ಸುಳ್ಯ: ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು ಸುಳ್ಯ ತಾಲೂಕಿನ ವಿವಿಧ ಕಾಲೇಜುಗಳ ಫಲಿತಾಂಶ ವಿವರ ಇಲ್ಲಿದೆ.
ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶೇ.96.46 ಫಲಿತಾಂಶ ದಾಖಲಾಗಿದೆ. ವಿಜ್ಞಾನ ವಿಭಾಗದಲ್ಲಿ ಶೇ.100 ಫಲಿತಾಂಶ ದಾಖಲಾಗಿದೆ.
ವಿಜ್ಞಾನ ವಿಭಾಗದಲ್ಲಿ 72 ವಿದ್ಯಾರ್ಥಿಗಳಲ್ಲಿ ಎಲ್ಲರೂ ಪಾಸಾಗಿ ಶೇ.100 ಫಲಿತಾಂಶ ಬಂದಿದೆ. 22 ಮಂದಿ
ಡಿಸ್ಟಿಂಕ್ಷನ್ ಪಡೆದಿದ್ದಾರೆ. ಕಲಾ ವಿಭಾಗದಿಂದ 117 ಮಂದಿ ಪರೀಕ್ಷೆ ಬರೆದು 110 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಶೇ. 94 ಫಲಿತಾಂಶ ಬಂದಿದೆ. 12 ಮಂದಿ ಡಿಸ್ಟಿಂಕ್ಷನ್ ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 122 ವಿದ್ಯಾರ್ಥಿಗಳಲ್ಲಿ 118ಮಂದಿ ಪಾಸಾಗಿ ಶೇ.96.7 ಫಲಿತಾಂಶ ಬಂದಿದೆ. 28 ಮಂದಿ ಡಿಸ್ಟಿಂಕ್ಷನ್ ಪಡೆದಿದ್ದಾರೆ.
ಗಾಂಧಿನಗರ ಕರ್ನಾಟಕ ಪಬ್ಲಿಕ್ ಸ್ಕೂಲ್ ಪದವಿ ಪೂರ್ವ ಕಾಲೇಜಿನಲ್ಲಿ ಶೇ.98 ಫಲಿತಾಂಶ ದಾಖಲಿಸಿದೆ. ಪರೀಕ್ಷೆ ಬರೆದ 48 ವಿದ್ಯಾರ್ಥಿಗಳಲ್ಲಿ 47 ಮಂದಿ ಉತ್ತೀರ್ಣರಾಗಿದ್ದಾರೆ. ಕಲಾ ವಿಭಾಗದಲ್ಲಿ ಶೇ.100, ವಿಜ್ಞಾನ ವಿಭಾಗದಲ್ಲಿ ಶೇ.100, ವಾಣೀಜ್ಯ ವಿಭಾಗದಲ್ಲಿ ಶೇ.93 ಫಲಿತಾಂಶ ಬಂದಿದೆ. 7 ಮಂದಿ ಡಿಸ್ಟಿಂಕ್ಷನ್ನಲ್ಲಿ ಉತ್ತೀರ್ಣರಾಗಿದ್ದಾರೆ.
ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಗೆ 2023-24 ನೇ ಸಾಲಿನ ದ್ವಿತೀಯ ಪಿಯುಸಿಯಲ್ಲಿ ಶೇ.94.5 ಫಲಿತಾಂಶ ಬಂದಿರುತ್ತದೆ. ವಿಶಿಷ್ಟ ಶ್ರೇಣಿಯಲ್ಲಿ ಒಟ್ಟು 15 ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಕಲಾ ವಿಭಾಗದಲ್ಲಿ ಶೇ.95, ವಾಣಿಜ್ಯ ವಿಭಾಗದಲ್ಲಿ ಶೇ.96
ವಿಜ್ಞಾನ ವಿಭಾಗದಲ್ಲಿ ಶೇ.87.5 ಫಲಿತಾಂಶ ಬಂದಿರುತ್ತದೆ.
