ನವದೆಹಲಿ:ಲೋಕಸಭೆಯ ವಿರೋಧ ಪಕ್ಷದ ನಾಯಕರಾಗಿ ರಾಹುಲ್ ಗಾಂಧಿ ಅವರನ್ನು ಆಯ್ಕೆ ಮಾಡಲಾಗಿದೆ. ಈ ವಿಚಾರವನ್ನು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ತಿಳಿಸಿದ್ದಾರೆ.
2014 ಮತ್ತು 2019ರ ಲೋಕಸಭೆಯಲ್ಲಿ ಕ್ರಮವಾಗಿ
ಕಾಂಗ್ರೆಸ್ 44 ಮತ್ತು 52 ಸ್ಥಾನಗಳನ್ನು ಕಾಂಗ್ರೆಸ್ ಗೆದ್ದಿತ್ತು. ವಿರೋಧ ಪಕ್ಷಗಳ ಸ್ಥಾನಮಾನಕ್ಕೆ ಕನಿಷ್ಠ 54 ಸ್ಥಾನಗಳ ಅಗತ್ಯವಿದೆ. ಈ ಬಾರಿ ಕಾಂಗ್ರೆಸ್ 99 ಸ್ಥಾನಗಳನ್ನು ಗೆದ್ದಿದೆ. ಇದರ ಜೊತೆಗೆ ಇಂಡಿಯಾ ಬಣದ ಪಕ್ಷಗಳ ಬೆಂಬಲ ಸಹ ಕಾಂಗ್ರೆಸ್ಗೆ ಇದೆ.
ಕಾಂಗ್ರೆಸ್ನ ಸಂಸದೀಯ ಪಕ್ಷದ ನಾಯಕಿ ಸೋನಿಯಾ ಗಾಂಧಿಯವರು ಈ ಸಂಬಂಧ ಲೋಕಸಭಾ ಹಂಗಾಮಿ ಸ್ಪೀಕರ್ಗೆ ಪತ್ರ ಬರೆದಿದ್ದಾರೆ.
ವಿರೋಧ ಪಕ್ಷಗಳ ‘ಇಂಡಿಯಾ’ ಬಣದ ಪಕ್ಷಗಳ ಸದನದ ನಾಯಕರ ಸಭೆಯಲ್ಲಿಯೂ ಈ ವಿಚಾರ ಚರ್ಚಿಸಲಾಗಿದ್ದು, ಬಣದ ಎಲ್ಲ ನಾಯಕರು ರಾಹುಲ್ ಗಾಂಧಿ ವಿರೋಧ ಪಕ್ಷದ ನಾಯಕನಾಗಲು ಒಪ್ಪಿಗೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.