ಬೆಂಗಳೂರು: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತರ ಪಟ್ಟಿಯನ್ನು ರಾಜ್ಯ ಸರ್ಕಾರ ಬಿಡುಗಡೆಗೊಳಿಸಿದ್ದು, ಈ ಬಾರಿ 69 ಮಂದಿ ಸಾಧಕರಿಗೆ ಪ್ರಶಸ್ತಿ ಘೋಷಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಂಘ ಸಂಸ್ಥೆ ಸೇರಿ ವೈಯಕ್ತಿಕವಾಗಿ ಒಟ್ಟು 69 ರಾಜ್ಯೋತ್ಸವ ಪ್ರಶಸ್ತಿಯನ್ನು ಈ ಬಾರಿ ಘೋಷಣೆ ಮಾಡಲಾಗಿದೆ. ಇದರ ಜೊತೆ ವಿವಿಧ ಸಾಧನೆ ಮಾಡಿದ
50 ಪುರುಷರ ಹಾಗೂ 5೦ ಮಂದಿ ಮಹಿಳಾ ಸಾಧಕರಿಗೆ ಸುವರ್ಣ ಕರ್ನಾಟಕ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿದೆ. ಸಾಹಿತ್ಯ ಕ್ಷೇತ್ರದಲ್ಲಿ ಬಿ.ಟಿ.ಲಲಿತಾ ನಾಯಕ್, ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯಿಲಿ ಸೇರಿ ಪ್ರಮುಖರ ಹೆಸರು ಘೋಷಿಸಲಾಗಿದೆ.
ಪ್ರಶಸ್ತಿ ವಿಜೇತರ ವಿವರ:
ಜಾನಪದ:ಇಮಾಮ್ಸಾಬ್ ಎಂ. ವಲ್ಲೆಪನವರ(ಧಾರವಾಡ), ಅಶ್ವರಾಮಣ್ಣ(ಬಳ್ಳಾರಿ), ಕುಮಾರಯ್ಯ(ಹಾಸನ), ವೀರಭದ್ರಯ್ಯ(ಚಿಕ್ಕಬಳ್ಳಾಪುರ), ನರಸಿಂಹಲು(ಅಂಧ ಕಲಾವಿದ-ಬೀದರ್), ಬಸವರಾಜ ಸಂಗಪ್ಪ ಹಾರಿವಾಳ(ವಿಜಯಪುರ), ಎಸ್.ಜಿ.ಲಕ್ಷ್ಮೀದೇವಮ್ಮ (ಚಿಕ್ಕಮಗಳೂರು), ಪಿಚ್ಚಳ್ಳಿ ಶ್ರೀನಿವಾಸ(ಕೋಲಾರ), ಲೋಕಯ್ಯಶೇರ(ಭೂತಾರಾಧನೆ-ದಕ್ಷಿಣ ಕನ್ನಡ).
ಚಲನಚಿತ್ರ/ಕಿರುತೆರೆ:ಹೇಮಾ ಚೌಧರಿ(ಬೆಂಗಳೂರು ನಗರ), ಎಂ.ಎಸ್.ನರಸಿಂಹಮೂರ್ತಿ(ಬೆಂಗಳೂರು ನಗರ).
ಸಂಗೀತ:ಪಿ.ರಾಜಗೋಪಾಲ(ಮಂಡ್ಯ), ಎ.ಎನ್.ಸದಾಶಿವಪ್ಪ(ರಾಯಚೂರು).
ನೃತ್ಯ: ವಿದುಷಿ ಲಲಿತಾ ರಾವ್(ಮೈಸೂರು).
ಆಡಳಿತ: ನಿವೃತ್ತ ಐಎಎಸ್ ಅಧಿಕಾರಿ ಎಸ್.ವಿ.ರಂಗನಾಥ್(ಬೆಂಗಳೂರು ನಗರ).
ವೈದ್ಯಕೀಯ: ಡಾ.ಜಿಬಿ.ಬಿಡಿನಹಾಳ(ಗದಗ), ಡಾ.ಮೈಸೂರು ಸತ್ಯನಾರಾಯಣ(ಮೈಸೂರು), ಡಾ.ಲಕ್ಷ್ಮಣ್ ಹನುಮಪ್ಪ ಬಿದರಿ(ವಿಜಯಪುರ).
ಸಮಾಜಸೇವೆ: ವೀರಸಂಗಯ್ಯ(ವಿಜಯನಗರ), ಹೀರಾಚಂದ್ ವಾಗ್ಮಾರೆ(ಬೀದರ್), ಮಲ್ಲಮ್ಮ ಸೂಲಗಿತ್ತಿ(ರಾಯಚೂರು), ದಿಲೀಪ್ ಕುಮಾರ್(ಚಿತ್ರದುರ್ಗ).
ಸಂಕೀರ್ಣ: ಹುಲಿಕಲ್ ನಟರಾಜ(ತುಮಕೂರು), ಡಾ.ಎಚ್.ಆರ್.ಸ್ವಾಮಿ(ಚಿತ್ರದುರ್ಗ), ಅ.ನ.ಪ್ರಹ್ಲಾದ್ ರಾವ್ (ಕೋಲಾರ), ಕೆ.ಅಜೀತ್ ಕುಮಾರ್ ರೈ(ಬೆಂಗಳೂರು ನಗರ), ಇರ್ಫಾನ್ ರಝಾಕ್ (ವಾಸ್ತುಶಿಲ್ಪ-ಬೆಂಗಳೂರು ನಗರ), ವಿರೂಪಾಕ್ಷ ರಾಮಚಂದ್ರಪ್ಪ ಹಾವನೂರ(ಹಾವೇರಿ).
ಹೊರದೇಶ-ಹೊರನಾಡು: ಕನ್ಹಯ್ಯ ನಾಯ್ಡು, ಡಾ.ತುಂಬೆ ಮೊಹಿಯುದ್ದೀನ್(ತುಂಬೆ ಗ್ರೂಪ್ಸ್ ಯುಎಇ), ಡಾ.ಚಂದ್ರಶೇಖರ ನಾಯಕ್(ಅಮೇರಿಕ).
ಪರಿಸರ: ಆಲ್ಮಿತ್ರಾ ಪಟೇಲ್(ಬೆಂಗಳೂರು ನಗರ).
ಕೃಷಿ: ಶಿವನಾಪುರ ರಮೇಶ(ಬೆಂಗಳೂರು ಗ್ರಾಮಾಂತರ), ಪುಟ್ಟೀರಮ್ಮ(ಚಾಮರಾಜನಗರ).
ಮಾಧ್ಯಮ ಕ್ಷೇತ್ರದ ಸಾಧನೆಗಾಗಿ
ಎನ್.ಎಸ್.ಶಂಕರ್(ದಾವಣಗೆರೆ), ಸನತ್ಕುಮಾರ್ ಬೆಳಗಲಿ(ಬಾಗಲಕೋಟೆ), ಎ.ಜಿ.ಕಾರಟಗಿ(ಕೊಪ್ಪಳ), ರಾಮಕೃಷ್ಣ ಬಡಶೇಶಿ(ಕಲಬುರಗಿ).
ವಿಜ್ಞಾನ-ತಂತ್ರಜ್ಞಾನ: ಪ್ರೊ.ಟಿ.ವಿ.ರಾಮಚಂದ್ರ(ಬೆಂಗಳೂರು ನಗರ), ಸುಬ್ಬಯ್ಯ ಅರುಣನ್(ಬೆಂಗಳೂರು ನಗರ).
ಸಹಕಾರ:ವಿರೂಪಾಕ್ಷಪ್ಪ ನೇಕಾರ(ಬಳ್ಳಾರಿ).
ಯಕ್ಷಗಾನ: ಕೇಶವ್ ಹೆಗಡೆ(ಉತ್ತರ ಕನ್ನಡ), ಸೀತಾರಾಮ ತೋಳ್ಪಾಡಿ(ದಕ್ಷಿಣ ಕನ್ನಡ).
ಬಯಲಾಟ: ಸಿದ್ದಪ್ಪ ಕರಿಯಪ್ಪ(ಅಂಧ ಕಲಾವಿದರು-ಬಾಗಲಕೋಟೆ), ನಾರಾಯಣಪ್ಪ ಶಿಳ್ಳೇಕ್ಯಾತ(ವಿಜಯನಗರ).
