ಸುಳ್ಯ:ಸುಳ್ಯದಲ್ಲಿ ಉಂಟಾಗಿರುವ ವಿದ್ಯುತ್ ಸಮಸ್ಯೆಯ ಬಗ್ಗೆ ಶಾಸಕಿ ಭಾಗೀರಥಿ ಮುರುಳ್ಯ ಅವರು ಮೆಸ್ಕಾಂ ಅಧಿಕಾರಿಗಳ ಸಭೆ ನಡೆಸಿ ಚರ್ಚಿಸಿದರು.ಧಾರಾಕಾರವಾಗಿ ಸುರಿದ ಮಳೆಯ ಪರಿಣಾಮವಾಗಿ ಸುಳ್ಯದ ಬಹುತೇಕ ಎಲ್ಲಾ ಕಡೆಗಳಲ್ಲಿ ಮರಬಿದ್ದು ವಿದ್ಯುತ್ ಕಂಬಗಳು ಹಾನಿಯಾದ ವರದಿಯನ್ನು ಮತ್ತು ಸಮಸ್ಯೆಗೊಳಗಾದ ಪ್ರದೇಶಕ್ಕೆ ಶೀಘ್ರ ವ್ಯವಸ್ಥೆಯನ್ನು
ಕಲ್ಪಿಸುವಂತೆ ಶಾಸಕರು ಮೆಸ್ಕಾಂ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು. ಮೆಸ್ಕಾಂ ಎಂಡಿ ಜಯಕುಮಾರ್ ಅವರಿಗೆ ಕರೆ ಮಾಡಿ ಸುಳ್ಯ ಕಡಬ ಭಾಗದಲ್ಲಿ ಖಾಲಿ ಇರುವ ಪವರ್ಮೆನ್ ಹುದ್ದೆಗಳಿಗೆ ನೇಮಕಗೊಂಡಿರುವ ನೌಕರನ್ನು ತಕ್ಷಣವೇ ಕೆಲಸಕ್ಕೆ ಹಾಜರಾಗಲು ಸೂಚಿಸುವಂತೆ ಎಂಡಿಯರಿಗೆ ತಿಳಿಸಿದರು. ಲೈನ್ಗೆ ಬೀಳಬಹುದಾದ ಮರಗಳನ್ನು ಕತ್ತರಿಸಲು ಬೇಕಾಗುವ ಎಲ್ಲಾ ನೆರವನ್ನು ನೀಡುವಂತೆ ಸಭೆಯಲ್ಲಿ ಹಾಜರಿದ್ದ ವಲಯ ಅರಣ್ಯಾಧಿಕಾರಿ ಎನ್. ಮಂಜುನಾಥ ಅವರಿಗೆ ಸೂಚಿಸಿದರು. ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಹರೀಶ್ ನಾಯ್ಕ್, ಸಹಾಯಕ ಇಂಜಿನಿಯರ್ ಸುಪ್ರೀತ್ ಮತ್ತಿತರರು ಚರ್ಚೆಯಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮುಖಂಡರಾದ ಹರೀಶ ಕಂಜಿಪಿಲಿ,ಚನಿಯ ಕಲ್ತಡ್ಕ,ಸುಧಾಕರ ಕುರುಂಜಿ, ಸಂತೋಷ ಕುತ್ತಮೊಟ್ಟೆ, ದಯಾನಂದ ಕುರುಂಜಿ ನೀಕೇಶ್ ಉಬರಡ್ಕ ಉಪಸ್ಥಿತರಿದ್ದರು.





