ್ಷ ಹಾಜಿ ಇಬ್ರಾಹಿಂ ಕತ್ತರ್ ವಹಿಸಿದರು, ಕೋಶಾಧಿಕಾರಿ ಹಮೀದ್ ಹಾಜಿ ದುವಾ ನೆರವೇರಿಸಿದರು, ತಾಜ್ ಮೊಹಮ್ಮದ್ ಸಂಪಾಜೆ, ಸಿ ಎಚ್ ಮೊಹಮ್ಮದ್ ಪೈಂಬಚಾಲ್, ಹಂಸ ಅಜ್ಮಿರ್ ದೊಡ್ಡತೋಟ, ಕೆ.ಎಂ. ಅಬೂಬಕ್ಕರ್ ಪಾರೆಕ್ಕಲ್, ಹಾಜಿ ಅಹಮದ್ ಸುಪ್ರೀಂ, ಹಾಜಿ ಅಹಮದ್ ಪಾರೆ, ಸಂಪಾಜೆ ಜುಮಾ ಮಸೀದಿ ಅಧ್ಯಕ್ಷ ಮೊಹಮ್ಮದ್ ಹಮಿದಿ ಯಾ, ಹಾಜಿ ಅಬ್ದುಲ್ ಖಾದರ್ ಅಜ್ಜಾವರ, ಶರೀಫ್ ರಿಲ್ಯಾಕ್ಸ್, ಜಮಾಲ್ ಬೆಳ್ಳಾರೆ, ಐವರ್ನಾಡ್ ಜುಮಾ ಮಸೀದಿ ಅಧ್ಯಕ್ಷ ಶರೀಫ್ ನೀಡುಬೆ, ಅಬೂಬಕ್ಕರ್ ಐವರ್ನಾಡ್, ಅಬ್ದುಲ್ಲ ಕನಕಮಜಲು, ಎ ಬಿ ಮೊಯಿದಿನ್ ಕಳಂಜ, ಇಸ್ಮಾಯಿಲ್ ಸಂಪಾಜೆ, ಪೇರಡಕ್ಕ ಜುಮಾ ಮಸೀದಿ ಕಾರ್ಯದರ್ಶಿ ಕೆ ಎಂ ಇಸ್ಮಾಯಿಲ್, ಸಿನಾನ್ ದರ್ಕಾಸ್ ಮೊದಲಾವರು ಉಪಸ್ಥಿತರಿದ್ದರು, ಪ್ರದಾನ ಕಾರ್ಯದರ್ಶಿ ಅಶ್ರಫ್ ಗುಂಡಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು









