ಸುಳ್ಯ: ಸುಳ್ಯ ನಗರದಲ್ಲಿ ಕೆಲವೆಡೆ ಮಂಗಳವಾರ ಸಂಜೆಯ ವೇಳೆಗೆ ತುಂತುರು ಮಳೆಯಾಗಿದೆ. ಮಧ್ಯಾಹ್ನದ ಬಳಿಕ ಮೋಡ ಕವಿದ ವಾತಾವರಣ ಇದ್ದು ಸಂಜೆ 6 ಗಂಟೆಯ ವೇಳೆಗೆ ಮಳೆಯಾಗಿದೆ. ಕೆಲವೆಡೆ ಹನಿ ಮಳೆಯಾದರೆ ಕೆಲವೆಡೆ ತುಂತುರು, ಸಾಧಾರಣ ಮಳೆಯಾಗಿದೆ. ತಾಲೂಕಿನ
ವಿವಿಧ ಭಾಗಗಳಲ್ಲಿ ಮಳೆಯಾಗಿರುವ ಬಗ್ಗೆ ವರದಿಯಾಗಿದೆ.
ಕಳೆದ ವರ್ಷ ಎಂಟು ತಿಂಗಳಿಗೂ ಹೆಚ್ಚು ಕಾಲ ಮಳೆಯಾಗಿತ್ತು. ಸುಮಾರು ಒಂದೂವರೆ ತಿಂಗಳಿನಿಂದ ಮಳೆ ಬಿಡುವು ಪಡೆದಿತ್ತು. ಈ ವರ್ಷ ಜನವರಿ ತಿಂಗಳಲ್ಲಿಯೇ ಅಕಾಲಿಕ ಮಳೆಯಾಗಿ ದಾಖಲೆ ಬರೆದಿದೆ. ಕಳೆದ ಕೆಲವು ದಿನಗಳಿಂದ ಈ ಭಾಗದಲ್ಲಿ ಮೋಡ ಕವಿದ ವಾತಾವರಣ ಇತ್ತು. ಭಾನುವಾರ ಕೆಲವೆಡೆ ಹನಿ ಮಳೆಯಾಗಿತ್ತು. ಕೆಲ ದಿನಗಳಿಂದ ಚಳಿ ಕಡಿಮೆಯಾಗಿ ಸೆಕೆಯ ವಾತಾವರಣವೂ ಇತ್ತು.












