ಸುಳ್ಯ:ಏ.14ರಂದು ಸಂಜೆ ಬೀಸಿದ ಭಾರೀ ಗಾಳಿ ಮಳೆಗೆ ಸುಳ್ಯ ತಾಲೂಕಿನಲ್ಲಿ ವಿದ್ಯುತ್ ಕಂಬಗಳಿಗೆ, ಲೈನ್ಗಳಿಗೆ ವ್ಯಾಪಕ ಹಾನಿ ಸಂಭವಿಸಿದೆ. ಆದುದರಿಂದ ವಿವಿಧ ಕಡೆಗಳಲ್ಲಿ ವಿದ್ಯುತ್ ಸರಬರಾಜು ತಡವಾಗಲಿದೆ ಎಂದು ಮೆಸ್ಕಾಂ ಮಾಹಿತಿ ನೀಡಿದೆ. 33 ಕೆ.ವಿ.ಲೈನ್ನಲ್ಲಿ ಗುಡ್ಡಡ್ಕ ಎಂಬಲ್ಲಿ
ಮರದ ಗೆಲ್ಲು ಬಿದ್ದು ವಿದ್ಯುತ್ ಸರಬರಾಜು ಕಡಿತಗೊಂಡಿದೆ. ಅದನ್ನು ತೆರವು ಮಾಡುವ ಕೆಲಸ ನಡೆಯುತಿದೆ. ಅರ್ಧ ಗಂಟೆಯಲ್ಲಿ 33 ಕೆವಿ ಲೈನ್ ಚಾರ್ಜ್ ಆಗಲಿದೆ. ಆದರೆ 11 ಕೆವಿ ಲೈನಗಳಲ್ಲಿ ಅಲ್ಲಲ್ಲಿ ಮರ ಬಿದ್ದು , ಗಾಳಿಗೆ ಕಂಬ ತುಂಡಾಗಿ ಹಾನಿ ಸಂಭವಿಸಿದೆ. ಇದರಿಂದ ವಿವಿಧ ಕಡೆಗಳಲ್ಲಿ

ವಿದ್ಯುತ್ ಸರಬರಾಜು ತಡವಾಗಲಿದೆ. ಸುಳ್ಯ ತಾಲೂಕಿನಲ್ಲಿ 20ಕ್ಕೂ ಹೆಚ್ಚು ಹೆಚ್ಟಿ ಕಂಬಗಳು ಹಾಗೂ 40 ಎಲ್ಟಿ ಕಂಬಗಳಿಗೆ ಹಾನಿ ಸಂಭವಿಸಿದೆ. ಸುಳ್ಯ ನಗರದಲ್ಲಿ 4 ಎಚ್ಟಿ ಹಾಗೂ 4 ಎಲ್ಟಿ ಕಂಬಗಳಿಗೆ ಹಾನಿ ಉಂಟಾಗಿದೆ ಎಂದು ಮೆಸ್ಕಾಂ ಇಂಜಿನಿಯರ್ಗಳು ಮಾಹಿತಿ ನೀಡಿದ್ದಾರೆ. ಕಂಬಗಳು, ಲೈನ್ಗೆ ಹಾನಿ ಸಂಭವಿಸದ ಲೈನ್ಗಳಲ್ಲಿ ವಿದ್ಯುತ್ ಸರಬರಾಜು ಸಾಧ್ಯವಾಗಬಹುದು ಎಂದು ಮೆಸ್ಕಾಂ ಇಂಜಿನಿಯರ್ಗಳು ತಿಳಿಸಿದ್ದಾರೆ.
