ಅಹಮ್ಮದಾಬಾದ್: ಪ್ರೊ ಕಬಡ್ಡಿ ಲೀಗ್ ಪಂದ್ಯಾಟದಲ್ಲಿ ಕಳೆದ ಬಾರಿಯ ಚಾಂಪಿಯನ್ ಜೈಪುರ್ ಪಿಂಕ್ ಪ್ಯಾಂಥರ್ಸ್ ತಂಡವನ್ನು ಮಣಿಸಿ ಪುಣೇರಿ ಪಲ್ಟನ್ ತಂಡ ಶುಭಾರಂಭ ಮಾಡಿದೆ. ಜಿದ್ದಾಜಿದ್ದಿನ ಹೋರಾಟದಲ್ಲಿ 37-33 ಅಂಕಗಳ ಅಂತರದಲ್ಲಿ
ಪುಣೇರಿ ಪಲ್ಟನ್ ಗೆಲುವು ಸಾಧಿಸಿದೆ. ಈ ಮೂಲಕ ಕಳೆದ ವರ್ಷ ಪ್ರೊ ಕಬಡ್ಡಿ ಫೈನಲ್ನಲ್ಲಿ ಎದುರಾದ ಸೋಲಿಗೆ ಪ್ಯಾಂಥರ್ಸ್ ವಿರುದ್ಧ ಪಲ್ಟನ್ ಸೇಡು ತೀರಿಸಿಕೊಂಡಿದೆ.
ಇನ್ನೊಂದು ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ವಿರುದ್ಧ ಬೆಂಗಾಲ್ ವಾರಿಯರ್ಸ್ ಜಯ ಗಳಿಸಿತು. ರೋಚಕ ಪಂದ್ಯದಲ್ಲಿ 32-30 ಅಂಕಗಳ ಅಂತರದಲ್ಲಿ ಬೆಂಗಾಲ್ ವಾರಿಯರ್ಸ್ ಜಯ ಗಳಿಸಿತು. ಬೆಂಗಳೂರು ಬುಲ್ಸ್ಗೆ ಎರಡನೇ ಸೋಲು ಎದುರಾಯಿತು.