ಕಲಾ ವಿಭಾಗದಲ್ಲಿ ಫಾತಿಮತ್ ಸುಹೈನಾ ಐ.ಪಿ.579 ಅಂಕ,ಅನುಸೂಯ ಎಂ.577 ,ಆಜ್ಞಾಶ್ರೀ ರೈ.ಡಿ 576 ಅಂಕ, ಕಾವ್ಯ ಟಿ.ಸಿ 538 ಅಂಕ ಪಡೆದಿದ್ದಾರೆ.ವಾಣಿಜ್ಯ ವಿಭಾಗದಲ್ಲಿ ಆಫ್ನಾನ್ 567 ಅಂಕ, ಭವಿತಾ 562 ಅಂಕ,ರಾಮಕೃಷ್ಣ ಆರ್.ಎ. ಅಂಕ, ದಿವ್ಯಾ ಪಿ.527 ಅಂಕ, ಸೈಯದ್ ಫಾಝಿಲ್ ರಝಾ ಆಲಂ 526 ಅಂಕ, ವಿಸ್ರುತ 523 ಅಂಕ, ಧನ್ಯ ಶ್ರೀ ಪಿ.ಜಿ 520 ಅಂಕ , ಫಾತಿಮತ್ ಸರ್ಫಿನಾ 520 ಅಂಕ, ತನುಷಾ ಟಿ.511 ಅಂಕ,ಚೈತನ್ಯಾ ಡಿ.455 ಅಂಕ ಗಳಿಸಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಕಾವ್ಯ ಶ್ರೀ 568 ಅಂಕ ಗಳಿಸಿದ್ದಾರೆ.
ಸುಬ್ರಹ್ಮಣ್ಯದ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಪರೀಕ್ಷೆಗೆ ಹಾಜರಾದ ಒಟ್ಟು 370 ವಿದ್ಯಾರ್ಥಿಗಳಲ್ಲಿ 365 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಕಾಲೇಜಿಗೆ ಒಟ್ಟು 98.65% ಫಲಿತಾಂಶ ಲಭಿಸಿದೆ. ವಿಜ್ಞಾನ ವಿಭಾಗದಲ್ಲಿ ಒಟ್ಟು 97 ವಿದ್ಯಾರ್ಥಿಗಳು ಹಾಜರಾಗಿದ್ದು, ಇವರಲ್ಲಿ ಒಟ್ಟು 97 ವಿದ್ಯಾರ್ಥಿಗಳು ಉತ್ತೀರ್ಣಗೊಂಡು, 100ಶೇ. ಫಲಿತಾಂಶ ಬಂದಿರುತ್ತದೆ. 40 ಡಿಸ್ಟಿಂಕ್ಷನ್, 57 ಪ್ರಥಮ ಶ್ರೇಣಿ ಲಭಿಸಿದೆ. ರಾಧಿಕಾ ಯು.ಆರ್(578), ಆತ್ಮಶ್ರೀ ಎಚ್.ಜಿ(577), ಮನಸ್ವಿ ಎ.ವೈ(577),ಆಶಿಕಾ.ಬಿ(574) ಅಂಕ ಪಡೆದಿದ್ದಾರೆ. ತೃತೀಯ ಸ್ಥಾನ ಪಡೆದಿದ್ದಾರೆ.
ಗಣಕ ವಿಜ್ಞಾನ ವಿಭಾಗದಲ್ಲಿ 98 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 97 ವಿದ್ಯಾರ್ಥಿಗಳು ಉತ್ತೀರ್ಣಗೊಂಡು, 99% ಶೇ. ಫಲಿತಾಂಶ ಬಂದಿರುತ್ತದೆ. ಇದರಲ್ಲಿ 35 ವಿಶಿಷ್ಠ ಶ್ರೇಣಿ, 59 ಪ್ರಥಮ ಶ್ರೇಣಿ,03. ದುರ್ಗಾಲಕ್ಷ್ಮಿ (583), ಶ್ರೀಶಾ.ಎಂ(579), ಸ್ವಸ್ತಿ ಎಸ್.ರೈ(573),ಕೀರ್ತನಾ ವಿ.ಎಸ್(572). ವಾಣಿಜ್ಯ ವಿಭಾಗದಲ್ಲಿ ಒಟ್ಟು 91 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಇವರಲ್ಲಿ 90 ವಿದ್ಯಾರ್ಥಿಗಳು ತೇರ್ಗಡೆಗೊಂಡು 99ಶೇ.ಫಲಿತಾಂಶ ಬಂದಿರುತ್ತದೆ. 10 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದುಕೊಂಡಿದ್ದು, ಪ್ರಥಮ ದರ್ಜೆಯಲ್ಲಿ 72 ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ. ಹೇಮಶ್ರೀ(571), ಚರಣ್.ಕೆ(547), ಭುವನೇಶ್ವರಿ.ಕೆ(539) ಅಂಕ ಪಡೆದರು. ಕಲಾವಿಭಾಗದಲ್ಲಿ ಒಟ್ಟು 84 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಇವರಲ್ಲಿ 81 ವಿದ್ಯಾರ್ಥಿಗಳು ತೇರ್ಗಡೆಗೊಂಡು, 98.80 ಶೇ.ಫಲಿತಾಂಶ ಬಂದಿರುತ್ತದೆ. ಇದರಲ್ಲಿ 13 ವಿಶಿಷ್ಠ ಶ್ರೇಣಿ, 54 ಮಂದಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಹೃತೀಶ್ ಪದ್ಮನಾಭ (575), ಸಾರಿಕಾ ಎನ್.ಎಸ್ (573), ಹಿತೇಶ್.ಎ(572), ಸಂಖ್ಯಾ ಜಿ.ಸಿ(566),ಅರ್ಪಿತಾ ಕೆ.ವಿ(564) ಅಂಕ ಪಡೆದರು.
