ಸುಳ್ಯ:ಮಳೆ ಮುಂದುವರಿದಿದ್ದು ಕಳೆದ 24 ಗಂಟೆಯಲ್ಲಿ ಸುಳ್ಯ ಹಾಗೂ ಕಡಬ ತಾಲೂಕಿನ ವಿವಿಧ ಭಾಗಗಳಲ್ಲಿ ಮಳೆಯಾಗಿದೆ. ಬಾಳಿಲದಲ್ಲಿ 40 ಮಿ.ಮಿ.ಮಳೆ ಸುರಿದಿದೆ ಎಂದು ಮಳೆ ದಾಖಲೆಗಾರರಾದ ಪಿ.ಜಿ.ಎಸ್.ಎನ್.ಪ್ರಸಾದ್ ತಿಳಿಸಿದ್ದಾರೆ. ಸುಳ್ಯ ನಗರದಲ್ಲಿ ವಿವಿಧ ಕಡೆಗಳಲ್ಲಿ ಹನಿ ಮಳೆಯಾಗಿದೆ. ಸುಳ್ಯದಲ್ಲಿ ನಿನ್ನೆ ಮಧ್ಯಾಹ್ನದ ಬಳಿಕ
ಅಲ್ಲಲ್ಲಿ ಹನಿ ಮಳೆಯಾಗಿದ್ದು 1 ಮಿ.ಮಿ.ಮಳೆ ಸುರಿದಿದೆ. ಇನ್ನುಳಿದಂತೆ
ಬೆಳ್ಳಾರೆ ಕಾವಿನಮೂಲೆ ಸುಳ್ಯ ತಾಲೂಕು. 45 ಮಿ.ಮೀ,ಅಯ್ಯನಕಟ್ಟೆಯಲ್ಲಿ 38 ಮಿ.ಮಿ,ಕಲ್ಮಡ್ಕದಲ್ಲಿ 28 ಮಿಮೀ ಮಳೆ ಸುರಿದಿದೆ.
ಕೊಳ್ತಿಗೆ 5 ಮಿ.ಮಿ, ಮುರುಳ್ಯ ಗ್ರಾಮದ ಶೇರದಲ್ಲಿ 2 ಮಿ.ಮಿ. ಕೇನ್ಯ4ಮಿ.ಮೀ,ಬಳ್ಪ 3 ಮಿ.ಮೀ.ಚೊಕ್ಕಾಡಿ 3.6 ಮಿ ಮೀ ಮಳೆ,ಎಣ್ಮೂರು, ಗುಂಡಿಮಜಲು 10 ಮಿ ಮೀ,
ಎಡಮಂಗಲ ಗ್ರಾಮದ ದೇವರಮಜಲಿನಲ್ಲಿ 14 ಮಿ.ಮಿ, ಅಲೆಂಗಾರ
29 ಮಿ.ಮಿ ಮಳೆ ಸುರಿದಿದೆ. ನಿನ್ನೆ ವಿವಿಧ ಕಡೆ ಮೋಡ ಕವಿದ ವಾತಾವರಣ ಇತ್ತು.ಮಧ್ಯಾಹ್ನದ ನಂತರ ಮತ್ತು ಸಂಜೆಯ ವೇಳೆಗೆ ಮಳೆಯಾಗಿದೆ.
ಇಂದುವಬೆಳಿಗ್ಗೆ ಹಲವು ಕಡೆ ಮಂಜು ಮುಸುಕಿದ ವಾತಾವರಣ ಇತ್ತು.
ಇಂದು ಕೂಡ ಕೆಲವು ಕಡೆ ಮಳೆಯಾಗುವ ಸಾಧ್ಯತೆ ಇದೆ.
ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಕೆಲವು ಕಡೆ, ಉತ್ತರ ಒಳನಾಡಿನ ವಿವಿದೆಡೆ ಶನಿವಾರವೂ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಕೆಲ ದಿನ ಮಳೆ ಮುಂದುವರಿಯಲಿದೆ.