ಲಖನೌ: ಐಪಿಎಲ್ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ ವಿರುದ್ಧ ಪಂಜಾಬ್ ಕಿಂಗ್ಸ್ 8 ವಿಕೆಟ್ಗಳ ಭರ್ಜರಿ ಜಯ ದಾಖಲಿಸಿದೆ. ಮೊದಲು ಬ್ಯಾಟ್ ಮಾಡಿದ ಲಳನೌ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 171 ರನ್ ಕಲೆ ಹಾಕಿತು. ಗುರಿ ಬೆನ್ನಟ್ಟಿದ ಪಂಜಾಬ್ 16.2 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ177 ರನ್ ಗಳಿಸಿ ಗೆಲುವಿನ ನಗೆ ಬೀರಿತು.
ಪ್ರಭ್ಮನ್ಸಿಂಗ್ ಹಾಗೂ ನಾಯಕ ಶ್ರೇಯಸ್ ಅಯ್ಯರ್ ಅವರ ಸ್ಪೋಟಕ
ಅರ್ಧ ಶತಕ ಪಂಜಾಬ್ಗೆ ಸುಲಭ ಜಯ ತಂದು ಕೊಟ್ಟಿತು. ಪ್ರಭ್ಮನ್ಸಿಂಗ್ 34 ಎಸೆತಗಳಲ್ಲಿ 9 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 69 ರನ್ ಸಿಡಿಸಿದರೆ, ಶ್ರೇಯಸ್ ಅಯ್ಯರ್ 30 ಎಸೆತಗಳಲ್ಲಿ 3 ಬೌಂಡರಿ ಹಾಗೂ 4 ಸಿಕ್ಸರ್ ನೆರವಿನಿಂದ ಅಜೇಯ 52 ರನ್ ಚಚ್ಚಿದರು. ನೇಹಲ್ ವಧೇರ 25 ಎಸೆತಗಳಲ್ಲಿ 3 ಬೌಂಡರಿ ಹಾಗೂ 4 ಸಿಕ್ಸರ್ ನೆರವಿನಿಂದ ಅಜೇಯ 43 ರನ್ ಬಾರಿಸಿದರು. ಲಖನೌ ಪರ ಏಡೆನ್ ಮಾರ್ಕರಮ್ 18 ಎಸೆತಗಳಲ್ಲಿ 28 (ಒಂದು ಸಿಕ್ಸರ್ ಹಾಗೂ 4 ಬೌಂಡ್ರಿ), ನಿಕೊಲಸ್ ಪೂರನ್ (30 ಎಸೆತಗಳಲ್ಲಿ 44) ಹಾಗೂ ಆಯುಷ್ ಬದೋನಿ (33 ಎಸೆತಗಳಲ್ಲಿ 41),ಡೇವಿಡ್ ಮಿಲ್ಲರ್ (19), ಅಬ್ದುಲ್ ಸಮದ್ (27) ಉಪಯುಕ್ತ ಕೊಡುಗೆ ನೀಡಿದರು.
ಪಂಜಾಬ್ ತಂಡದ ಪರವಾಗಿ ವೇಗಿ ಅರ್ಷದೀಪ್ ಸಿಂಗ್ 39 ರನ್ ನೀಡಿ 2 ವಿಕೆಟ್ ಕಬಳಿಸಿದರೆ, ಲಾಕಿ ಫರ್ಗ್ಯೂಸನ್, ಗ್ಲೆನ್ ಮ್ಯಾಕ್ಸ್ವೆಲ್, ಮಾರ್ಕೊ ಜಾನ್ಸೆನ್ ಮತ್ತು ಯುಜವೇಂದ್ರ ಚಾಹಲ್ ಅವರು ತಲಾ 1 ವಿಕೆಟ್ ಪಡೆದರು.