ಸುಳ್ಯ:ಬೆಂಗಳೂರಿನ ಪ್ರಣವ ಫೌಂಡೇಶನ್ ವತಿಯಿಂದ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ‘ಗುರುವಂದನಾ’ ಕಾರ್ಯಕ್ರಮ ಇಂದು(ಸೆ.30) ಅ.2.30ಕ್ಕೆ ಸುಳ್ಯದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಲಿದೆ.ಸಮಾರಂಭದಲ್ಲಿ 60 ಮಂದಿ ಶಿಕ್ಷಕರನ್ನು ಸನ್ಮಾನಿಸಲಾಗುವುದು.ಸುಳ್ಯ ತಾಲೂಕಿನ ಅನುದಾನಿತ, ಅನುದಾನರಹಿತ, ಸರಕಾರಿ ಶಾಲೆ ಸೇರಿ ಒಟ್ಟು 20 ಶಿಕ್ಷಕರನ್ನು, ಅತ್ಯುತ್ತಮ ಸೇವೆ
ಸಲ್ಲಿಸುತ್ತಿರುವ 20 ಮಂದಿ ಅಂಗನವಾಡಿ ಕಾರ್ಯಕರ್ತೆಯವರನ್ನು, 20 ಮಂದಿ ವಿಕಲಾಂಗಚೇತನರ ಶಿಕ್ಷಕರನ್ನು ಸಮಾರಂಭದಲ್ಲಿ ಸನ್ಮಾನಿಸಲಾಗುವುದು. ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆ ವಹಿಸುವರು. ಎಲಿಮಲೆ ಜ್ಞಾನದೀಪ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ ತಳೂರು ಸನ್ಮಾನ ನೆರವೇರಿಸುವರು. ನಿವೃತ್ತ ಶಿಕ್ಷಕ ಪುರುಷೋತ್ತಮ ಕಿರ್ಲಾಯ ಅಭಿನಂದನಾ ಭಾಷಣ ಮಾಡುವರು. ಮುಖ್ಯ ಅತಿಥಿಗಳಾಗಿ ತಾ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಜಿ.ಪಂ.ಮಾಜಿ ಸದಸ್ಯ ಹರೀಶ್ ಕಂಜಿಪಿಲಿ, ವಿನೋಬನಗರ ವಿವೇಕಾನಂದ ವಿದ್ಯಾಸಂಸ್ಥೆಗಳ ಸಂಚಾಲಕ ಸುಧಾಕರ ಕಾಮತ್, ಸುಳ್ಯ ಸಿಡಿಪಿಒ ಶೈಲಜಾ ದಿನೇಶ್,ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಇ.ರಮೇಶ್ ಪ್ರಣವ ಫೌಂಡೇಷನ್ ಗೌರವ ಸಲಹಗಾರರಾದ ಪ್ರಸಾದ್ ಜೋಷಿ, ಟ್ರಸ್ಟಿ ಡಾ. ಅನುರಾಧಾ ಮಧುಗಿರಿ ಮತ್ತಿತರರು ಭಾಗವಹಿಸಲಿದ್ದಾರೆ
ಎಂದು ಕಾರ್ಯಕ್ರಮದ ಸಂಯೋಜಕರಾದ ಮಹೇಶ್ ಕುಮಾರ್ ರೈ ಮೇನಾಲ ಹಾಗೂ ಪ್ರಣವ ಫೌಂಡೇಶನ್ನ ಕಾರ್ಯದರ್ಶಿ ನಾಗರಾಜ್ ಹೆಬ್ಬಾಳ್ ತಿಳಿಸಿದ್ದಾರೆ.