ಐವರ್ನಾಡು ಸರಕಾರಿ ಪದವಿಪೂರ್ವ ಕಾಲೇಜಿಗೆ ಶೇ.100 ಫಲಿತಾಂಶ ಬಂದಿದೆ.ಕಲಾ ವಿಭಾಗದಲ್ಲಿ ಐದು ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಎಲ್ಲರೂ ಉತ್ತೀರ್ಣರಾಗಿ ಶೇ.100 ಫಲಿತಾಂಶ ಬಂದಿದೆ.
ಸೃಜನ್ 508 ಅಂಕ ,ಹಿತಾಶ್ರೀ 428 ಅಂಕ ಪಡೆದಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ 6 ಮಂದಿ ಪರೀಕ್ಷೆಗೆ ಹಾಜರಾಗಿದ್ದು ಎಲ್ಲರೂ ಉತ್ತೀರ್ಣರಾಗಿ ಶೇ.100 ಫಲಿತಾಂಶ ಬಂದಿದೆ.
ಸ್ನೇಹ 564 ಅಂಕ ಪಡೆದು ಡಿಸ್ಟಿಂಕ್ಷನ್ ನ್ ಪಡೆದಿದ್ದಾರೆ.
ಶೃತಿ 465 ಅಂಕ ಗಳಿಸಿದ್ದಾರೆ.
ಗುತ್ತಿಗಾರು ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ವಾಣಿಜ್ಯ ವಿಭಾಗ ಶೇ.96 ಹಾಗೂ ಕಲಾ ವಿಭಾಗ ಶೇ.96 ಫಲಿತಾಂಶ ದಾಖಲಾಗಿರುತ್ತದೆ. ಕಲಾ ವಿಭಾಗ ಹಾಗೂ ವಾಣಿಜ್ಯ ವಿಭಾಗದಿಂದ ಒಟ್ಟು 51 ವಿದ್ಯಾರ್ಥಿಗಳು ಹಾಜರಾಗಿದ್ದು 96 ಶೇಕಡಾ ಫಲಿತಾಂಶ ದಾಖಲಾಗಿದೆ. ಕಲಾ ವಿಭಾಗದಲ್ಲಿ ರಮ್ಯಾ.ಎನ್.ವಿ 560 ವಿಶಿಷ್ಟ ಶ್ರೇಣಿಯಲ್ಲಿ ಹಾಗೂ ಪ್ರಥಮ ಶ್ರೇಣಿಯಲ್ಲಿ 16 ದ್ವಿತೀಯ ದರ್ಜೆಯಲ್ಲಿ 06 ತೃತೀಯ ಶ್ರೇಣಿಯಲ್ಲಿ 02 ಹಾಗೂ ವಾಣಿಜ್ಯ ವಿಭಾಗ ದೇವಿಕಾ.ಕೆ 547, ಯುಕ್ತಿ.ಕೆ.ಎಂ 547, ದೀಕ್ಷಾ.ಕೆ.ಸಿ 545, ಪೂಜಾ.ಕೆ 526, ದೀಪಿಕಾ.ಹೆಚ್.ಪಿ 524, ಪ್ರಥಮ ಶ್ರೇಣಿಯಲ್ಲಿ 16 ದ್ವಿತೀಯ ಶ್ರೇಣಿಯಲ್ಲಿ 03 ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ.