ಸುಳ್ಯ:ಭಾನುವಾರ ಸಂಜೆ ವಿವಿಧ ಕಡೆಗಳಲ್ಲಿ ಮಳೆ ಸುರಿದು ಇಳೆಗೆ ತಂಪೆರೆದಿದೆ. ಏರಿದ ಬಿಸಿಲು ಮತ್ತು ಉರಿ ಸೆಕಯಿಂದ ಬಸವಳಿದ ಜನತೆಗೆ ಕೊಂಚ ರಿಲಾಕ್ಸ್ ನೀಡಿದೆ. ಸುಬ್ರಹ್ಮಣ್ಯ ಸಮೀಪ ಕುಲ್ಕುಂದದಲ್ಲಿ ಮೇ.21 ರಂದು ಮಳೆಯಾಗಿದೆ. ಸಂಜೆಯ ವೇಳೆಗೆ ಉತ್ತಮ ಮಳೆಯಾಗಿರುವ ಬಗ್ಗೆ ವರದಿಯಾಗಿದೆ. ಸುಳ್ಯ, ಕಡಬ ತಾಲೂಕಿನ ವಿವಿಧ ಕಡೆಗಳಲ್ಲಿ ಮೋಡ ಕವಿದ ವಾತಾವರಣ ಇದ್ದು ವಿವಿಧ ಕಡೆ ಮಳೆಯಾಗಿದೆ. ಬಳ್ಪ, ಮುಂಡಾಜೆ ಸೇರಿ ವಿವಿಧ ಕಡೆಗಳಲ್ಲಿ ಮಳೆಯಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಇಂದು ಕೂಡ ಮಳೆಯಾಗಿದೆ. ಹಲವೆಡೆ ಕಗ್ಗತ್ತಲ ಮೋಡ ಆವರಿಸಿದ್ದು ಗಾಳಿ ಸಮೇತ ಮಳೆ ಸುರಿದಿದೆ. ಕೆಲವೆಡೆ ಆಲಿಕಲ್ಲು ಸಹಿತ ಮಳೆಯಾಗಿದೆ. ವಿವಿಧ ಕಡೆಗಳಲ್ಲಿ ಗಾಳಿ ಸಹಿತ ಮಳೆ ಸುರಿದಿದೆ
ದಿ ಸುಳ್ಯ ಮಿರರ್ ಸುದ್ದಿಜಾಲ
ದಿ ಸುಳ್ಯ ಮಿರರ್ ಸುದ್ದಿಜಾಲ. ಇದು ನಿಮ್ಮೂರಿನ ಪ್ರತಿಬಿಂಬ. ನಮಗೆ ನ್ಯೂಸ್ ಕಳುಹಿಸಲು thesulliamirror@gmail.com ಗೆ ಇಮೇಲ್ ಮಾಡಿರಿ.
previous post