ಸುಳ್ಯ:ದೀಪಾವಳಿ ಹಬ್ಬಕ್ಕೆ ಸುಳ್ಯದಲ್ಲಿ ಕತ್ತಲು ಕವಿದಿದೆ. ಪ್ರತಿ ದಿನವೂ ಸುಳ್ಯದಲ್ಲಿ ವಿದ್ಯುತ್ ಕಡಿತದ ಬರೆ ತಪ್ಪುವುದಿಲ್ಲ. ಇದೀಗ ದೀಪಗಳ ಹಬ್ಬಕ್ಕೆ ಎಲ್ಲೆಡೆ ಬೆಳಕು ಹರಿಯಬೇಕಾಗಿದ್ದರೆ, ಸುಳ್ಯದಲ್ಲಿ ಮಾತ್ರ ಕತ್ತಲು ತಪ್ಪುವುದಿಲ್ಲ. ಸಂಜೆ 6.30ರ ವೇಳೆಗೆ ವಿದ್ಯುತ್ ಕಡಿತಗೊಂಡಿದ್ದು ರಾತ್ರಿ ಒಂಭತ್ತು ಗಂಟೆಯಾದರೂ ಕರೆಂಟ್ ಬಂದಿಲ್ಲ. ದೀಪಾವಳಿ ಆರಂಭದಿಂದಲೇ
ಕತ್ತಲ ಹಬ್ಬ ಕೊಡಮಾಡಿದೆ. ಸುಳ್ಯ ನಗರದಾದ್ಯಂತ ಹಾಗೂ ತಾಲೂಕಿನ ವಿವಿಧ ಭಾಗಗಳಲ್ಲಿ ವಿದ್ಯುತ್ ಕಡಿತವಾಗಿದ್ದು ಎಲ್ಲೆಡೆ ಕತ್ತಲು ಕವಿದಿದೆ. ಮೈನ್ ಲೈನ್ ಸಮಸ್ಯೆ ಉಂಟಾದ ಕಾರಣ ವಿದ್ಯುತ್ ಕಡಿತ ಉಂಟಾಗಿದೆ ಎಂದು ಮೆಸ್ಕಾಂ ಇಂಜಿನಿಯರ್ಗಳು ತಿಳಿಸಿದ್ದಾರೆ. ವಾರದಲ್ಲಿ ಎರಡು ದಿನ ಅಧಿಕೃತ ವಿದ್ಯುತ್ ಕಡಿತ, ಅನಧಿಕೃತ ಕಡಿತ ಬೇರೆ. ಒಟ್ಟಿನಲ್ಲಿ ಯಾವಾಗ ಕರೆಂಟ್ ಇರಲ್ಲಾ ಎಂಬುದರ ಬದಲು ಯಾವಾಗ ಸುಳ್ಯದಲ್ಲಿ ಕರೆಂಟ್ ಇರುತ್ತದೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ನಿರಂತರ ವಿದ್ಯುತ್ ಕಡಿತದಿಂದ ಜನರು ರೋಸಿ ಹೋಗಿದ್ದಾರೆ.