ರಂಗಭೂಮಿ: ಸರಸ್ವತಿ ಝುಲೈಕ ಬೇಗಂ(ಯಾದಗಿರಿ), ಓಬಳೇಶ್ ಎಚ್.ಬಿ.(ಚಿತ್ರದುರ್ಗ), ಭಾಗ್ಯಶ್ರೀ ರವಿ(ಕೋಲಾರ), ಡಿ.ರಾಮು(ಮೈಸೂರು), ಜನಾರ್ದನ್ ಎಚ್.(ಜನ್ನಿ)-ಮೈಸೂರು, ಹನುಮಾನದಾಸ ವ.ಪವಾರ(ಢಗಳಚಂದ)-ಬಾಗಲಕೋಟೆ.
ಸಾಹಿತ್ಯ: ಬಿ.ಟಿ.ಲಲಿತಾ ನಾಯಕ್(ಚಿಕ್ಕಮಗಳೂರು), ಅಲ್ಲಮಪ್ರಭು ಬೆಟ್ಟದೂರು(ಕೊಪ್ಪಳ), ಡಾ.ಎಂ. ವೀರಪ್ಪ ಮೊಯ್ಲಿ(ಉಡುಪಿ), ಹನುಮಂತರಾವ್ ದೊಡ್ಡಮನಿ(ಕಲಬುರಗಿ), ಡಾ.ಬಾಳಾ ಸಾಹೇಬ್ ಲೋಕಾಪುರ-ಬೆಳಗಾವಿ, ಡಾ.ಬೈರಮಂಗಲ ರಾಮೇಗೌಡ (ರಾಮನಗರ), ಡಾ.ಪ್ರಶಾಂತ್ ಮಾಡ್ತಾ(ದಕ್ಷಿಣ ಕನ್ನಡ).
ಶಿಕ್ಷಣ: ಡಾ.ವಿ.ಕಮಲಮ್ಮ(ಬೆಂಗಳೂರು ನಗರ), ಪ್ರೊ.ರಾಜೇಂದ್ರ ಶೆಟ್ಟಿ(ದಕ್ಷಿಣ ಕನ್ನಡ), ಡಾ.ಪದ್ಮಾಶೇಖರ್(ಕೊಡಗು). ಕ್ರೀಡೆ: ಜೂಡ್ ಫೆಲಿಕ್ಸ್ ಸೆಬಾಸ್ಟೀಯನ್(ಹಾಕಿ)-ಬೆಂಗಳೂರು ನಗರ, ಗೌತಮ್ ವರ್ಮ(ರಾಮನಗರ), ಆರ್.ಉಮಾದೇವಿ(ಬಿಲಿಯಡ್ರ್ಸ್)-ಬೆಂಗಳೂರು ನಗರ.
ನ್ಯಾಯಾಂಗ:ಬಾಲನ್(ಕೋಲಾರ).
ಶಿಲ್ಪಕಲೆ: ಬಸವರಾಜ್ ಬಡಿಗೇರ(ಬೆಂಗಳೂರು ನಗರ), ಅರುಣ್ ಯೋಗಿರಾಜ್(ಮೈಸೂರು).
ಚಿತ್ರಕಲೆ: ಪ್ರಭು ಹರಸೂರು(ತುಮಕೂರು).
ಕರಕುಶಲ: ಚಂದ್ರಶೇಖರ ಸಿರಿವಂತ(ಹಸೆಚಿತ್ತಾರ)-ಶಿವಮೊಗ್ಗ.
ಕರ್ನಾಟಕ ಸಂಭ್ರಮ-50 ಸುವರ್ಣ ಮಹೋತ್ಸವ ಪ್ರಶಸ್ತಿ:
ಜಾನಪದ: ಸಿ.ವಿ.ವೀರಣ್ಣ (ತುಮಕೂರು), ಪ್ರೊ.ಹಿ.ಚಿ.ಬೋರಲಿಂಗಯ್ಯ(ಬೆಂಗಳೂರು ನಗರ), ತಂಬೂರಿ ಉಮಾನಾಯ್ಕ(ದಾವಣಗೆರೆ), ಕೆಂಚಯ್ಯ(ಮೈಸೂರು), ಗೊಂದಳಿ ರಾಮಪ್ಪ(ವಿಜಯನಗರ), ಸುರೇಶ್ ಕಾತರಪ್ಪ ಲಮಾಣಿ(ಗದಗ), ಜಯಲಕ್ಷ್ಮಮ್ಮ(ರಾಮನಗರ), ಲಕ್ಷ್ಮಮ್ಮ(ತುಮಕೂರು), ಬುರ್ರಕಥಾ ಅಯ್ಯಮ್ಮ ಎಡವಲ್(ರಾಯಚೂರು), ಲಕ್ಷ್ಮೀಬಾಯಿ ಹರಿಜನ(ಧಾರವಾಡ), ಭಾಗ್ಯಮ್ಮ(ಚಿಕ್ಕಮಗಳೂರು), ಚಂದ್ರಹರಕುಡೆ(ಬೀದರ್).
