ಬೆಳ್ಳಾರೆ: ಭಾರತದ ಯುವ ಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ ಹಾಗೂ ಭಾರತೀಯ ಕ್ರೀಡಾ ಪ್ರಾಧಿಕಾರದ ಆಶ್ರಯದಲ್ಲಿ ವಿಶ್ವ ಮಟ್ಟದ ಅಂತರಾಷ್ಟ್ರೀಯ ಪ್ಯಾರಾ ಅಥ್ಲೆಟಿಕ್ ಕ್ರೀಡಾಕೂಟವು ನವದೆಹಲಿಯ
ಜವಾಹರ್ಲಾಲ್ ನೆಹರು ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸೆ.25ರಿಂದ ಅ. 5 ರವರೆಗೆ ನಡೆಯಲಿದೆ. ಈ ಕ್ರೀಡಾ ಕೂಟಕ್ಕೆ ತಾಂತ್ರಿಕ ಅಧಿಕಾರಿಯಾಗಿ ಕರ್ನಾಟಕ ರಾಜ್ಯದಿಂದ ಡಾ. ರಾಮಚಂದ್ರ ಕೆ ಆಯ್ಕೆಯಾಗಿದ್ದಾರೆ. ಇವರು ಪೆರುವಾಜೆಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಮೂಲತಃ ನೆಲ್ಯಾಡಿ ಕೌಕ್ರಾಡಿ ಸೇಸಪ್ಪ ಗೌಡ ಹಾಗೂ ಧರ್ಣಮ್ಮ ದಂಪತಿಗಳ ಪುತ್ರ.ಪುತ್ತೂರಿನ ಬೊಳ್ವಾರು ಕರ್ಮಲ ನಿವಾಸಿಯಾಗಿದ್ದಾರೆ.