ವೈದ್ಯಕೀಯ: ಡಾ.ಚಂದ್ರಪ್ಪ(ಕೊಪ್ಪಳ), ಡಾ.ಆಲೆಕ್ಸ್ ಥಾಮಸ್(ಬೆಂಗಳೂರು ನಗರ), ಡಾ. ಎಚ್.ಎಸ್.ಕೃಷ್ಣಪ್ಪ(ಶಿವಮೊಗ್ಗ)ಡಾ.ಶಿವಲಿಂಗಯ್ಯ(ರಾಮನಗರ), ಡಾ.ಎಸ್.ಎಸ್.ಗುಬ್ಬಿ (ಯಾದಗಿರಿ), ಡಾ.ಅಕ್ಕಮಹಾದೇವಿ(ಧಾರವಾಡ).
ಮಾಧ್ಯಮ: ವಿಶ್ವನಾಥ ಸುವರ್ಣ(ದಕ್ಷಿಣ ಕನ್ನಡ), ಲಕ್ಷ್ಮಿ ನರಸಪ್ಪ(ತುಮಕೂರು), ರುದ್ರಪ್ಪ ಅಸಂಗಿ(ವಿಜಯಪುರ), ಎಂ.ಸಿದ್ದರಾಜು(ಬೆಂಗಳೂರು), ಮದನಗೌಡ(ಹಾಸನ), ಮಲ್ಲಿಕಾರ್ಜುನ ಹೆಗ್ಗಳಗಿ(ಬಾಗಲಕೋಟೆ), ಮಂಜುನಾಥ್ ಅದ್ದೆ(ಬೆಂಗಳೂರು ಗ್ರಾಮಾಂತರ), ಭಾರತಿ ಹೆಗಡೆ(ಉತ್ತರ ಕನ್ನಡ), ಕೆ.ಶಾಂತಕುಮಾರಿ(ವಿಜಯನಗರ).
ಪರಿಸರ: ಎಸ್.ಎಂ. ಚಲವಾದಿ(ಬೆಳಗಾವಿ), ಎಚ್.ಆರ್.ಜಯರಾಮ್(ರಾಮನಗರ).
ಯಕ್ಷಗಾನ: ಪೇತ್ರಿ ಮಂಜುನಾಥ ಪ್ರಭು(ಉಡುಪಿ), ಯಮುನಾಬಾಯಿ(ಬೆಳಗಾವಿ), ಹುಲೆಗೆಮ್ಮ(ಬಳ್ಳಾರಿ).
ರಂಗಭೂಮಿ: ಲಕ್ಷ್ಮಯ್ಯ(ಮಂಡ್ಯ), ರಾಜು ಮಳವಳ್ಳಿ(ಮಂಡ್ಯ), ಎ.ಪಿ.ರಾಜಣ್ಣ(ಚಾಮರಾಜನಗರ), ಮಾಲತಿಶ್ರೀ(ಮೈಸೂರು), ಸುನಂದಾ ಎಸ್.ಕಂದಗಲ್ಲ(ಬಾಗಲಕೋಟೆ), ಶಾಂತಬಾಯಿ ಜೋಶಿ(ಧಾರವಾಡ), ಕಲಾವತಿ(ಬೆಂಗಳೂರು), ರಾಧಿಕ ಬೇವಿನಕಟ್ಟೆ(ಹಾವೇರಿ), ಸಾವಿತ್ರಿ ರಿತ್ತಿ(ದಾವಣಗೆರೆ).
ಶಿಲ್ಪಕಲೆ: ಟಿ.ಸೋಮೇಶ್(ಚಿತ್ರದುರ್ಗ), ಶಕುಂತಲ ಎಂ.ಬಡಿಗೇರಾ(ಕಲಬುರಗಿ).
ಚಿತ್ರಕಲೆ: ಫಝ್ಲು ರೆಹಮಾನ್ ಖಾನ್(ಮೈಸೂರು), ಶ್ರೀಕಾಂತ ಬಿರಾದಾರ(ಬೀದರ್), ಡಾ.ರೇಣುಕಾ ಮಾರ್ಕಂಡೆ(ಧಾರವಾಡ), ಸುರೇಖಾ(ಬೆಂಗಳೂರು), ರುಕ್ಮಿಣಿ ಬಾಯಿ(ಕೊಪ್ಪಳ).
ಛಾಯಚಿತ್ರ: ಶ್ರೀವತ್ಸ ಶಾಂಡಿಲ್ಯ(ಉತ್ತರ ಕನ್ನಡ).
ಸಂಗೀತ: ಆಮಯ್ಯ ಲಿಂಗಯ್ಯ ಮಠ(ಯಾದಗಿರಿ), ನಿರ್ಮಲಪ್ಪ ಭಜಂತ್ರಿ(ವಿಜಯಪುರ), ಲತಾ ಜಹಂಗೀರದಾರ್(ಧಾರವಾಡ).
ಸಂಕೀರ್ಣ: ಆರ್.ಜಿ. ಹಳ್ಳಿ ನಾಗರಾಜ್(ಬೆಂಗಳೂರು), ಆರ್.ವೆಂಕಟರಮಣಪ್ಪ(ಕೋಲಾರ), ಬಾಬು ಕಿಲಾರ್, ದ್ವಾರಕನಾಥ್, ವಿದ್ಯಾವರ್ಧಕ ಸಂಘ(ಧಾರವಾಡ).
ಸಮಾಜ ಸೇವೆ: ಮಡ್ಡಿಕೆರೆ ಗೋಪಾಲ(ಚಿಕ್ಕಮಗಳೂರು), ಶ್ರೀ ದಾಸೋಹ ರತ್ನ ಚಕ್ರವರ್ತಿ ಅನ್ನದಾನೇಶ್ವರ ಅಪ್ಪಾಜಿ,
ಬಸವಗೋಪಾಲ ನೀಲಮಾಣಿಕ ಮಠ, ಬಂಡಿಗಮಣಿಮಠ (ಬಾಗಲಕೋಟೆ), ಎಸ್.ಆರ್.ಜೋಳದ್(ಹಾವೇರಿ). ಡಾ.ದು.ಸರಸ್ವತಿ (ಬೆಂಗಳೂರು ನಗರ), ರುಕ್ಮಿಣಿ ಕೃಷ್ಣಸ್ವಾಮಿ(ಸ್ಪಾಸ್ಟಿಕ್ ಸೊಸೈಟಿ-ಬೆಂಗಳೂರು ನಗರ), ಲೂಸಿ ಸಲ್ದಾನ(ಧಾರವಾಡ), ಚನ್ನಬಸಮ್ಮ ಸೂಲಗಿತ್ತಿ(ಯಾದಗಿರಿ), ರಾವಣಮ್ಮ(ಬೆಂಗಳೂರು ನಗರ), ರೀಟಾ ನರ್ಹೋನಾ(ದಕ್ಷಿಣ ಕನ್ನಡ), ಶಂಕ್ರಮ್ಮ(ರಾಯಚೂರು), ಪ್ರೇಮಲತಾ ಕೃಷ್ಣಸ್ವಾಮಿ (ಚಾಮರಾಜನಗರ), ಎಂ.ಪದ್ಮಾ(ಕೋಲಾರ).
ಸಾಹಿತ್ಯ: ನೀಲಕಂಠ ಮ.ಕಾಳಗಿ(ಬಾಗಲಕೋಟೆ), ಸಿದ್ದಪ್ಪ ತಿಮ್ಮಪ್ಪ ಮಾದರ(ಬಾಗಲಕೋಟೆ), ಪ್ರೊ.ಜಿ.ಶರಣಪ್ಪ(ಚಿತ್ರದುರ್ಗ), ಅಮರೇಶ್ ನುಗದೋಣಿ(ರಾಯಚೂರು), ಡಾ.ಬಿವಿ.ಶಿರೂರು(ಕೊಪ್ಪಳ), ಡಾ.ರಾಧಾ ಕುಲಕರ್ಣಿ(ಗದಗ), ಡಾ.ಎನ್.ಗಾಯತ್ರಿ(ಬೆಂಗಳೂರು), ಲಲಿತಾ ಹೊಸಪ್ಯಾಟಿ, ಹುನಗುಂದ(ಬಾಗಲಕೋಟೆ), ಸಂಕಮ್ಮ ಸಂಕಣ್ಣನವರ(ಹಾವೇರಿ), ಡಾ.ಬಾನು ಮುಷ್ತಾಕ್(ಹಾಸನ).
ಶಿಕ್ಷಣ: ಟಿ.ಎಂ.ಚಂದ್ರಶೇಖರಯ್ಯ(ಬಳ್ಳಾರಿ), ಮುಕ್ತಾ(ಬೆಂಗಳೂರು ನಗರ), ಭಾಗ್ಯಲಕ್ಷ್ಮಿ (ವಿಜಯನಗರ). ಕ್ರೀಡೆ: ಜಿಮ್ಮಿ ಅಣ್ಣಯ್ಯ(ಕೊಡಗು), ಎಂ.ಗಿರೀಶ್ ಕುಮಾರ್(ಬೆಂಗಳೂರು ನಗರ), ನಂದಿನಿ ಬಸಪ್ಪ(ಕೊಡಗು), ಸುಶ್ಮಿತಾ ಪವಾರ್(ಬೆಂಗಳೂರು ನಗರ), ನೊಮಿಟೋ ಕಾಮದಾರ್(ಶಿವಮೊಗ್ಗ), ನಂದಿನಿ ಎನ್.ಎಸ್.(ಬೆಂಗಳೂರು ನಗರ).
ಕೃಷಿ: ಜಿ.ಎನ್.ನಾರಾಯಣಸ್ವಾಮಿ(ಚಿಕ್ಕಬಳ್ಳಾಪುರ), ಕೇದಾರಲಿಂಗಯ್ಯ ಹಿರೇಮಠ್ (ಕಲಬುರಗಿ), ನಾಗಮ್ಮಜ್ಜಿ(ವಿಜಯನಗರ), ಶಾಂಭವಿ(ಚಿತ್ರದುರ್ಗ). ಕಿರುತೆರೆ: ಸಿಹಿ ಕಹಿ ಚಂದ್ರು(ಬೆಂಗಳೂರು). ಹೊರನಾಡು: ದಯಾಶಂಕರ್ ಅಡಪ, ಸದಾಶಿವ ಶೆಟ್ಟಿ ಕನ್ಯಾನ ಹಾಗೂ ಎಸ್.ಎ.ಲಲಿತಾ(ದಿಲ್ಲಿ).
ನೃತ್ಯ: ಮಿನಲ್ ಪ್ರಭು(ಉಡುಪಿ).
ಆಡಳಿತ: ಜೀಜಾ ಹರಿಸಿಂಗ್(ತುಮಕೂರು).
ವಿಜ್ಞಾನ ತಂತ್ರಜ್ಞಾನ: ಡಾ.ರತಿರಾವ್(ಮೈಸೂರು). ಸ್ವಾತಂತ್ರ್ಯ ಹೋರಾಟಗಾರರ ವಿಭಾಗದಲ್ಲಿ ಮಲ್ಲಮ್ಮ ಯಳವಾರ(ವಿಜಯಪುರ)ರವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಕನ್ನಡ ರಾಜ್ಯೋತ್ಸವ ಪ್ರಶಸ್ತಿಯು 5ಲಕ್ಷ ರೂಪಾಯಿ ನಗದು ಹಾಗೂ 25 ಗ್ರಾಂ ಚಿನ್ನದ ಪದಕವನ್ನು ಒಳಗೊಂಡಿರುತ್ತದೆ. ಸುವರ್ಣ ಸಂಭ್ರಮ ಪ್ರಶಸ್ತಿಯು 50 ಸಾವಿರ ರೂ.ನಗದು ಹಾಗೂ ಫಲಕವನ್ನು ಒಳಗೊಂಡಿರುತ್ತದೆ. ನ.1ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಧಕರಿಗೆ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ, ಸನ್ಮಾನಿಸಲಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ
ಶಿವರಾಜ್ ತಂಗಡಗಿ ತಿಳಿಸಿದರು.